ಮುಂದಿನ ವಾರ ಸಿಎಸ್‌ಕೆ ಕ್ಯಾಂಪ್ ಸೇರಲಿದ್ದಾರೆ ಸುರೇಶ್ ರೈನಾ

ಚೆನ್ನೈ: 2020ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಿಂದ ದೂರ ಉಳಿದಿದ್ದ ಭಾರತದ ಮಾಜಿ ಆಲ್ ರೌಂಡರ್ ಸುರೇಶ್ ರೈನಾ ಈ ಬಾರಿಯ ಐಪಿಎಲ್‌ನಲ್ಲಿ ಆಡುತ್ತಿದ್ದಾರೆ. ಮುಂದಿನ ವಾರ ರೈನಾ ತಂಡದ ಕ್ಯಾಂಪ್ ಸೇರಿಕೊಳ್ಳಲಿದ್ದಾರೆ ಚೆನ್ನೈ ಸೂಪರ್ ಕಿಂಗ್ಸ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕಾಶಿ ವಿಶ್ವನಾಥನ್ ಹೇಳಿದ್ದಾರೆ.
14ನೇ ಆವೃತ್ತಿಯ ಐಪಿಎಲ್‌ಗಾಗಿ ಎಂಎಸ್ ಧೋನಿ ಮುಂದಾಳತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸದ್ಯ ಚೆನ್ನೈನಲ್ಲಿದೆ. ಚೆನ್ನೈನಲ್ಲಿ ಹೋಟೆಲ್‌ನಲ್ಲಿರುವ ಸಿಎಸ್‌ಕೆ ತಂಡ ಮುಂದಿನ ವಾರ ಬುಧವಾರದಿಂದ ಅಭ್ಯಾಸ ಆರಂಭಿಸಲಿದೆ. ಈ ಬಾರಿ ಬಯೋ ಬಬಲ್ ಬಗ್ಗೆ ನಿಗಾ ವಹಿಸುವುದಾಗಿ ಕಾಶಿ ವಿಶ್ವನಾಥನ್ ತಿಳಿಸಿದ್ದಾರೆ.
'ಕ್ರಿಕೆಟಿಗರು ಈಗ ತಮ್ಮ ಹೋಟೆಲ್ ಕೋಣೆಗಳಿಗೆ ಸೀಮಿತವಾಗಿರುತ್ತಾರೆ. ಕಡ್ಡಾಯ ಅನುಮತಿ ನೀಡಿದ ನಂತರ ಮಾತ್ರ ಅವರು ಮಾರ್ಚ್ 9ರಿಂದ ತರಬೇತಿ ಪ್ರಾರಂಭಿಸುತ್ತಾರೆ,' ಎಂದು ಕಾಶಿ ವಿಶ್ವನಾಥನ್ ಮಾಹಿತಿ ನೀಡಿದ್ದಾರೆ. ತಂಡದ ಮುಖ್ಯಕೋಚ್ ಸ್ಟೀಫನ್ ಕೂಡ ಮಾರ್ಚ್ 18ರಿಂದ ತಂಡದ ಜೊತೆಗಿರಲಿದ್ದಾರೆ.
ಸದ್ಯ ಸಿಎಸ್‌ಕೆ ತಂಡದಲ್ಲಿ ಎಂಎಸ್ ಧೋನಿ, ಋತುರಾಜ್ ಗಾಯಕ್ವಾವಾಡ್, ಅಂಬಾಟಿ ರಾಯುಡು, ಎನ್. ಜಗದೀಶನ್, ಸಾಯಿ ಕಿಶೋರ್, ಮತ್ತು ಹರಿ ನಿಶಾಂತ್ ಇದ್ದಾರೆ. ಉಳಿದ ಆಟಗಾರರು ಶೀಘ್ರ ತಂಡ ಸೇರಿಕೊಳ್ಳಲಿದ್ದಾರೆ. ಏಪ್ರಿಲ್‌ನಲ್ಲಿ ಐಪಿಎಲ್ ಆರಂಭವಾಗುವ ನಿರೀಕ್ಷೆಯಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications