ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್‌ನಲ್ಲಿ 200ನೇ ಸಿಕ್ಸರ್ ಸಿಡಿಸಿದ ಆಲ್‌ರೌಂಡರ್ ಸುರೇಶ್ ರೈನಾ

Suresh Raina becomes 4th Indian batsman to enter 200 sixers list in IPL

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಲ್‌ರೌಂಡರ್ ಸುರೇಶ್ ರೈನಾ ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಮಹತ್ವದ ಮೈಲಿಗಲ್ಲೊಂದನ್ನು ದಾಟಿದ್ದಾರೆ. ಐಪಿಎಲ್‌ನಲ್ಲಿ 200 ಸಿಕ್ಸರ್ ಬಾರಿಸಿದ ಆಟಗಾರರ ಪಟ್ಟಿಗೆ ರೈನಾ ಸೇರಿಕೊಂಡಿದ್ದಾರೆ. ಈ ಸಾಧನೆ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಎರಡನೇ ಆಟಗಾರ ಎನಿಸಿಕೊಂಡಿದ್ದಾರೆ ಸುರೇಶ್ ರೈನಾ.

ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಸುರೇಶ್ ರೈನಾ ಅದ್ಭುತ ಪ್ರದರ್ಶನ ನೀಡಿದ್ದಾರೆ. ಈ ಬ್ಯಾಟಿಂಗ್ ಸಂದರ್ಭದಲ್ಲಿ ರೈನಾ 3 ಭರ್ಜರಿ ಸಿಕ್ಸರ್ ಸಿಡಿಸಿದರು. ವಾಶಿಂಗ್ಟನ್ ಸುಂದರ್ ಅವರ ಎಸೆತವೊಂದನ್ನು ಲಾಂಗ್‌ಆನ್‌ನ ಸ್ಟಾಂಡ್‌ನತ್ತ ನೇರವಾಗಿ ಬಾರಿಸುವ ಮೂಲಕ ರೈನಾ ಈ ಸಾಧನೆಯನ್ನು ಮಾಡಿದ್ದಾರೆ.

ಐಪಿಎಲ್ 2021: ವಾಂಖೆಡೆಯಲ್ಲಿ ರವೀಂದ್ರ ಜಡೇಜಾ ರೌದ್ರಾವತಾರ, ಆರ್‌ಸಿಬಿಗೆ ಸೋಲುಐಪಿಎಲ್ 2021: ವಾಂಖೆಡೆಯಲ್ಲಿ ರವೀಂದ್ರ ಜಡೇಜಾ ರೌದ್ರಾವತಾರ, ಆರ್‌ಸಿಬಿಗೆ ಸೋಲು

ಸುರೇಶ್ ರೈನಾ ಅವರು 200 ಸಿಕ್ಸರ್‌ಗಳ ಈ ಮೈಲಿಗಲ್ಲನ್ನು 198ನೇ ಪಂದ್ಯದಲ್ಲಿ ಸಾಧಿಸಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ ತಂಡದ ಎರಡನೇ ಆಟಗಾರನಾಗಿ ರೈನಾ ಈ ಸಾಧನೆ ಮಾಡಿದ್ದಾರೆ. 209 ಪಂದ್ಯಗಳನ್ನು ಆಡಿರುವ ಎಂಎಸ್ ಧೋನಿ 217 ಸಿಕ್ಸರ್ ಸಿಡಿಸಿ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

ಐಪಿಎಲ್‌ನಲ್ಲಿ ಈ ಮಹತ್ವದ ಮೈಲಿಗಲ್ಲನ್ನು ದಾಟಿದ ನಾಳಕ್ನೇ ಭಾರತೀಯ ಆಟಗಾರನಾಗಿದ್ದಾರೆ ಸುರೇಶ್ ರೈನಾ. ಎಂಎಸ್ ಧೋನಿ, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಈ ಸಾಧನೆ ಮಾಡಿದ ಉಳಿದ ಭಾರತೀಯ ಆಟಗಾರರಾಗಿದ್ದಾರೆ. ಸಿಕ್ಸರ್ ಸಿಡಿಸಿದ ಒಟ್ಟಾರೆ ಆಟಗಾರರ ಪಟ್ಟಿಯಲ್ಲಿ 137 ಪಂದ್ಯಗಳಲ್ಲಿ 354 ಸಿಕ್ಸರ್ ಸಿಡಿಸಿದ ಕ್ರಿಸ್ ಗೇಲ್ ಮೊದಲ ಸ್ಥಾನದಲ್ಲಿದ್ದಾರೆ.

ಟಿ20Iನಲ್ಲಿ ಕೊಹ್ಲಿ ಹೆಸರಿನಲ್ಲಿದ್ದ ದಾಖಲೆ ಮುರಿದ ಬಾಬರ್ ಅಜಂಟಿ20Iನಲ್ಲಿ ಕೊಹ್ಲಿ ಹೆಸರಿನಲ್ಲಿದ್ದ ದಾಖಲೆ ಮುರಿದ ಬಾಬರ್ ಅಜಂ

ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚಿ ಸಿಕ್ಸರ್ ಸಿಡಿಸಿದ ಆಟಗಾರರ ಪಟ್ಟಿ:

ಕ್ರಿಸ್ ಗೇಲ್ - 137 ಪಂದ್ಯಗಳಲ್ಲಿ 354 ಸಿಕ್ಸರ್
ಎಬಿ ಡಿವಿಲಿಯರ್ಸ್ - 174 ಪಂದ್ಯಗಳಲ್ಲಿ 240 ಸಿಕ್ಸರ್
ರೋಹಿತ್ ಶರ್ಮಾ - 205 ಪಂದ್ಯಗಳಲ್ಲಿ 222 ಸಿಕ್ಸರ್
ಎಂ.ಎಸ್.ಧೋನಿ - 209 ಪಂದ್ಯಗಳಲ್ಲಿ 217 ಸಿಕ್ಸರ್
ವಿರಾಟ್ ಕೊಹ್ಲಿ- 197 ಪಂದ್ಯಗಳಲ್ಲಿ 204 ಸಿಕ್ಸರ್
ಕೀರನ್ ಪೊಲಾರ್ಡ್ - 169 ಪಂದ್ಯಗಳಲ್ಲಿ 202 ಸಿಕ್ಸರ್
ಸುರೇಶ್ ರೈನಾ - 198 ಪಂದ್ಯಗಳಲ್ಲಿ 202 ಸಿಕ್ಸರ್

Story first published: Monday, April 26, 2021, 9:36 [IST]
Other articles published on Apr 26, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X