ವಿಮೆನ್ಸ್ ಟಿ20 ಚಾಲೆಂಜ್: ಟ್ರಯಲ್‌ಬ್ಲೇಜರ್ಸ್ ವಿರುದ್ಧ ಸೂಪರ್‌ನೊವಾಗೆ ರೋಚಕ ಗೆಲುವು

ಶಾರ್ಜಾ ಕ್ರಿಕೆಟ್ ಮೈದಾನದಲ್ಲಿ ನಡೆದ ವಿಮೆನ್ಸ್ ಟಿ20 ಚಾಲೆಂಜ್‌ನ ಮೂರನೇ ಪಂದ್ಯದಲ್ಲಿ ಟ್ರಯಲ್‌ಬ್ಲೇಜರ್ಸ್ ವಿರುದ್ಧ ರೋಚಕ ಗೆಲುವು ಸಾಧಿಸಿದ ಹಾಲಿ ಚಾಂಪಿಯನ್ ಸೂಪರ್‌ನೊವಾ ಫೈನಲ್ ಪ್ರವೇಶಿಸಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡು ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಸೂಪರ್‌ನೊವಾ ತಂಡ ನಿಗದಿತ 20 ಓವರ್‌ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 146 ರನ್ ಕಲೆಹಾಕಿತು. ತಂಡದ ಪರ ಪ್ರಿಯಾ ಪುನಿಯಾ 30, ಅಟ್ಟಪಟ್ಟು 67, ಹರ್ಮನ್‌ಪ್ರೀತ್ ಕೌರ್ 31ರನ್ ಕಲೆಹಾಕಿದ್ರು. ಉಳಿದ ಬ್ಯಾಟ್‌ವುಮೆನ್ಸ್ ರನ್‌ಗಳಿಸಲು ವಿಫಲಗೊಂಡರು.
ಸೂಪರ್‌ನೊವಾ ನೀಡಿದ 147ರನ್ ಗುರಿ ಬೆನ್ನತ್ತಿದ ಸ್ಮೃತಿ ಮಂದಾನ ನೇತೃತ್ವದ ಟ್ರಯಲ್‌ಬ್ಲೇಜರ್ಸ್ ಉತ್ತಮ ಆರಂಭ ಪಡೆದರೂ ಕೊನೆಯಲ್ಲಿ ಎಡವಿತು. ಕೊನೆಯ ಓವರ್‌ನಲ್ಲಿ 10 ರನ್ ಗಳಿಸಲು ಸಾಧ್ಯವಾಗದೇ ಮುಗ್ಗರಿಸಿತು. ತಂಡದ ಗೆಲುವಿಗೆ ಕೊನೆಯ ಎರಡು ಎಸೆತಗಳಲ್ಲಿ ನಾಲ್ಕು ರನ್ಗಳ ಅಗತ್ಯವಿತ್ತು. ಆದರೆ 19.5ನೇ ಓವರ್‌ನಲ್ಲಿ ರಾಧಾ ಯಾದವ್ ಬೌಲಿಂಗ್‌ನಲ್ಲಿ 27ರನ್‌ಗಳಿಸಲು ಹರ್ಲೀನ್ ಔಟ್ ಆದ್ರು. ಕೊನೆಯ ಎಸೆತದಲ್ಲಿ ನಾಲ್ಕು ರನ್‌ಗಳಿಸಲು ಸಾಧ್ಯವಾಗದೇ ಟ್ರಯಲ್‌ಬ್ಲೇಜರ್ಸ್ ಸೋಲನ್ನೊಪ್ಪಿಕೊಂಡಿತು.
ಟ್ರಯಲ್‌ಬ್ಲೇಜರ್ಸ್ ಪರ ಸ್ಮೃತಿ ಮಂದಾನ 33, ದಿಯಾಂಡ್ರಾ ದಾಟಿನ್ 27 ಹಾಗೂ ದೀಪ್ತಿ ಶರ್ಮ ಅಜೇಯ 43, ಹರ್ಲೀನ್ 27ರನ್ ಕಲೆಹಾಕಿದರು.
ಸೂಪರ್‌ನೊವಾ ಪರ ಅಂತಿಮ ಓವರ್‌ನಲ್ಲಿ 10ರನ್‌ಗಳನ್ನು ಡಿಫೆಂಡ್ ಮಾಡಿಕೊಂಡ ಸ್ಪಿನ್ನರ್ ರಾಧಾ ಯಾದವ್ ತಂಡಕ್ಕೆ ಗೆಲುವು ತಂದುಕೊಟ್ಟರು. ಈ ಗೆಲುವಿನೊಂದಿಗೆ ಸೂಪರ್‌ನೊವಾ ಫೈನಲ್ ಪ್ರವೇಶಿಸಿದ್ದು, ಅದಾಗಲೇ ಒಂದು ಪಂದ್ಯ ಗೆದ್ದಿರುವ ಟ್ರಯಲ್ ಬ್ಲೇಜರ್ಸ್ ನೆಟ್‌ರನ್‌ರೇಟ್ ಆಧಾರದಲ್ಲಿ ಪಂದ್ಯ ಮುಗಿಯುವ ಮೊದಲೇ ಫೈನಲ್ ಟಿಕೆಟ್ ಪಡೆದಿತ್ತು. ಮಿಥಾಲಿ ರಾಜ್ ನೇತೃತ್ವದ ವೆಲಾಸಿಟಿ ಟೂರ್ನಿಯಿಂದ ಹೊರಬಿದ್ದಿದೆ.
ನವೆಂಬರ್ 9ರಂದು ಶಾರ್ಜಾ ಮೈದಾನದಲ್ಲೇ ನಡೆಯಲಿರುವ ಫೈನಲ್‌ನಲ್ಲಿ ಟ್ರಯಲ್‌ಬ್ಲೇಜರ್ಸ್ ಮತ್ತು ಸೂಪರ್‌ನೊವಾ ಮುಖಾಮುಖಿಯಾಗಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications