For Quick Alerts
ALLOW NOTIFICATIONS  
For Daily Alerts
 

2021ರ ಐಪಿಎಲ್‌ನಲ್ಲಿ ಸುರೇಶ್‌ ರೈನಾ ನಮ್ಮೊಂದಿಗಿರಲಿದ್ದಾರೆ: ಸಿಎಸ್‌ಕೆ

Suresh Raina will be with us for IPL 2021, says CSK

ಚೆನ್ನೈ: ಟೀಮ್ ಇಂಡಿಯಾದ ಮಾಜಿ ಬ್ಯಾಟ್ಸ್‌ಮನ್‌ ಸುರೇಶ್ ರೈನಾ ಮತ್ತೆ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್)ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. 2021ರ ಐಪಿಎಲ್‌ ವೇಳೆ ಚೆನ್ನೈ ಸೂಪರ್ ಕಿಂಗ್ಸ್‌ ಪರವೇ ರೈನಾ ಮತ್ತೆ ಆಡಲಿದ್ದಾರೆ. ಸಿಎಸ್‌ಕೆ ಫ್ರಾಂಚೈಸಿ ಹೀಗೆ ಹೇಳಿಕೊಂಡಿದೆ.

ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನಡೆದಿದ್ದ 13ನೇ ಆವೃತ್ತಿಯ ಐಪಿಎಲ್‌ನಲ್ಲಿ ಸುರೇಶ್ ರೈನಾ ಆಡಿರಲಿಲ್ಲ. ದುಬೈಗೆ ರೈನಾ ಬಂದಿದ್ದರಾದರೂ ವೈಯಕ್ತಿಕ ಕಾರಣ ನೀಡಿ ದುಬೈನಿಂದ ಭಾರತಕ್ಕೆ ವಾಪಸ್ಸಾಗಿದ್ದರು. ರೈನಾ ಅನುಪಸ್ಥಿತಿಯಲ್ಲಿ ಸಿಎಸ್‌ಕೆ ನೀರಸ ಪ್ರದರ್ಶನ ನೀಡಿತ್ತು. ಲೀಗ್‌ ಹಂತದಲ್ಲಿ ಹೊರಬಿದ್ದ ಮೊದಲ ತಂಡವಾಗಿ ಕೆಟ್ಟ ದಾಖಲೆ ನಿರ್ಮಿಸಿತ್ತು.

14ನೇ ಆವೃತ್ತಿಯ ಐಪಿಎಲ್‌ನಲ್ಲಿ ರೈನಾ ಸಿಎಸ್‌ಕೆ ಪರ ಮತ್ತೆ ಮೈದಾನಕ್ಕಿಳಿಯಲಿದ್ದಾರೆ ಎಂದು ಸಿಎಸ್‌ಕೆ ಅಧಿಕೃತ ಹೇಳಿಕೆ ನೀಡಿರುವುದಾಗಿ ಮುಂಬೈ ಮಿರರ್ ವರದಿ ಮಾಡಿದೆ. 'ಅವರು ನಮ್ಮೊಂದಿಗಿರುತ್ತಾರೆ. ಅವರು ದೂರವಾಗಲು ಯಾವುದೇ ಯೋಜನೆಗಳಿಲ್ಲ,' ಎಂದು ಸಿಎಸ್‌ಕೆ ಹೇಳಿರುವುದಾಗಿ ಮಿರರ್ ವರದಿ ಹೇಳಿದೆ.

ವರದಿಯ ಪ್ರಕಾರ ಸುರೇಶ್ ರೈನಾ ಅವರನ್ನು ಸಿಎಸ್‌ಕೆ ಮತ್ತೆ ಆರಿಸಲಿದೆ. ರೈನಾ ಜೊತೆಗಿನ ಸಿಎಸ್‌ಕೆ ಒಪ್ಪಂದ ಕಳೆದ ಅಕ್ಟೋಬರ್‌ನಲ್ಲಿ ರೈನಾ ದುಬೈನಿಂದ ವಾಪಸ್ಸಾದಾಗಲೇ ಕೊನೆಗೊಂಡಿದೆ. ಒಟ್ಟಿನಲ್ಲಿ ಮುಂದಿನ ಐಪಿಎಲ್‌ನಲ್ಲಿ ರೈನಾ ಮತ್ತೆ ಮೆನ್‌ ಇನ್ ಯೆಲ್ಲೋನಲ್ಲಿ ಕಾಣಿಸಿಕೊಳ್ಳುವ ನಿರೀಕ್ಷೆಯಿದೆ.

Story first published: Thursday, December 24, 2020, 14:06 [IST]
Other articles published on Dec 24, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+