ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮುಂಬೈ ಇಂಡಿಯನ್ಸ್‌ಗೆ ಸೋಲುಣಿಸಿದ ಹೈದರಾಬಾದ್ ಬೌಲರ್‌ಗಳು

sunrisers-hyderabad-won-the-match-against-mumbai-indians

ಕಡಿಮೆ ಮೊತ್ತದ ಸ್ಕೋರು ಬೋರ್ಡ್‌ ಮೇಲಿದ್ದರು ಆತ್ಮವಿಶ್ವಾಸದಿಂದ ಬೌಲಿಂಗ್ ನಡೆಸಿದ ಹೈದರಾಬಾದ್ ತಂಡದ ಬೌಲರ್‌ಗಳು ಮುಂಬೈ ತಂಡಕ್ಕೆ ಸೋಲುಣಿಸಿದರು.

ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡಿದ ಹೈದರಾಬಾದ್ ತಂಡ ಕೇವಲ 118 ರನ್ ಗಳಿಸಿತ್ತು, ಆದರೆ ಮುಂಬೈ ತಂಡವನ್ನು ಕೇವಲ 87 ರನ್‌ಗಳಿಗೆ ಆಲ್‌ಔಟ್ ಮಾಡುವ ಮೂಲಕ ಐಪಿಲ್‌ನ ಅತ್ಯುತ್ತಮ ಬೌಲರ್‌ಗಳ ತಂಡ ತಮ್ಮದೆಂದು ಹೈದರಾಬಾದ್ ಸಾಬೀತು ಮಾಡಿಕೊಂಡಿತು.

ಪಂದ್ಯದ ಸ್ಕೋರ್ ಕಾರ್ಡ್

ಮೊದಲಿಗೆ ಮುಂಬೈ ಬೌಲರ್‌ಗಳು ಹೈದರಾಬಾದ್ ಬ್ಯಾಟ್ಸ್‌ಮನ್‌ಗಳನ್ನು 118 ರನ್‌ಗೆ ಆಲ್‌ಔಟ್ ಮಾಡಿದರೆ ಅವರಿಗೇನು ಕಮ್ಮಿ ಎಂಬಂತೆ ಬೌಲ್ ಮಾಡಿದ ಹೈದರಾಬಾದ್ ತಂಡ ಇನ್ನೂ ಎಂಟು ಎಸೆತ ಬಾಕಿ ಇರುವಂತೆಯೇ ಮುಂಬೈ ಅನ್ನು 87 ರನ್‌ಗೆ ಆಲ್‌ಔಟ್ ಮಾಡಿ, 31 ರನ್‌ಗಳಿಂದ ವಿಜಯ ಸಾಧಿಸಿತು.ಹೈದರಾಬಾದ್ ಪರ ಅತ್ಯುತ್ತಮ ಬೌಲಿಂಗ್ ದಾಳಿ ನಡೆಸಿದ ರಶೀದ್ ಖಾನ್ 4 ಓವರ್‌ ಬೌಲ್ ಮಾಡಿ ಕೇವಲ 11 ರನ್ ನೀಡಿ 2 ವಿಕೆಟ್ ಕಬಳಿಸಿದರು. ಸಿದ್ದಾರ್ಥ್ ಕೌಲ್ ನಾಲ್ಕು ಓವರ್‌ಗೆ 23 ರನ್ ನೀಡಿ 3 ವಿಕೆಟ್ ಕಬಳಿಸಿದರು.ಸಂದೀಪ್ ಶರ್ಮಾ ಮೂರು ಓವರ್‌ಗೆ ನೀಡಿದ್ದು ಕೇವಲ 9 ರನ್, ಶಕೀಬ್ ಉಲ್ ಹಸನ್ ಮೂರು ಓವರ್‌ಗೆ 16 ರನ್ ನೀಡಿ ಒಂದು ವಿಕೆಟ್ ಗಳಿಸಿದರು. ಬಾಸಿಲ್ ತಂಪಿ 1.3 ಓವರ್‌ನಲ್ಲಿ 2 ವಿಕೆಟ್ ಕಬಳಿಸಿದರು.

ಮುಂಬೈ ತಂಡದ ಪರ ಯಾವೊಬ್ಬ ಬ್ಯಾಟ್ಸ್‌ಮನ್‌ಗಳೂ ಕುಡ ಹೋರಾಟದ ಕುರುಹು ಸಹ ತೋರಲಿಲ್ಲ. ಸೂರ್ಯಕುಮಾರ್ ಯಾದವ್ 34 ರನ್ ಗಳಿಸಿದ್ದು ಬಿಟ್ಟರೆ ಮತ್ಯಾವ ಬ್ಯಾಟ್ಸ್‌ಮನ್‌ಗಳೂ ಸಹ ಹೈದರಾಬಾದ್ ಬೌಲರ್‌ಗಳನ್ನು ಎದುರಿಸಿ ನಿಲ್ಲಲಿಲ್ಲ. ಕೃನಾಲ್ ಪಾಂಡ್ಯಾ ಮಾತ್ರ 24 ರನ್ ಗಳಿಸಿದರು.

ಹೈದಬಾರಾದ್ ತಂಡದ ಪರ ವಿಲಿಮ್ಸ್‌ನ್ 29 ಹಾಗೂ ಯೂಸಫ್ ಪಠಾಣ್ 29 ಗಳಿಸಲಷ್ಟೆ ಶಕ್ತರಾಗಿದ್ದರು. ಒಟ್ಟಿನಲ್ಲಿ ಇಂದಿನ ಮ್ಯಾಚ್‌ನಲ್ಲಿ ಸಂಪೂರ್ಣ ಬೌಲರ್‌ಗಳದ್ದೇ ಪಾರುಪತ್ಯ ನಡೆದಿತ್ತು. ಎರಡೂ ತಂಡಗಳು ಆಲ್‌ಔಟ್ ಆಗಿದ್ದು ಈ ಪಂದ್ಯದ ವಿಶೇಷ.

Story first published: Wednesday, April 25, 2018, 7:01 [IST]
Other articles published on Apr 25, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X