ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪಾಕ್ ಸೋಲಿಗೆ ಕಾರಣವಾಯ್ತೆ 'ಸೂಪರ್ ಮ್ಯಾನ್ ಮಸ್ರಾಫೆ' ಹಿಡಿದ ಕ್ಯಾಚ್?!

Superman Mashrafe Mortaza pulls off catch of the tournament

ದುಬೈ, ಸೆಪ್ಟೆಂಬರ್ 27: ಬಾಂಗ್ಲಾದೇಶ ಮತ್ತು ಪಾಕಿಸ್ತಾನ ನಡುವಿನ ಏಷ್ಯಾ ಕಪ್ ಸೂಪರ್ ಫೋರ್ 6ನೇ ಮತ್ತು ಅಂತಿಮ ಪಂದ್ಯದಲ್ಲಿ ಬಾಂಗ್ಲಾ ತಂಡ ಪಾಕಿಸ್ತಾನ ವಿರುದ್ಧ ಗೆಲುವು ದಾಖಲಿಸಿ ಫೈನಲ್ ಗೆ ಪ್ರವೇಶಿಸಿತ್ತು. ಆ ಪಂದ್ಯದಲ್ಲಿ ಪಾಕ್ ಸೋಲಿಗೆ ಕಾರಣವಾಗಿದ್ದು ಮಸ್ರಾಫೆ ಮೊರ್ತಾಜೋ ಹಿಡಿದ ಅತ್ಯದ್ಭುತ ಕ್ಯಾಚ್.

ವಿಂಡೀಸ್ ಸರಣಿಗೂ ಮುನ್ನ ವಿರಾಟ್ ಯೋ ಯೋ ಟೆಸ್ಟ್ ಪಾಸಾಗಬೇಕಿದೆ!ವಿಂಡೀಸ್ ಸರಣಿಗೂ ಮುನ್ನ ವಿರಾಟ್ ಯೋ ಯೋ ಟೆಸ್ಟ್ ಪಾಸಾಗಬೇಕಿದೆ!

ಟಾಸ್ ಗೆದ್ದು ಬ್ಯಾಟಂಗ್ ಗೆ ಇಳಿದ ಬಾಂಗ್ಲಾದೇಶ 48.5 ಓವರ್ ಗೆ ಎಲ್ಲಾ ವಿಕೆಟ್ ಕಳೆದು 239 ರನ್ ಪೇರಿಸಿ ಪಾಕ್ ಗೆ 240 ರನ್ ಗುರಿ ನೀಡಿತ್ತು. ಆದರೆ ಫೈನಲ್ ಪ್ರವೇಶಿಸಲು ಪ್ರಮುಖವೆನಿದ್ದ ಪಂದ್ಯದಲ್ಲೇ ಪಾಕ್ 202 ರನ್ ಪೇರಿಸಿ 37 ರನ್ ಗಳಿಂದ ಬಾಂಗ್ಲಾ ಎದುರು ಶರಣಾಗಿತ್ತು.

ಹಾಗೆ ನೋಡಿದರೆ ಪಾಕಿಸ್ತಾನಕ್ಕೆ 240 ರನ್ ಗುರಿ ಅಂಥದ್ದೇನೂ ಸವಾಲಿನದ್ದಾಗಿರಲಿಲ್ಲ. ಆದರೆ ಪಾಕ್ ಇನ್ನಿಂಗ್ಸ್ ವೇಳೆ ಬಾಂಗ್ಲಾ ಮಾರಕ ಬೌಲಿಂಗ್ ದಾಳಿ ನಡೆಸಿತ್ತು. ಜೊತೆಗೆ ನಾಯಕ ಮಸ್ರಾಫೆ ಮೊರ್ತಾಜೋ ಅದ್ಭುತ ಕ್ಯಾಚ್ ಹಿಡಿದು ಪಾಕ್ ಅಪಾಯಕಾರಿ ಆಟಗಾರ ಶೋಯೇಬ್ ಮಲ್ಲಿಕ್ ಅವರನ್ನು ಪೆವಿಲಿಯನ್ ಗೆ ಅಟ್ಟಿದ್ದರು. ಇದೂ ಪಾಕ್ ಸೋಲಿಗೆ ಕಾರಣವಾಯ್ತು.

ಶೋಯೆಬ್ ಮಲ್ಲಿಕ್ ಅವರು ಸೋಲುವ ಪಾಕ್ ತಂಡವನ್ನು ಹಲವುಬಾರಿ ಗೆಲ್ಲಿಸಿದ್ದಿದೆ. ಸೆಪ್ಟೆಂಬರ್ 26ರ ಪಂದ್ಯದ ಪಾಕ್ ಇನ್ನಿಂಗ್ಸ್ ನಲ್ಲಿ ರುಬೆಲ್ ಹುಸೈನ್ ಅವರ (20ನೇ) ಓವರ್ ನಲ್ಲಿ ಮಲ್ಲಿಕ್ ಬ್ಯಾಟ್ ತಾಗಿದ ಚೆಂಡು ಚಿಮ್ಮಿ ಬಂತು. ಆಗ ಮಸ್ರಾಫೆ ಸ್ಪೈಡರ್ ಮ್ಯಾನ್, ಸೂಪರ್ ಮ್ಯಾನ್ ನೆನಪಿಸುವ ಹಾಗೆ ಅದ್ಭುತ ರೀತಿಯಲ್ಲಿ ಜಿಗಿದು ಕ್ಯಾಚ್ ಮಾಡಿದರು. ಅಲ್ಲಿಗೆ ಪಾಕ್ ಸೋಲಿನತ್ತ ಮುಖ ಮಾಡಿತು.

ಒಂದುವೇಳೆ ಮಸ್ರಾಫೆ ಅವರು ಮಲ್ಲಿಕ್ ಅವರ ಕ್ಯಾಚ್ ಡ್ರಾಪ್ ಮಾಡಿದ್ದರೆ, ಮಲ್ಲಿಕ್ ಹೆಚ್ಚು ಹೊತ್ತು ಕ್ರೀಸ್ ನಲ್ಲಿ ಇರುತ್ತಿದ್ದರು. ಇದು ಪಂದ್ಯವನ್ನು ಇನ್ನೊಂದು ದಿಕ್ಕಿನತ್ತ ತಿರುಗಿಸುತ್ತಿತ್ತು. ಫೈನಲ್ ನಲ್ಲಿ ಭಾರತ-ಪಾಕ್ ಮುಖಾಮುಖಿಯಾಗುವ ಸಾಧ್ಯತೆಯಿತ್ತು. ಆದರೆ ಮೊರ್ತಾಜೋ ಅದಕ್ಕೆ ಅವಕಾಶವೇ ನೀಡಲಿಲ್ಲ!

Story first published: Thursday, September 27, 2018, 16:25 [IST]
Other articles published on Sep 27, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X