ಆರ್ ಸಿಬಿಯನ್ನು 5 ನೇ ಸ್ಥಾನಕ್ಕೆ ತಳ್ಳಿದ ವಾರ್ನರ್
ಹೈದ್ರಾಬಾದ್, ಮೇ. 12: ಹೈದ್ರಾಬಾದ್ ಮತ್ತು ಪಂಜಾಬ್ ನಡುವಿನ ರೋಚಕ ಹಣಾಹಣಿಯಲ್ಲಿ ಗೆಲುವು ದಕ್ಕಿಸಿಕೊಂಡ ವಾರ್ನರ್ ಪಡೆ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಲಗ್ಗೆ ಇಟ್ಟಿದೆ.
ಸೋಮವಾರ ನಡೆದ ಪಂದ್ಯದ ಕೊನೆಯಲ್ಲಿ ಆರ್ಭಟಿಸಿದ ಡೇವಿಡ್ ಮಿಲ್ಲರ್(89 ರನ್) ಪಂಜಾಬ್ ಕಿಂಗ್ಸ್ ಇಲೆವೆಲ್ ತಂಡದಲ್ಲಿ ಗೆಲುವುನ ಆಸೆ ಚಿಗುರಿಸಿದ್ದರು. ಕೊನೆಯ ಓವರ್ ನಲ್ಲಿ ಬರೋಬ್ಬರಿ 22 ರನ್ ಬಾಚಿದ ಪಂಜಾಬ್ ಕೇವಲ 5 ರನ್ ಗಳಿಂದ ಸೋಲೊಪ್ಪಿಕೊಂಡಿತು.[ಎಬಿ ಡಿ ಬಂದ ದಾರಿಬಿಡಿ, ಹೊಡಿ ಬಡಿ ಆಟ ನೋಡಿ]
ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ಹೈದ್ರಾಬಾದ್ ನಾಯಕ ಡೇವಿಡ್ ವಾರ್ನರ್ 81 ರನ್ ಕಾಣಿಕೆಯಿಂದ 185 ರನ್ ಗಳ ಮೊತ್ತ ದಾಖಲು ಮಾಡಿತ್ತಿ. ಇದನ್ನು ಬೆನ್ನು ಹತ್ತಿದ ಪಂಜಾಬ್ 180 ರನ್ ಗಳಿಸಲು ಶಕ್ತವಾಯಿತು.
ಈ ಗೆಲುವಿನ ಮುಖಾಂತರ ಹೈದ್ರಾಬಾದ್ ತನ್ನ ಪ್ಲೇ ಅಪ್ ಕನಸನ್ನು ಹಾಗೇ ಇಟ್ಟುಕೊಂಡಿದೆ. ರಾಜಸ್ಥಾನವನ್ನು 4 ನೇ ಸ್ಥಾನಕ್ಕೆ ದೂಡಿದೆ. ಹೈದ್ರಾಬಾದ್ ಗೆ ಇನ್ನು ಎರಡು ಪಂದ್ಯಗಳು ಬಾಕಿ ಇವೆ. ಮುಂಬೈ ವಿರುದ್ಧ ಗೆದ್ದು ಬೀಗಿದ್ದ ಬೆಂಗಳೂರು 5 ನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದು ಆರ್ ಸಿಬಿ ಬಳಿ ಇರುವುದು ಇನ್ನು ಒಂದೇ ಪಂದ್ಯ.

ವಾರ್ನರ್ ಆರ್ಭಟಕ್ಕೆ ಮಂಕಾದ ಪ್ರೀತಿ ಹುಡುಗರು
ಉತ್ತಮ ಆರಂಭ ಪಡೆದುಕೊಂಡ ಹೈದ್ರಾಬಾದ್ ಗೆ ಆರಂಭಿಕರಾದ ಡೇವಿಡ್ ವಾರ್ನರ್ ಮತ್ತು ಶಿಖರ್ ಧವನ್ ಜೊತೆಗೂಡಿ 6.1 ಓವರ್ ಗಳಲ್ಲಿ 54 ರನ್ ಪೇರಿಸಿದರು. ಧವನ್ ನಂತರ ಆಗಮಿಸಿದ ಹೆನ್ರಿಕ್ಸ್ ಸಹ ನಾಯಕನಿಗೆ ಉತ್ತಮ ಸಾಥ್ ನೀಡಿದರು. ಎರಡನೇ ವಿಕೆಟ್ 13 ನೇ ಓವರ್ ನಲ್ಲಿ ಪತನವಾದಾಗ ಹೈದ್ರಾಬಾದ್ 110 ರನ್ ಗಳಿಸಿತ್ತು.

ರಾಹುಲ್-ಕರಣ್ ಶರ್ಮಾ ಜುಗಲ್ ಬಂದಿ
ಹೈದ್ರಾಬಾದ್ ಇನಿಂಗ್ಸ್ ನ ಕೊನೆಯಲ್ಲಿ ಜತೆಯಾದ ಕನ್ನಡಿಗ ಕೆ.ಎಲ್. ರಾಹುಲ್ ಹಾಗೂ ಕರಣ್ ಶರ್ಮಾ ಜೋಡಿ ಮುರಿಯದ 16 ಎಸೆತಗಳಲ್ಲಿ 28 ರನ್ ಸೇರಿಸಿ, ತಂಡದ ಮೊತ್ತವನ್ನು 185ಕ್ಕೆ ಹೆಚ್ಚಿಸಿದರು.

ಪಂಜಾಬ್ ಆರಂಭ ಚೆನ್ನಾಗಿತ್ತು
ಆರಂಭಿಕರಾದ ಮುರಳಿ ವಿಜಯ್ ಹಾಗೂ ಮನನ್ ವೊಹ್ರಾ ಮೊದಲ ವಿಕೆಟ್ ಗೆ 42 ರನ್ ಜತೆಯಾಟ ನೀಡಿದರು. ಆದರೆ, ಬಿಪುಲ್ ಶರ್ಮಾ ಮಾರಕ ದಾಳಿಗೆ ಸಿಕ್ಕ ಆರಂಭಿಕರು ಒಂದೆ ಸಮಯದಲ್ಲಿ ವಿಕೆಟ್ ಒಪ್ಪಿಸಿದ್ದು ಪಂಜಾಬ್ ಗೆ ಹೊಡೆತ ನೀಡಿತು.

ಮಿಲ್ಲರ್ ಕಿಲ್ಲರ್ ಆಟ
ಪಂಜಾಬ್ ಮಧ್ಯಮ ಕ್ರಮಾಂಕದ ಆಟಗಾರರು ಹೆಚ್ಚು ಹೊತ್ತು ಕ್ರೀಸ್ ನಲ್ಲಿ ನಿಲ್ಲಲಿಲ್ಲ. ಹಿಂದಿನ ಪಂದ್ಯದಲ್ಲಿ ಆರ್ಭಟಿಸಿದ್ದ ಮಾಕ್ಸವೆಲ್ ಬೇಗನೇ ಪೆವಿಲಿಯನ್ ಸೇರಿಕೊಂಡರು. ಒಂದು ಕಡೆ ಗಟ್ಟಿಯಾಗಿ ನಿಂತ ಡೇವಿಡ್ ಮಿಲ್ಲರ್ ಹೈದ್ರಾಬಾದ್ ಬೌಲರ್ ಗಳ ಬೆವರಿಳಿಸಿದರು.

ಕೊನೆ ಓವರ್ ನಲ್ಲಿ 22 ರನ್!
ಕೊನೆ ಓವರ್ ನಲ್ಲಿ ಪಂಜಾಬ್ ಗೆ ಬೇಕಿದ್ದದ್ದು 28 ರನ್. ಇಶಾಂತ್ ಶರ್ಮಾ ಬಳಿ ಚೆಂಡಿದ್ದರೆ ಮಿಲ್ಲರ್ ಆಕ್ರಮಣಕ್ಕೆ ಸಿದ್ಧರಾಗಿದ್ದರು. ಕೊನೆ ಓವರ್ ನಲ್ಲಿ ಮಿಲ್ಲರ್ ಆರ್ಭಟಿಸಿದ ರೀತಿ ಟಿ-20ಯ ಮಜಾಕ್ಕೆ ನಿಜವಾದ ಉದಾಹರಣೆ. ಮೊದಲ ಮತ್ತು ಎರಡನೇ ಚೆಂಡನ್ನು ಮಿಲ್ಲರ್ ಸಿಕ್ಸರ್ ಗೆ ಅಟ್ಟಿದರು. ಆದರೆ ಮೂರನೇ ಎಸೆತ ಯಾರ್ಕರ್ ಆಗಿದ್ದು ಯಾವ ರನ್ ಬರಲಿಲ್ಲ. ಆದರೆ ನಾಲ್ಕನೇ ಎಸೆತವನ್ನು ಮಿಲ್ಲರ್ ಮತ್ತೆ ಬೌಂಡರಿಗೆ ಅಟ್ಟಿದರು. ಐದನೇ ಎಸೆತದಲ್ಲಿ ಯಾವುದೇ ರನ್ ಇಲ್ಲ. ಆದರೆ ಆರನೇ ಎಸೆತವನ್ನು ಮತ್ತೆ ಸಿಕ್ಸರ್ ಗೆ ಅಟ್ಟಿದ ಮಿಲ್ಲರ್ ತಮ್ಮ ಬ್ಯಾಟಿಂಗ್ ಪ್ರತಿಭೆ ಸಾಬೀತು ಮಾಡಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications