ತೆಂಡೂಲ್ಕರ್, ಕೊಹ್ಲಿ ನಡುವಿನ ವ್ಯತ್ಯಾಸ ವಿವರಿಸಿದ ಸುರೇಶ್ ರೈನಾ

ಬೆಂಗಳೂರು, ಮೇ 4: ಭಾರತದ ಕ್ರಿಕೆಟ್‌ನಲ್ಲಿ ಕೇಳಿ ಬರುವ ದೊಡ್ಡ ಹೆಸರುಗಳಲ್ಲಿ ಎರಡು ಹೆಸರುಗಳೆಂದರೆ ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೊಹ್ಲಿ. ತೆಂಡೂಲ್ಕರ್ ಅವರು ಕ್ರಿಕೆಟ್‌ನ ಚಿನ್ನದ ಯುಗವನ್ನು ನೆನಪಿಸಿದರೆ, ವಿರಾಟ್ ಆಧುನಿಕ ಕ್ರಿಕೆಟ್‌ನ ಶ್ರೇಷ್ಠ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ. ಕ್ರಿಕೆಟ್ ದೇವರು ಸಚಿನ್‌ರ ಶತಕದ ಶತಕ ದಾಖಲೆಯನ್ನು ಮುರಿಯಬಲ್ಲ ಒಬ್ಬನೇ ಆಟಗಾರನೆಂದು ಕೊಹ್ಲಿಯನ್ನು ನಂಬಲಾಗಿದೆ. ದಾಖಲೆಯ ವಿಚಾರದಲ್ಲಿ ಕೊಹ್ಲಿ-ಸಚಿನ್ ಇಬ್ಬರೂ ಶಕ್ತಿಶಾಲಿಗಳೇ. ಆದರೆ ಇಬ್ಬರಲ್ಲೂ ಭಿನ್ನತೆ ಇದ್ದೇ ಇದೆ.
2011ರ ವಿಶ್ವಕಪ್ ವಿಜೇತ ಭಾರತ ತಂಡದಲ್ಲಿದ್ದ ಸುರೇಶ್ ರೈನಾಗೆ ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೊಹ್ಲಿ ಇಬ್ಬರ ಜೊತೆಯೂ ಆಡಿದ ಅನುಭವವಿದೆ. ಹೀಗಾಗಿ ರೈನಾ ಇಬ್ಬರು ಶ್ರೇಷ್ಠ ಕ್ರಿಕೆಟಿಗರ ನಡುವಿನ ವ್ಯತ್ಯಾಸ ಹೇಳಿಕೊಂಡಿದ್ದಾರೆ.
ಖಲೀಜ್ ಟೈಮ್ಸ್ ಜೊತೆ ಸಂದರ್ಶನದಲ್ಲಿ ಮಾತನಾಡಿದ ರೈನಾ, ಕೊಹ್ಲಿ ಮತ್ತು ಸಚಿನ್ ಆಟದ ವೇಳೆ ಹೇಗಿರುತ್ತಾರೆ, ಅವರ ಸಾಮರ್ಥ್ಯವೇನೆಂಬುದನ್ನು ವಿವರಿಸಿದ್ದಾರೆ.

ಸಚಿನ್ ತೆಂಡೂಲ್ಕರ್ ಅಂದರೆ..
'ಸಚಿನ್ ಮತ್ತು ವಿರಾಟ್ ಇಬ್ಬರೂ ಅನೇಕ ಶತಕಗಳನ್ನು ಬಾರಿಸಿದ್ದಾರೆ. ವಿರಾಟ್ ಪ್ರತೀ ಪಂದ್ಯವನ್ನೂ ಗೆಲ್ಲ ಬಯಸುತ್ತಾರೆ. ಆದರೆ ಸಚಿನ್ ಪಂದ್ಯದ ವೇಳೆ ಪ್ರತಿಯೊಂದು ವಿಚಾರವೂ ಸರಿಯಾಗಿದೆಯೇ ಎಂದು ಖಚಿತಪಡಿಸಿಕೊಳ್ಳುತ್ತಾರೆ,' ಎಂದು ರೈನಾ ಹೇಳಿದ್ದಾರೆ.

ವಿಶ್ವಕಪ್ ಗೆದ್ದಿದ್ದು ಅವರಿಂದಲೇ
'ಸಚಿನ್ ಎಂದರೆ ನನ್ನ ಪ್ರಕಾರ ಶಾಂತಮೂರ್ತಿ. ಇದರಿಂದಲೇ ನಮಗೆ ವಿಶ್ವಕಪ್ ಗೆಲ್ಲಲು ಸಾಧ್ಯವಾಯ್ತು. ತಂಡದಲ್ಲಿದ್ದ ಎಲ್ಲರಲ್ಲೂ 'ನೀನಿದನ್ನು ಮಾಡಬಲ್ಲೆ' ಅನ್ನೋ ಧೈರ್ಯ ತುಂಬುವವರು ಸಚಿನ್. ಅವರು ಭಾರತಕ್ಕೆ ಸೆಕೆಂಡ್ ಕೋಚ್ ಇದ್ದಂತೆ,' ಎಂದು ಸುರೇಶ್ ವಿವರಿಸಿದ್ದಾರೆ.

ಎಲ್ಲಾ ಮಾದರಿಯಲ್ಲೂ ಅದ್ಭುತ ಆಟಗಾರ
ಮಾತು ಮುಂದುವರೆಸಿದ ರೈನಾ, 'ವಿರಾಟ್ ಎಲ್ಲಾ ಮಾದರಿಯ ಕ್ರಿಕೆಟ್‌ಗೂ ಅದ್ಭುತ ಆಟಗಾರ. ಆತನೊಬ್ಬ ಅತ್ಯುತ್ತಮ ನಾಯಕನೂ ಹೌದು. ಎಸೆತಗಳಿಗೆ ಕೊಹ್ಲಿ ಉತ್ತಮ ಹೊಡೆತಗಳನ್ನು ಕೊಡಬಲ್ಲರು. ಆತ ಸದಾ ಫಿಟ್ ಆಗಿರುತ್ತಾರೆ, ಸಕಾರಾತ್ಮಕವಾಗಿರುತ್ತಾರೆ. ಸಚಿನ್-ಕೊಹ್ಲಿ ಇಬ್ಬರ ಜೊತೆಯಲ್ಲೂ ಆಡುವ ಅವಕಾಶ ಸಿಕ್ಕಿದ್ದಕ್ಕೆ ನನಗೆ ಖುಷಿಯಿದೆ,' ಎಂದರು.

ಸಚಿನ್, ಮೆಸ್ಸಿ ಇಬ್ಬರೂ ಒಂದೆ
ತೆಂಡೂಲ್ಕರ್ ಅವರನ್ನು ರೈನಾ , ಬಾರ್ಸಿಲೋನಾ ಸ್ಟಾರ್ ಆಟಗಾರ ಲಿಯೋನೆಲ್ ಮೆಸ್ಸಿಗೆ ಹೋಲಿಸಿದ್ದಾರೆ. 'ನಾನು ಮೆಸ್ಸಿಯ ದೊಡ್ಡ ಅಭಿಮಾನಿ. ಅವರೂ ಕೂಡ ತುಂಬಾ ಒಳ್ಳೆಯ ಸ್ವಭಾವದವರು. ತಮ್ಮ ಸುತ್ತಲಿನ ಜನರ ಬಗ್ಗೆ ಆರೈಕೆ ಮಾಡುವ ವಿಚಾರದಲ್ಲಿ ಮೆಸ್ಸಿ-ಸಚಿನ್ ಇಬ್ಬರೂ ಒಂದೇ,' ಎಂದು ರೈನಾ ಹೇಳಿಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications