ಐಪಿಎಲ್ 2020: ಚೆನ್ನೈಗೆ ಪ್ರಯಾಣ ಬೆಳೆಸಿದ ಸಿಎಸ್‌ಕೆ ತಾರೆಯರು

ಐಪಿಎಲ್ ಆವೃತ್ತಿಯಲ್ಲಿ ಪಾಲ್ಗೊಳ್ಳುವ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ ತಂಡ ಚೆನ್ನೈನಲ್ಲಿ ಪೂರ್ವಭಾವಿ ಶಿಬಿರವನ್ನು ಹಮ್ಮಿಕೊಂಡಿದೆ. ಈ ಶಿಬಿರದಲ್ಲಿ ಪಾಲ್ಗೊಳ್ಳಲು ಚೆನ್ನೈ ತಂಡದ ಸ್ಟಾರ್ ಆಟಗಾರರು ಈಗಾಗಲೇ ಪ್ರಯಾಣವನ್ನು ಬೆಳೆಸಿದ್ದಾರೆ. ಕೊರೊನಾ ವೈರಸ್ ಪರೀಕ್ಷೆಯನ್ನು ನಡೆಸಿ ಕೊರೊನಾ ಮುಕ್ತರಾಗಿರುವುದನ್ನು ದೃಢಪಡಿಸಿಕೊಂಡ ನಂತರ ಎಲ್ಲಾ ಆಟಗಾರರು ಕೂಡ ಶಿಬಿರದಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ರಮುಖ ಆಟಗಾರರಾದ ಸುರೇಶ್ ರೈನಾ, ದೀಪಕ್ ಚಾಹರ್ ಹಾಗೂ ಪಿಯೂಷ್ ಚಾವ್ಲಾ ಈ ಶಿಬಿರದಲ್ಲಿ ಪಾಲ್ಗೊಳ್ಲುವ ಸಲುವಾಗಿ ಒಂದೇ ವಿಮಾನದಲ್ಲಿ ಪ್ರಯಾಣವನ್ನು ಮಾಡಿದ್ದಾರೆ. ಶನಿವಾರದಿಂದ ಆರಂಭವಾಗಲಿರುವ ಅಭ್ಯಾಸ ಶಿಬಿರಕ್ಕೆ ಈ ಮೂವರು ಮೊದಲಿಗರಾಗಿ ತಲುಪುತ್ತಿದ್ದಾರೆ.
ಆಗಸ್ಟ್ 15 ರಿಂದ 20ನೇ ತಾರೀಕಿನವರೆಗೆ ಆರು ದಿನಗಳ ಕಾಲ ಚೆನ್ನೈ ಸೂಪರ್ ಕಿಂಗ್ಸ್ ತಂಡದ ತರಬೇತಿ ಶಿಬಿರವನ್ನು ಆಯೋಜಿಸಲಾಗಿದೆ. ಚೆನ್ನೈ ತಂಡದ ಬಹುತೇಕ ಎಲ್ಲಾ ಆಟಗಾರರು ಕೂಡ ಈ ಶಿಬಿರದಲ್ಲಿ ಪಾಲ್ಗೊಂಡು ಬಳಿಕ ಯುಎಇಗೆ ತೆರಳಲಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಉಪನಾಯಕ ಸುರೇಶ್ ರೈನಾ ದೆಹಲಿಯಿಂದ ಪ್ರಯಾಣಿಸುವ ಸಂದರ್ಭದ ಫೋಟೋವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ದೀಪಕ್ ಚಾಹರ್, ಬರಿಂದರ್ ಸ್ರಾನ್, ಪಿಯೂಷ್ ಚಾವ್ಲಾ ಮತ್ತು ವಿಮಾನದ ಸಿಬ್ಬಂದಿಗಳು ಈ ಪೋಟೋದಲ್ಲಿ ಫೋಸ್ ನೀಡಿದ್ದಾರೆ.
ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಈ ಶಿಬಿರ ಆಯೋಜನೆಯಾಗಿದ್ದು ಮೂರು ಬಾರಿ ಚೆನ್ನೈ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ ನಾಯಕ ಎಂಎಸ್ ಧೋನಿ ಕೂಡ ಈ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ. ಶಿಬರದಲ್ಲಿ ಪಾಳ್ಗೊಳ್ಳುವ ಹಿನ್ನೆಲೆಯಲ್ಲಿ ಗುರುವಾರ ಕೊವಿಡ್ 19 ಪರೀಕ್ಷೆಯನ್ನು ನಡೆಸಿದ ಧೋನಿ ವರದಿ ನೆಗೆಟಿವ್ ಬಂದಿದ್ದು ಅವರು ಕೂಡ ಶೀಘ್ರದಲ್ಲೇ ತಂಡವನ್ನು ಸೇರಿಕೊಳ್ಳಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications