ಬೆಂಗಳೂರು, ಏ: 5: ವೆಸ್ಟ್ ಇಂಡೀಸ್ ಸ್ಪಿನ್ನರ್ ಸುನೀಲ್ ನಾರಾಯಣ್ ಈ ಬಾರಿಯ ಐಪಿಎಲ್ ಆಡುವುದು ಖಚಿತವಾಗಿದೆ. ವಿವಾದಾತ್ಮಕ ಬೌಲಿಂಗ್ ಆಕ್ಷನ್ ಕುರಿತು ಬಿಸಿಸಿಐ ನಾರಾಯಣ್ ಗೆ ಕ್ಲೀನ್ ಚೀಟ್ ನೀಡಿದ್ದು ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪರವಾಗಿ ನಾರಾಯಣ್ ಆಡಲಿದ್ದಾರೆ.
ಚೆನ್ನೈನ ರಾಮಚಂದ್ರ ಯುನಿವರ್ಸಿಟಿ ಅಂಗಣದಲ್ಲಿ ನಾರಾಯಣ್ ಬೌಲಿಂಗ್ ಆಕ್ಷನ್ ಪರೀಕ್ಷೆ ನಡೆಸಲಾಯಿತು. ಜಾವಗಲ್ ಶ್ರೀನಾಥ್ ನೇತೃತ್ವದ ಸಮಿತಿ ನಾರಾಯಣ್ ಅವರನ್ನು ಪರೀಕ್ಷೆಗೆ ಒಳಪಡಿಸಿತ್ತು.[ಐಪಿಎಲ್ 2015: 8 ತಂಡಗಳ ನೂರೆಂಟು ಆಟಗಾರರು]
ಬಿಸಿಸಿಐ ನ ಈ ಕ್ರಮವನ್ನು ನಾವು ಸ್ವಾಗತಿಸುತ್ತೇವೆ. ಬಿಸಿಸಿಐ ಕಾರ್ಯದರ್ಶಿಗಳು ಸೇರಿದಂತೆ ಎಲ್ಲರೂ ವಿವಾದಕ್ಕೆ ಅಂತ್ಯ ಹಾಡಲು ಸಹಕರಿಸಿದ್ದಾರೆ ಎಂದು ನೈಟ್ ರೈಡರ್ಸ್ ತಂಡದ ಸಿಇಒ ವೆಂಕಿ ಮೈಸೂರು ಸಂತಸ ವ್ಯಕ್ತಪಡಿಸಿದ್ದಾರೆ.
ವಿವಾದಗಳೆಲ್ಲ ಬಗೆಹರಿದಿರುವುದರಿಂದ ಏಪ್ರಿಲ್ 8 ರ ಮುಂಬೈ ಇಂಡಿಯನ್ಸ್ ಎದುರಿಗಿನ ಪಂದ್ಯದಲ್ಲಿ ಸುನೀಲ್ ನಾರಾಯಣ್ ಆಡುವುದು ಬಹುದೇಕ ಖಚಿತವಾಗಿದೆ.