ಟಾಸ್ ಗೆದ್ದ ಸನ್ ರೈಸರ್ಸ್ ಹೈದರಾಬಾದ್ ತಂಡ ಬೌಲಿಂಗ್ ಆಯ್ಕೆ

Posted By:
IPL 2018 : KKR opts bowling after winning toss | Oneindia Kannada

ರಾಜಸ್ಥಾನ ರಾಯಲ್ಸ್‌ ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಂಡದ ನಡುವಣ ಐಪಿಎಲ್ ಟಿ20 ಪಂದ್ಯದಲ್ಲಿ ಹೈದರಾಬಾದ್ ತಂಡವು ಟಾಸ್ ಗೆದ್ದಿದ್ದು, ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.

ಐಪಿಎಲ್ 2018ರ ನಾಲ್ಕನೇ ಪಂದ್ಯ ಇದಾಗಿದ್ದು, ರಾಜಸ್ಥಾನದ ಅಜಿಂಕ್ಯಾ ರಹಾನೆ ಮತ್ತು ಹೈದರಾಬಾದ್‌ನ ಕೇನ್ ವಿಲಿಯಮ್ಸ್‌ ಇಬ್ಬರೂ ಮೊದಲ ಬಾರಿಗೆ ಐಪಿಎಲ್‌ನಲ್ಲಿ ನಾಯಕತ್ವ ವಹಿಸಿದ್ದಾರೆ, ಹಾಗಾಗಿ ಇಬ್ಬರಿಗೂ ಇದು ಮಹತ್ವದ ಪಂದ್ಯ ಎನಿಸಿದೆ,.

ಪಂದ್ಯವು ಹೈದರಾಬಾದ್‌ನ ರಾಜೀವ್ ಗಾಂಧಿ ಸ್ಟೇಡಿಯಂನಲ್ಲಿ ನಡೆಯುತ್ತಿದ್ದು, ಪಿಚ್‌ನ ಪರಿಸ್ಥಿತಿಗೆ ಅನುಗುಣವಾಗಿ ಹೈದರಾಬಾದ್ ತಂಡವು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಈ ವರೆಗೂ ನಡೆದಿರುವ ಮೂರು ಪಂದ್ಯಗಳಲ್ಲಿ ಎರಡನೇ ಬ್ಯಾಟಿಂಗ್ ಮಾಡಿರುವ ತಂಡ ಗೆದ್ದಿದ್ದು, ಈ ಪಂದ್ಯದಲ್ಲಿ ಏನಾಗುತ್ತದೆ ಕಾದು ನೋಡಬೇಕಿದೆ.

Sunrisers Hyderabad won the toss and choose to bowl

ಎರಡೂ ತಂಡವು ಮೇಲ್ನೋಟಕ್ಕೆ ಸಮಬಲವಿದೆ. ತವರಿನ ಪಿಚ್‌ನ ಪರಿಸ್ಥಿತಿಯ ಲಾಭ ಹೈದರಾಬಾದ್‌ಗೆ ದೊರಕುತ್ತಿದೆ.
ಎರಡೂ ತಂಡಗಳ ಆಡುವ 11 ಆಟಗಾರರ ಪಟ್ಟಿ ಇಂತಿವೆ...

ಸ್ಕೋರ್ ಕಾರ್ಡ್ ಹಾಗೂ ಕಾಮೆಂಟ್ರಿ

ರಾಜಸ್ಥಾನ ರಾಯಲ್ಸ್‌
ಅಜಿಂಕ್ಯಾ ರಹಾನೆ (ನಾಯಕ), ಎಕ್ರಿ ಶಾರ್ಟ್, ಸಂಜು ಸ್ಯಾಮ್ಸನ್, ಬೆನ್ ಸ್ಟೋಕ್ಸ್‌, ರಾಹುಲ್ ತ್ರಿಪಾಟಿ, ಜಾಸ್ ಬಟ್ಲರ್ (ಕೀಪರ್), ಕೆ.ಗೌತಮ್, ಶ್ರೇಯಸ್ ಗೋಪಾಲ್, ಧವಲ್ ಕುಲಕರ್ಣಿ, ಜಯದೇವ್ ಉನದ್ಕತ್, ಬೆನ್ ಲಾಲಿಂಗ್.

ಸನ್‌ ರೈಸರ್ಸ್ ಹೈದರಾಬಾದ್
ಕೇನ್ ವಿಲಿಯಮ್‌ಸನ್ (ನಾಯಕ), ಶಿಖರ್ ಧವನ್ , ಮನೀಷ್ ಪಾಂಡೆ, ದೀಪಕ್ ಹೂಡಾ, ಯೂಸಫ್ ಪಠಾಣ್, ಶಕೀಬ್ ಉಲ್ ಹಸನ್, ವೃದ್ಧಿಮಾನ್ ಸಹ(ಕೀಪರ್), ರಶೀದ್ ಖಾನ್, ಭುವನೇಶ್ವರ್ ಕುಮಾರ್, ಬಿಲ್ಲಿ ಸ್ಟಾನ್‌ಲೆಕ್, ಸಿದ್ದಾರ್ಥ ಕೌಲ್.

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Monday, April 9, 2018, 19:53 [IST]
Other articles published on Apr 9, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ