For Quick Alerts
ALLOW NOTIFICATIONS  
For Daily Alerts
 

ಇತಿಹಾಸದ ಈ ದಿನ: ಆಪ್ತಮಿತ್ರ ಎಂಎಸ್ ಧೋನಿ ಜೊತೆಗೆ ಕ್ರಿಕೆಟ್ ವೃತ್ತಿಜೀವನಕ್ಕೆ ನಿವೃತ್ತಿ ಘೋಷಿಸಿದ ಸುರೇಶ್ ರೈನಾ

ಹಾಲಿ ಭಾರತ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರ ನಾಯಕತ್ವದಲ್ಲಿ 2005ರಲ್ಲಿ ಎಡಗೈ ಸ್ಫೋಟಕ ಬ್ಯಾಟರ್ ಸುರೇಶ್ ರೈನಾ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು.

ನಂತರ, ಎಂಎಸ್ ಧೋನಿಯ ನಾಯಕತ್ವದಲ್ಲಿ ಸುರೇಶ್ ರೈನಾ ಪ್ರವರ್ಧಮಾನಕ್ಕೆ ಬಂದರು, ವೈಟ್ ಬಾಲ್ ಕ್ರಿಕೆಟ್‌ನಲ್ಲಿ ಸ್ಫೋಟಕ ಬ್ಯಾಟಿಂಗ್‌ನಿಂದಾಗಿ ಹೆಸರುವಾಸಿಯಾದರು.

ಸುರೇಶ್ ರೈನಾ ಅವರು 2011ರಲ್ಲಿ ಏಕದಿನ ವಿಶ್ವಕಪ್ ಮತ್ತು 2013ರಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದ ಭಾರತ ತಂಡದ ಭಾಗವಾಗಿದ್ದರು. ಎಂಎಸ್ ಧೋನಿ ಮತ್ತು ಸುರೇಶ್ ರೈನಾ ಉತ್ತಮ ಒಡನಾಟ ಹೊಂದಿದ್ದರು ಮತ್ತು ಇವರಿಬ್ಬರ ಜೊತೆಯಾಟವು ಇತ್ತೀಚಿನ ವರ್ಷಗಳಲ್ಲಿ ಭಾರತ ತಂಡವು ಅನೇಕ ಪಂದ್ಯಗಳನ್ನು ಗೆದ್ದುಕೊಂಡಿತು.

suresh-raina-announced-retirement

ಸುರೇಶ್ ರೈನಾ ಅವರು ತಮ್ಮ ಸಹೋದರ ಹಾಗೂ ಮಾರ್ಗದರ್ಶಕ ಎಂದು ಪರಿಗಣಿಸುವ ಎಂಎಸ್ ಧೋನಿಯನ್ನು ಯಾವಾಗಲೂ ಹೊಗಳುತ್ತಾರೆ. ರೈನಾ ತನ್ನ ಕೊನೆಯ ಅಂತಾರಾಷ್ಟ್ರೀಯ ಪಂದ್ಯವನ್ನು 2018ರಲ್ಲಿ ಆಡಿದರು. ಮತ್ತೆ ಭಾರತೀಯ ತಂಡದಲ್ಲಿ ತನ್ನ ಸ್ಥಾನವನ್ನು ಮರಳಿ ಪಡೆಯಲು ಹೋರಾಡುತ್ತಿದ್ದರು.

ಅದು ಸಾಧ್ಯವಾಗದೆ, ಆಗಸ್ಟ್ 15, 2020ರಂದು ಎಂಎಸ್ ಧೋನಿ ನಿವೃತ್ತರಾದ ಕೆಲವೇ ನಿಮಿಷಗಳ ನಂತರ, ಸುರೇಶ್ ರೈನಾ ಅವರು ಅಂತಾರಾಷ್ಟ್ರೀಯ ವೃತ್ತಿಜೀವನದ ಮೇಲೆ ತೆರೆ ಎಳೆಯಲು ನಿರ್ಧರಿಸಿದರು.

ಎಂಎಸ್ ಧೋನಿಯಂತೆ ಸುರೇಶ ರೈನಾ ಕೂಡ ತಮ್ಮ ನಿವೃತ್ತಿಯನ್ನು ಪ್ರಕಟಿಸಲು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಹಂಚಿಕೊಂಡರು. "ನನ್ನ ಹೃದಯ ತುಂಬಿದ ಹೆಮ್ಮೆಯಿಂದ, ನಾನು ಈ ಪ್ರಯಾಣದಲ್ಲಿ ನಿಮ್ಮೊಂದಿಗೆ ಸೇರಲು ಬಯಸುತ್ತೇನೆ" ಎಂದು ಉತ್ತರಪ್ರದೇಶದ ಎಡಗೈ ಬ್ಯಾಟರ್ ಸುರೇಶ್ ರೈನಾ ಬರೆದುಕೊಂಡರು.

ಸುರೇಶ್ ರೈನಾ ಅವರ ಅಂತಾರಾಷ್ಟ್ರೀಯ ಕ್ರಿಕೆಟ್‌ನ ಅಂಕಿಅಂಶ
ಭಾರತೀಯ ಅಭಿಮಾನಿಗಳು ಮತ್ತು ಕ್ರಿಕೆಟ್ ಪರಿಣಿತರು ಸುರೇಶ್ ರೈನಾ ಅವರನ್ನು ಭಾರತದ ಅತ್ಯುತ್ತಮ ಟಿ20 ಆಟಗಾರ ಎಂದು ಪರಿಗಣಿಸುತ್ತಾರೆ. ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಅವರ ಸ್ಥಿರತೆ ಆಟದಿಂದ 'ಮಿ. ಐಪಿಎಲ್' ಎಂಬ ಬಿರುದು ಪಡೆದರು.

2010ರಲ್ಲಿ ಸುರೇಶ್ ರೈನಾ ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಎಲ್ಲಾ ಮೂರು ಸ್ವರೂಪಗಳಲ್ಲಿ ಶತಕ ಬಾರಿಸಿದ ಮೊದಲ ಭಾರತೀಯ ಆಟಗಾರ ಎನಿಸಿದರು. ಇನ್ನು ಟಿ20 ಸ್ವರೂಪದಲ್ಲಿ ಭಾರತದ ಪರ ಶತಕ ಬಾರಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೂ ಸುರೇಶ್ ರೈನಾ ಪಾತ್ರರಾಗಿದ್ದರು.

ವೃತ್ತಿಜೀವನದ ಕೊನೆಯ ಹಂತದಲ್ಲಿ ಸುರೇಶ್ ರೈನಾ ಶಾರ್ಟ್ ಬಾಲ್‌ ಎದುರಿಸುವಲ್ಲಿ ಸಮಸ್ಯೆಗಳನ್ನು ಹೊಂದಿದ್ದರು. ಆದರೆ ಅವರು ತಮ್ಮ ದೌರ್ಬಲ್ಯವನ್ನು ನಿಭಾಯಿಸುವಲ್ಲಿ ಯಶಸ್ವಿಯಾದರು ಮತ್ತು ಕೆಲವು ಸ್ಮರಣೀಯ ಪ್ರದರ್ಶಣ ನೀಡಿದರು.

ಸುರೇಶ್ ರೈನಾ ಅವರು 226 ಏಕದಿನ ಪಂದ್ಯಗಳಲ್ಲಿ 35.31ರ ಸರಾಸರಿ ಮತ್ತು 93.51ರ ಸ್ಟ್ರೈಕ್‌ರೇಟ್‌ನಲ್ಲಿ 5615 ರನ್ ಗಳಿಸಿದ್ದಾರೆ. ಇನ್ನು 78 ಟಿ20 ಪಂದ್ಯಗಳಲ್ಲಿ 36 ವರ್ಷದ ಸುರೇಶ್ ರೈನಾ 29.16ರ ಸರಾಸರಿ ಮತ್ತು 134.79ರ ಸ್ಟ್ರೈಕ್ ರೇಟ್‌ನಲ್ಲಿ 1604 ರನ್ ಬಾರಿಸಿದ್ದಾರೆ.

ಸುರೇಶ್ ರೈನಾ ಅವರು ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್, ಗೌತಮ್ ಗಂಭೀರ್, ಯುವರಾಜ್ ಸಿಂಗ್ ಮತ್ತು ಎಂಎಸ್ ಧೋನಿ ಅವರಂತಹ ದಿಗ್ಗಜರೊಂದಿಗೆ ಹಲವಾರು ವರ್ಷಗಳ ಕಾಲ ಆಡಿದರು. ಸದ್ಯ ನೆದರ್ಲ್ಯಾಂಡ್ಸ್‌ನ ರಾಜಧಾನಿ ಆಮ್ಸ್ಟರ್‌ಡಾಮ್‌ನಲ್ಲಿ ಹೊಸ ರೆಸ್ಟೋರೆಂಟ್ ಆರಂಭಿಸಿದ್ದಾರೆ.

Story first published: Tuesday, August 15, 2023, 15:34 [IST]
Other articles published on Aug 15, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+