
ಜೈಪುರ್, ಮೇ 9: ಜೈಪುರ್‌ನ ಸವಾಯ್ ಮಾನ್‌ಸಿಂಗ್ ಸ್ಟೇಡಿಯಂನಲ್ಲಿ ಗುರುವಾರ (ಮೇ 9) ನಡೆದ ಮಹಿಳಾ ಟಿ20 ಚಾಲೆಂಜ್ 3ನೇ ಪಂದ್ಯದಲ್ಲಿ ವೆಲಾಸಿಟಿ ವಿರುದ್ಧ ಸೂಪರ್ ನೋವಾಸ್ 12 ರನ್ ಜಯಗಳಿಸಿದೆ. ಜೆಮಿಮಾ ರೋಡ್ರಿಗಸ್ ಅವರ ಅಜೇಯ ಅರ್ಧಶತಕದಾಟ ತಂಡಕ್ಕೆ ಮೊದಲ ಗೆಲುವು ತಂದಿತು.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಸೂಪರ್‌ನೋವಾಸ್‌ಗೆ ಆರಂಭಿಕ ಆಟಗಾರ್ತಿ ಪ್ರಿಯಾ ಪೂನಿಯಾ 16, ಚಾಮರಿ ಅಥಪತ್ತು 31, ಜಮಿಮಾ ರೋಡ್ರಿಗಸ್ 77 ರನ್ (48 ಎಸೆತ) ಸೇರಿಸಿದರು. ತಂಡ 20 ಓವರ್‌ನಲ್ಲಿ 3 ವಿಕೆಟ್ ನಷ್ಟಕ್ಕೆ 142 ರನ್ ಬಾರಿಸಿತು.
ಗುರಿ ಬೆನ್ನಟ್ಟಿದ ವೆಲಾಸಿಟಿಗೆ ಡೇನಿಯಲ್ ವ್ಯಾಟ್ 43, ನಾಯಕಿ ಮಿಥಾಲಿ ರಾಜ್ 40, ವೇದಾ ಕೃಷ್ಣಮೂರ್ತಿ 30 ರನ್ ಸೇರಿಸಿ ಗೆಲುವಿನ ನೆಲೆಯಲ್ಲಿ ಹೋರಾಟ ನಡೆಸಿದರಾದರೂ ಅದು ನೆರವಿಗೆ ಬರಲಿಲ್ಲ. ವೆಲಾಸಿಟಿ 20 ಓವರ್‌ಗೆ 3 ವಿಕೆಟ್ ನಷ್ಟದಲ್ಲಿ 130 ರನ್ ಬಾರಿಸಿ ಶರಣಾಯಿತು.
ಉತ್ತಮ ಬ್ಯಾಟಿಂಗ್‌ಗಾಗಿ ಜೆಮಿಮಾ ರೋಡ್ರಿಗಸ್ ಪಂದ್ಯಶ್ರೇಷ್ಠೆ ಪ್ರಶಸ್ತಿ ಪಡೆದುಕೊಂಡರು. ಮೇ 11ರ ಶನಿವಾರ ಜೈಪುರ್‌ನ ಸವಾಯ್ ಮಾನ್‌ಸಿಂಗ್ ಸ್ಟೇಡಿಯಂನಲ್ಲಿ ನಡೆಯಲಿರುವ ಫೈನಲ್ ಹಣಾಹಣಿಯಲ್ಲಿ ಸೂಪರ್ ನೋವಾಸ್ ಮತ್ತು ವೆಲಾಸಿಟಿ ತಂಡಗಳು ಕಾದಾಡಲಿವೆ.
ವೆಲಾಸಿಟಿ ತಂಡ: ಹೇಲೆ ಮ್ಯಾಥ್ಯೂಸ್, ಶಫಾಲಿ ವರ್ಮಾ, ಡೇನಿಯಲ್ ವ್ಯಾಟ್, ಮಿಥಾಲಿ ರಾಜ್ (ಸಿ), ವೇದಾ ಕೃಷ್ಣಮೂರ್ತಿ, ಸುಷ್ಮಾ ವರ್ಮಾ (ವಿಕೆ), ಶಿಖಾ ಪಾಂಡೆ, ಜಹನರಾ ಆಲಂ, ಅಮೆಲಿಯಾ ಕೆರ್, ಕೋಮಲ್ ಜಂಜಾದ್, ಏಕ್ತಾ ಬಿಶ್ತ್.
ಸೂಪರ್ ನೋವಾಸ್ ತಂಡ: ಪ್ರಿಯಾ ಪೂನಿಯಾ, ಚಾಮರಿ ಅಥಪಥು, ಜೆಮಿಮಾ ರೋಡ್ರಿಗಸ್, ಹರ್ಮನ್‌ಪ್ರೀತ್ ಕೌರ್ (ಸಿ), ನಟಾಲಿ ಸಿವಿಯರ್, ಸೋಫಿ ಡೆವೈನ್, ಲೀ ತಾಹುಹು, ತಾನಿಯ ಭಾಟಿಯಾ (ವಿಕೆ), ಅನುಜಾ ಪಾಟೀಲ್, ಪೂನಮ್ ಯಾದವ್, ರಾಧಾ ಯಾದವ್.