ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಭಾನುವಾರ ಒಂದು ಪಂದ್ಯ ನಡೆಯಲಿದೆ. ಹೈದರಾಬಾದ್‌ನಲ್ಲಿ ನಡೆಯಲಿರುವ ಪಂದ್ಯದಲ್ಲಿ ಹ್ಯಾಟ್ರಿಕ್ ಸೋಲು ಕಂಡಿರುವ ಸನ್‌ರೈಸರ್ಸ್ ಹೈದರಾಬಾದ್ ಹಾಗೂ ಗುಜರಾತ್ ಟೈಟನ್ಸ್ ತಂಡಗಳು ಕಾದಾಟ ನಡೆಸಲಿವೆ. ತವರಿನ ಅಭಿಮಾನಿಗಳ ಸಮ್ಮುಖದಲ್ಲಿ ಅಬ್ಬರದ ಪ್ರದರ್ಶನ ನೀಡಿ ಗೆಲುವು ದಾಖಲಿಸಿ ಅಂಕ ಪಟ್ಟಿಯಲ್ಲಿ ಬಡ್ತಿ ಪಡೆಯುವ ಕನಸು ಕಾಣುತ್ತಿದೆ.
ಸನ್‌ರೈಸರ್ಸ್ ಹಾಗೂ ಗುಜರಾತ್ ತಂಡಗಳು ಈ ವರೆಗೆ ಆಡಿದ 5 ಪಂದ್ಯಗಳಲ್ಲಿ ಜಿಟಿ 3 ರಲ್ಲಿ ಜಯ ಸಾಧಿಸಿದೆ. 1 ಪಂದ್ಯ ಹೈದರಾಬಾದ್ ಪಾಲಾಗಿದೆ. ಉಭಯ ತಂಡಗಳ ನಡುವಿನ ಕಾದಾಟದಲ್ಲಿ 199 ರನ್ ಬಿಗ್ ಸ್ಕೋರ್ ಆಗಿದೆ. ಎರಡೂ ತಂಡಗಳಲ್ಲಿ ಸ್ಟಾರ್ ಆಟಗಾರರು ಇದ್ದು ಭರವಸೆ ಮೂಡಿಸಿದ್ದಾರೆ.

ಹೈದರಾಬಾದ್‌ನಲ್ಲಿ ಪಿಚ್ ಬ್ಯಾಟರ್‌ಗಳಿ ಅನುವು ಮಾಡಿಕೊಡಲಿದೆ. ಈ ಮೈದಾಮದಲ್ಲಿ ಮೊದಲು ಬ್ಯಾಟ್ ಮಾಡಿದ ತಂಡ 213 ರನ್ ಕಲೆ ಹಾಕಿದೆ. ಉಪ್ಪಾಳ ಅಂಗಳದಲ್ಲಿ ನಡೆಯುತ್ತಿರುವ ಪ್ರಸಕ್ತ ಆವೃತ್ತಿಯ ಮೂರನೇ ಪಂದ್ಯ ಇದಾಗಿದೆ. ಈ ಪಿಚ್ ಇನ್ನು ಫ್ರೆಶ್ ಆಗಿದೆ. ಈ ಅಂಗಳದಲ್ಲಿ ಎಸ್‌ಆರ್‌ಎಚ್ ಅಬ್ಬರದ ಆರಂಭವನ್ನು ಪಡೆಯುವ ಇರಾದೆಯನ್ನು ಹೊಂದಿದೆ.
ಸನ್‌ರೈಸರ್ಸ್ ಹೈದರಾಬಾದ್ ತಂಡ ತನ್ನ ಬ್ಯಾಟಿಂಗ್‌ನಿಂದ ಅಭಿಮಾನಿಗಳ ಮನ ಗೆದ್ದ ತಂಡ. ಆದರೆ ಕಳೆದ ಮುರು ಪಂದ್ಯಗಳಲ್ಲಿ ಈ ತಂಡದ ಬ್ಯಾಟರ್‌ಗಳು ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ. ಹೀಗಾಗಿ ಈ ತಂಡದ ಸ್ಟಾರ್ ಆಟಗಾರರಾದ ಟ್ರಾವಿಸ್ ಹೆಡ್ ಹಾಗೂ ಅಭಿಷೇಕ್ ಶರ್ಮಾ ಮೇಲೆ ಒತ್ತಡ ಹೆಚ್ಚಿದೆ. ಮೊದಲ ಪಂದ್ಯದಲ್ಲಿ ಶತಕ ಬಾರಿಸಿ ಭರವಸೆ ಮೂಡಿಸಿದ್ದ ಇಶಾನ್ ಕಿಶನ್ ತಮ್ಮ ಲಯಕ್ಕೆ ಮರಳುವ ಅವಶ್ಯಕತೆ ಇದೆ. ಎಸ್‌ಆರ್‌ಎಚ್ ಪ್ರಸಕ್ತ ಆವೃತ್ತಿಯ ಐಪಿಎಲ್‌ನಲ್ಲಿ 10 ವಿಕೆಟ್‌ಗಳನ್ನು ಪವರ್ ಪ್ಲೇನಲ್ಲಿ ಕಳೆದುಕೊಂಡಿದೆ.
ಉಳಿದಂತೆ ಬೌಲರ್‌ಗಳು ಬಿಗುವಿನ ದಾಳಿ ನಡೆಸುವ ಅವಶ್ಯತೆಕ ಇದೆ. ಈ ಲೀಗ್‌ನಲ್ಲಿ ಎಸ್‌ಆರ್‌ಎಚ್ ತಂಡ ಡೆತ್ ಓವರ್‌ಗಳಲ್ಲಿ ಅತಿ ಹೆಚ್ಚು ರನ್‌ಗಳನ್ನು ನೀಡಿದ ತಂಡವಾಗಿದೆ. ಮೊಹಮ್ಮದ್ ಶಮಿ, ಪ್ಯಾಟ್ ಕಮಿನ್ಸ್ ಬಿಗುವಿನ ದಾಳಿ ನಡೆಸಬೇಕಿದೆ. ಹರ್ಷಲ್ ಪಟೇಲ್ ತಮ್ಮ ಮೇಲೆ ತಂಡ ಇಟ್ಟ ನಂಬಿಕೆಗೆ ಪೂರಕವಾಗಿ ಬ್ಯಾಟ್ ಮಾಡಬೇಕಿದೆ. ಜಯದೇವ್ ಉನದ್ಕಟ್ ಅವರು ಈ ಪಂದ್ಯದಲ್ಲಿ ಒಂದು ವಿಕೆಟ್ ಪಡೆಯುವಲ್ಲಿ ಸಫಲರಾದರೆ, ಐಪಿಎಲ್‌ನಲ್ಲಿ 100 ವಿಕೆಟ್ ಪಡೆದ ಸಾಧನೆಯನ್ನು ಮಾಡಲಿದ್ದಾರೆ.
ಎಸ್‌ಆರ್‌ಎಚ್ ಸಂಭಾವ್ಯ ತಂಡ: ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ನಿತೀಶ್ ರೆಡ್ಡಿ, ಕಮಿಂದು ಮೆಂಡಿಸ್, ಹೆನ್ರಿಚ್ ಕ್ಲಾಸೆನ್, ಅನಿಕೇತ್ ವರ್ಮಾ, ಪ್ಯಾಟ್ ಕಮಿನ್ಸ್ (ನಾಯಕ), ಹರ್ಷಲ್ ಪಟೇಲ್, ಜಯದೇವ್ ಉನದ್ಕತ್/ಸಿಮರ್ಜೀತ್ ಸಿಂಗ್ , ಮೊಹಮ್ಮದ್ ಶಮಿ .
ಗುಜರಾತ್ ಟೈಟನ್ಸ್ ಭರ್ಜರಿ ಫಾರ್ಮ್‌ನಲ್ಲಿದೆ. ಈ ತಂಡದ ಸ್ಟಾರ್ ಆಟಗಾರರು ಲಯದಲ್ಲಿರುವುದು ತಂಡದ ಚಿಂತೆಯನ್ನು ದೂರ ಮಾಡಿದೆ. ಆರಂಭಿಕರಾಗಿ ಕಾಣಿಸಿಕೊಳ್ಳುವ ಶುಭಮನ್ ಗಿಲ್ ಹಾಗೂ ಸಾಯಿ ಸುದರ್ಶನ್ ಉತ್ತಮ ಲಯದಲ್ಲಿದ್ದಾರೆ. ಸಾಯಿ ಸುದರ್ಶನ್ ಪ್ರಸಕ್ತ ಲೀಗ್‌ನಲ್ಲಿ ಅತಿ ಹೆಚ್ಚು ರನ್ ಕಲೆ ಹಾಕಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಮಾಡುವ ಜೋಸ್ ಬಟ್ಲರ್ ಭರವಸೆಯ ಮೂಡಿಸಿದ್ದಾರೆ. ಇವರು ಪಂದ್ಯದ ಗತಿಗೆ ಅನುಗುಣವಾಗಿ ಬ್ಯಾಟ್ ಮಾಡುವ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ.

ಮಧ್ಯಮ ಕ್ರಮಾಂಕದಲ್ಲಿ ಶೆರ್ಫಾನ್ ರುದರ್‌ಫೋರ್ಡ್, ಶಾರುಖ್ ಖಾನ್, ರಾಹುಲ್ ತೆವಾಟಿಯಾ ತಂಡಕ್ಕೆ ಆಧಾರವಾಗಬೇಕಿದೆ. ಇನ್ನು ಕಗಿಸೋ ರಬಾಡ ಅವರ ಬದಲಿಗೆ ಭಾನುವಾರದ ಪಂದ್ಯದಲ್ಲಿ ಗ್ಲೇನ್ ಫಿಲಿಪ್ಸ್‌ಗೆ ಅವಕಾಶ ಸಿಗುವ ಸಾಧ್ಯತೆ ಇದೆ. ಇವರ ಸೊಗಸಾದ ಫೀಲ್ಡಿಂಗ್‌ಗೆ ಹೆಸರುವಾಸಿ. ಅರ್ಷದ್ ಖಾನ್ ಸಹ ತಮ್ಮ ಸ್ಥಾನವನ್ನು ಉಳಿಸಿಕೊಳ್ಳುವ ಕನಸಿನಲ್ಲಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಮೊಹಮ್ಮದ್ ಸಿರಾಹ್ ಹಾಗೂ ಕರ್ನಾಟಕದ ಪ್ರಸಿದ್ಧ ಕೃಷ್ಣಾ ಬಿಗುವಿನ ದಾಳಿ ನಡೆಸಿ ಗಮನ ಸೆಳೆದಿದ್ದಾರೆ. ಸಾಯಿ ಕಿಶೋರ್ ಉತ್ತಮವಾಗಿ ಸ್ಪಿನ್ ಬೌಲಿಂಗ್ ನಡೆಸುತ್ತಿದ್ದಾರೆ. ರಶೀದ್ ಖಾನ್ ತಮ್ಮ ಲಯವನ್ನು ಕಂಡುಕೊಳ್ಳುವ ಅನಿವಾರ್ಯತೆ ಇದೆ.
ಈ ಪಂದ್ಯದಲ್ಲಿ ಮೊಹಮ್ಮದ್ ಸಿರಾಜ್ 2 ವಿಕೆಟ್ ಕಬಳಿಸಿದರೆ, ಐಪಿಎಲ್‌ನಲ್ಲಿ 100 ವಿಕೆಟ್ ಪಡೆದ ಸಾಧನೆಯನ್ನು ಮಾಡಲಿದ್ದಾರೆ.
ಪಂಜಾಬ್ ಸಂಭಾವ್ಯ ತಂಡ: ಸಾಯಿ ಸುದರ್ಶನ್, ಶುಭಮನ್ ಗಿಲ್ (ನಾಯಕ), ಜೋಸ್ ಬಟ್ಲರ್ (ವಿಕೆಟ್ ಕೀಪರ್), ಶೆರ್ಫಾನ್ ರುದರ್‌ಫೋರ್ಡ್, ಶಾರುಖ್ ಖಾನ್, ರಾಹುಲ್ ತೆವಾಟಿಯಾ, ಗ್ಲೆನ್ ಫಿಲಿಪ್ಸ್/ಅರ್ಷದ್ ಖಾನ್, ರಶೀದ್ ಖಾನ್, ಸಾಯಿ ಕಿಶೋರ್, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಇಶಾಂತ್ ಶರ್ಮಾ.
ವಿಕೆಟ್ ಕೀಪರ್ಸ್: ಉಭಯ ತಂಡದಲ್ಲಿರುವ ವಿಕೆಟ್‌ಗಳು ತಮ್ಮ ಕ್ಷಮತೆಯನ್ನು ಈಗಾಗಲೇ ತೋರಿಸಿದ್ದಾರೆ. ಜೋಸ್ ಬಟ್ಲರ್ ಭರ್ಜರಿ ಫಾರ್ಮ್‌ನಲ್ಲಿದ್ದು ಅವರ ಆಯ್ಕೆ ಅನಿವಾರ್ಯ. ಇನ್ನು ಹೆನ್ರಕ್ ಕ್ಲಾಸೆನ್ ಹಾಗೂ ಇಶಾನ್ ಕಿಶನ್ ಯಾವುದೇ ಪರಿಸ್ಥಿತಿಯಲ್ಲಾದ್ರೂ ಮಿಂಚಬಲ್ಲ ಆಟಗಾರರು.

ಬ್ಯಾಟರ್ಸ್: ಹೈದರಾಬಾದ್‌ನಲ್ಲಿ ಪಂದ್ಯ ನಡೆಯಲಿದ್ದು ಬ್ಯಾಟರ್‌ಗಳಿಗೆ ಇದು ಅನುಕೂಲವಾಗಲಿದೆ. ಹೀಗಾಗಿ ಟ್ರಾವಿಸ್ ಹೆಡ್ ಆಯ್ಕೆ ಮಾಡುವುದು ಸೂಕ್ತ. ಇನ್ನು ಸಾಯಿ ಸುದರ್ಶನ್ ಅವರ ಫಾರ್ಮ್ ನೋಡಿದರೆ ಅವರಿಗೆ ಸ್ಥಾನ ನೀಡಬೇಕು. ಇನ್ನು ಶುಭಮನ್ ಗಿಲ್ ಸಹ ಬ್ಯಾಟಿಂಗ್ ಪಿಚ್‌ನಲ್ಲಿ ಉತ್ತಮವಾಗಿ ಆಡುತ್ತಾರೆ ಹೀಗಾಗಿ ಈ ಮೂವರನ್ನು ಇಟ್ಟುಕೊಳ್ಳುವುದು ಬೆಸ್ಟ್.
ಆಲ್‌ರೌಂಡರ್ಸ್: ಆಲ್‌ರೌಂಡರ್‌ಗಳಾ ಅಭಿಷೇಕ್ ಶರ್ಮಾ ಹಾಗೂ ನಿತೀಶ್ ಕುಮಾರ್ ರೆಡ್ಡಿ ಒಳ್ಳೆಯ ಆಯ್ಕೆ.
ಬೌಲರ್ಸ್: ಬೌಲಿಂಗ್‌ನಲ್ಲಿ ಮೊಹಮ್ಮದ್ ಸಿರಾಜ್, ರಶೀದ್ ಖಾನ್ ಅವರನ್ನು ಸೇರಿಸಿಕೊಳ್ಳುವುದು ಒಳ್ಳೆಯ ನಿರ್ಧಾರ. ಇನ್ನು ಹರ್ಷಲ್ ಪಟೇಲ್ ಡೆತ್ ಓವರ್‌ಗಳಲ್ಲಿ ಬಿಗುವಿನ ದಾಳಿ ನಡೆಸಬಲ್ಲರು.
ನಾಯಕ, ಉಪನಾಯಕ ಯಾರು?: ಜೋಸ್ ಬಟ್ಲರ್ ಇಲ್ಲವೇ ಟ್ರಾವಿಸ್ ಹೆಡ್ ಅವರಿಗೆ ನಾಯಕರನ್ನಾಗಿ ಮಾಡುವುದು ಉತ್ತಮ ಆಯ್ಕೆ. ಉಪನಾಯಕರಾಗಿ ಸಾಯಿ ಸುದರ್ಶನ್ ಒಳ್ಳೆಯ ಚಾಯ್ಸ್.