ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸಮಬಲದ ಹೋರಾಟ, ಹೈದರಾಬಾದ್‌ ಗೆಲ್ಲುವ ಫೇವರೇಟ್

By Manjunatha
IPL 2018 : SRH vs RR what to expect ? | Oneindia Kannada

ಇಂದು ಸನ್‌ರೈಸಸ್ ಹೈದರಾಬಾದ್ ಮತ್ತು ರಾಜಸ್ಥಾನ ರಾಯಲ್ಸ್ ತಂಡದ ನಡುವೆ ಪಂದ್ಯ ನಡೆಯಲಿದೆ. ಹೈದರಾಬಾದ್‌ಗೆ ತಂಡಕ್ಕೆ ಇದು ತವರು ಪಂದ್ಯವಾಗಿದ್ದು ಅವರೇ ಗೆಲ್ಲುವ ಫೇವರೇಟ್‌ಗಳಾಗಿದ್ದಾರೆ.

ಡೇವಿಡ್ ವಾರ್ನರ್‌ ಅಲಭ್ಯರಾಗಿರುವ ಕಾರಣ ನ್ಯೂಜಿಲೆಂಡ್‌ನ ಕೇನ್ ವಿಲಿಮ್‌ಸನ್ ಅವರು ಪಂದ್ಯದ ನಾಯಕತ್ವದ ಹೊಣೆ ಹೊತ್ತಿದ್ದು, ಶಿಖರ್ ಧವನ್ ಅವರು ಉಪನಾಯಕ ಸ್ಥಾನದಲ್ಲಿದ್ದಾರೆ.

ರಾಜಸ್ಥಾನ ರಾಯಲ್ಸ್‌ ಕಡೆ ಮೊದಲ ಬಾರಿಗೆ ಅಜಿಂಕ್ಯಾ ರಹಾನೆ ನಾಯಕನ ಟೋಪಿ ಧರಿಸಿ ಕಣಕ್ಕಿಳಿಯಲಿದ್ದಾರೆ. ಅಲ್ಲಿ ಸ್ಟೀವ್ ಸ್ಮಿತ್ ಸ್ಥಾನವನ್ನು ಅವರು ತುಂಬುತ್ತಿದ್ದಾರೆ.

ಎರಡೂ ತಂಡಗಳು ಸಾಕಷ್ಟು ಯುವ ಪ್ರತಿಭೆಗಳನ್ನು ಹೊಂದಿದ್ದ ಜೊತೆಗೆ ಅಂತರರಾಷ್ಟ್ರೀಯ ಮಟ್ಟದ ಸ್ಟಾರ್ ಆಟಗಾರರನ್ನು ಹೊಂದಿ ಸಮತೋಲಿತ ತಂಡಗಳಾಗಿವೆ. ಎರಡೂ ತಂಡಗಳ ನಡುವೆ ಜಿದ್ದಾಜಿದ್ದಿನ ಹೋರಾಟ ನಿರೀಕ್ಷಿಸಬಹುದಾಗಿದ್ದು, ಆದರೆ ತವರಿನ ಪಿಚ್‌ನ ಲಾಭವನ್ನು ಹೈದರಾಬಾದ್ ತಂಡ ಪಡೆದುಕೊಳ್ಳಲಿದೆ.

ಹೈದರಾಬಾದ್ ಲೀಡಿಂಗ್‌ನಲ್ಲಿ

ಹೈದರಾಬಾದ್ ಲೀಡಿಂಗ್‌ನಲ್ಲಿ

ರಾಜಸ್ಥಾನ ಮತ್ತು ಹೈದರಾಬಾದ್ ತಂಡಗಳು ಪರಸ್ಪರ ಎದುರಾದಾಗ ಹೈದರಬಾದ್ ತಂಡ ಹೆಚ್ಚು ಬಾರಿ ವಿಜಯ ಸಾಧಿಸಿದೆ. ಅದರಲ್ಲಿಯೂ ತವರಿನಲ್ಲಿ ಈವರೆಗೆ ನಡೆದಿರುವ 30 ಪಂದ್ಯಗಳಲ್ಲಿ 20 ಈ ತಂಡ ಗೆದ್ದಿದೆ. ರಾಜಸ್ಥಾನ ತಂಡವು ಹೈದರಾಬಾದ್‌ನಲ್ಲಿ ಈವರೆಗೆ ಗೆದ್ದಿರುವುದು ಎರಡು ಬಾರಿ ಮಾತ್ರ.

ಟಾಸ್ ಗೆದ್ದವರೇ ಪಂದ್ಯ ಗೆಲ್ಲುವ ಸಾಧ್ಯತೆ

ಟಾಸ್ ಗೆದ್ದವರೇ ಪಂದ್ಯ ಗೆಲ್ಲುವ ಸಾಧ್ಯತೆ

ಈ ವರೆಗೆ ಐಪಿಎಲ್ 11 ರಲ್ಲಿ ಆಡಲಾಗಿರುವ ಮೂರೂ ಪಂದ್ಯಗಳಲ್ಲಿ ಟಾಸ್ ಗೆದ್ದ ತಂಡವೇ ಪಂದ್ಯ ಗೆದ್ದಿದೆ. ಇನ್ನೂ ನಿರ್ದಿಷ್ಟವಾಗಿ ಹೇಳಬೇಕೆಂದರೆ ಚೇಸಿಂಗ್ ಆಯ್ಕೆ ಮಾಡಿಕೊಂಡ ತಂಡವೇ ವಿಜಯಿಯಾಗಿದೆ ಹಾಗಾಗಿ ಟಾಸ್ ಸಹ ಈ ಪಂದ್ಯದಲ್ಲಿ ಬಹು ಮುಖ್ಯ ಪಾತ್ರ ವಹಿಸಲಿದೆ.

150 ಹೊಡೆದರೆ ಗೆಲುವು ಹೈದರಾಬಾದ್‌ನದ್ದೇ!

150 ಹೊಡೆದರೆ ಗೆಲುವು ಹೈದರಾಬಾದ್‌ನದ್ದೇ!

ಈ ಪಂದ್ಯದ ಮೂಲಕ ಯೂಸಫ್ ಪಠಾಣ್ ಅವರ 150ನೇ ಪಂದ್ಯ. ರಾಜಸ್ಥಾನ ತಂಡದ ನಾಯಕ ರಹಾನೆಯನ್ನು ಭುವನೇಶ್ವರ್ ಕುಮಾರ್ 6 ಬಾರಿ ಔಟ್ ಮಾಡಿದ್ದಾರೆ ಅದೂ ತಮ್ಮ ಮೊದಲನೇ ಓವರ್‌ನಲ್ಲೇ. ಹೈದರಾಬಾದ್ ನಲ್ಲಿ 150 ರನ್ ಮೊತ್ತವನ್ನು ಯಾರೂ ಚೇಸ್ ಮಾಡಿಯೇ ಇಲ್ಲ. ಹೈದರಾಬಾದ್ ತಂಡ 150 ಹೊಡೆದರೆ ಗೆಲುವು ಅವರದ್ದೇ.

ಮಿಂಚುವ ಸಾಧ್ಯತೆ

ಮಿಂಚುವ ಸಾಧ್ಯತೆ

ಹೈದರಾಬಾದ್ ಪರ ಶಿಖರ್ ಧವನ್ , ಕರ್ನಾಟಕದ ಮನೀಷ್ ಪಾಂಡೆ, ಶಕಿಬ್ ಅಲ್ ಹಸನ್, ಭುವನೇಶ್ವರ್ ಕುಮಾರ್, ನಾಯಕ ಕೇನ್ ವಿಲಿಯಮ್‌ಸನ್‌ ಅವರುಗಳು ಕೀ ಆಟಗಾರರು. ರಾಜಸ್ಥಾನ ತಂಡದ ಪರ ಅಜಿಂಕ್ಯಾ ರಹಾನೆ, ಸಂಜು ಸ್ಯಾಮ್‌ಸನ್, ಬೆನ್ ಸ್ಟೋಕ್ಸ್, ಬಟ್ಲರ್, ಕರ್ನಾಟಕದ ಕೆ.ಗೌಥಮ್, ಶ್ರೇಯಸ್ ಗೋಪಾಲ್, ಕ್ಲಾಸೇನ್ ಅವರುಗಳು ಕೀ ಆಟಗಾರಾಗಿದ್ದಾರೆ.

Story first published: Monday, April 9, 2018, 16:36 [IST]
Other articles published on Apr 9, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X