For Quick Alerts
ALLOW NOTIFICATIONS  
For Daily Alerts
 

ಕುಲ್‌ದೀಪ್‌ಗೆ ಮೈದಾನದಲ್ಲಿ ಕ್ಲಾಸ್‌ ತೆಗೆದುಕೊಂಡ ಸೂರ್ಯ

ಭಾರತ ಹಾಗೂ ಪಾಕಿಸ್ತಾನ ನಡುವಣ ಟಿ20 ವಿಶ್ವಕಪ್‌ನ ಲೀಗ್‌ ಹಂತದ ಪಂದ್ಯ ಕೊಲಂಬೊದಲ್ಲಿ ನಡೆಯಿತು. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಜಯ ಸಾಧಿಸಿ ಅಬ್ಬರಿಸಿದೆ. ತಂಡದ ಸಂಘಟಿತ ಆಟ ಗೆಲುವಿನಲ್ಲಿ ಎದ್ದು ಕಂಡಿದೆ. ಆರಂಭಿಕ ಆಟಗಾರ ಇಶಾನ್‌ ಕಿಶನ್‌ ಬಾರಿಸಿದ ಅರ್ಧಶತಕ ಹಾಗೂ ಬೌಲರ್‌ಗಳ ಬಿಗುವಿನ ದಾಳಿ ಭಾರತದ ಜಯದಲಲ್ಇ ಪ್ರಮುಖ ಪಾತ್ರವನ್ನು ವಹಿಸಿದವು. ಈ ಪಂದ್ಯದಲ್ಲಿ ನಾಯಕ ಸೂರ್ಯಕುಮಾರ್ ಯಾದವ್ ಸ್ಪಿನ್ ಬೌಲರ್‌ ಕುಲ್‌ದೀಪ್‌ ಯಾದವ್‌ಗೆ ಮೈದಾನದಲ್ಲೇ ಕ್ಲಾಸ್‌ ತೆಗೆದುಕೊಂಡರು.

ಟಿ20 ವಿಶ್ವಕಪ್‌ನ ಬಹು ನಿರೀಕ್ಷಿತ ಪಂದ್ಯದಲ್ಲಿ ಟೀಮ್ ಇಂಡಿಯಾ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಭಾರತ 67 ರನ್‌ ಗೆಲುವಿನ ನಗೆ ಬೀರಿದೆ. ಇದು ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಸಾಧಿಸಿದ ದೊಡ್ಡ ಗೆಲುವಾಗಿದೆ. ಈ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿದ ಬಳಿಕ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್, ಕುಲ್‌ದೀಪ್ ಯಾದವ್ ಮೇಲೆ ಸಿಟ್ಟಾದಂತೆ ಕಂಡು ಬಂದಿತು. ಹಾಗಿದ್ದರೆ ಇದಕ್ಕೆ ಕಾರಣ ಏನು ಎಂಬ ಬಗ್ಗೆ ವರದಿ ಇಲ್ಲಿದೆ.

Suryakumar Yadav

ಪಾಕಿಸ್ತಾನ ಬ್ಯಾಟಿಂಗ್‌ ಮಾಡುವಾಗ ಹಾರ್ದಿಕ್ ಪಾಂಡ್ಯ 18ನೇ ಓವರ್ ಬೌಲ್ ಮಾಡಿದರು. ಇವರ ಬೌಲಿಂಗ್‌ನಲ್ಲಿ ಉಸ್ಮಾನ್ ತಾರೀಕ್‌ ಅವರ ಕ್ಯಾಚ್‌ನ್ನು ಬೌಂಡರಿ ಲೈನ್‌ನಲ್ಲಿ ನಿಂತಿದ್ದ ಕುಲ್‌ದೀಪ್‌ ಯಾದವ್ ಕೈ ಚೆಲ್ಲಿರು. ಈ ಕ್ಯಾಚ್‌ ನಿಜಕ್ಕೂ ಸುಲಭದ ಕ್ಯಾಚ್‌ ಆಗಿತ್ತು. ಆದರೆ ಕುಲ್‌ದೀಪ್‌ ಈ ಕ್ಯಾಚ್ ಕೈ ಬಿಟ್ಟರು. ಈ ಕ್ಯಾಚ್ ಬಿಟ್ಟ ಬಳಿಕ ಹಾರ್ದಿಕ್, ಕುಲ್‌ದೀಪ್ ಮೇಲೆ ಕೋಪಗೊಂಡರು. ಪಂದ್ಯ ಮುಗಿದ ಬಳಿಕ ಟೀಮ್ ಇಂಡಿಯಾದ ಆಟಗಾರರು ಕೈ ಕುಲುಕಿದರು. ಇದೇ ವೇಳೆ ನಾಯಕ ಸೂರ್ಯಕುಮಾರ್ ಸಹಾ ಕುಲ್‌ದೀಪ್ ಅವರನ್ನು ಕ್ಯಾಚ್‌ ಬಿಟ್ಟಿದಕ್ಕೆ ಗದರಿದರು. ಇದರ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೇಗವಾಗಿ ವೈರಲ್ ಆಗುತ್ತಿದೆ.

ಕುಲ್‌ದೀಪ್‌ಗೆ 1 ವಿಕೆಟ್‌

ಟೀಮ್ ಇಂಡಿಯಾದ ಬ್ಯಾಟರ್‌ಗಳು ಈ ಪಂದ್ಯದಲ್ಲಿ ಬಿಗುವಿನ ದಾಳಿ ನಡೆಸಿ ಮಿಂಚಿದರು. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಪರ ನಾಲ್ವರು ಬೌಲರ್‌ಗಳು ತಲಾ ಎರಡು ವಿಕೆಟ್‌ ಪಡೆದರು. ಈ ಪಂದ್ಯದಲ್ಲಿ ಕುಲ್‌ದೀಪ್ ಯಾದವ್ 3 ಓವರ್‌ ಬೌಲ್ ಮಾಡಿ 14 ರನ್‌ ನೀಡಿ 1 ವಿಕೆಟ್‌ ಕಬಳಿಸಿದರು. ಈ ವೇಳೆ ಕುಲ್‌ದೀಪ್ ಯಾದವ್ ಎಕಾನಮಿ 4.70 ಆಗಿತ್ತು. ತಿಲಕ್‌ ವರ್ಮಾ ಒಂದು ವಿಕೆಟ್‌ ಪಡೆದ ಮಿಂಚಿದರು.

ಪಂದ್ಯದ ಫಲಿತಾಂಶ

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 175 ರನ್‌ ಸಿಡಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಪಾಕಿಸ್ತಾನ 18 ಓವರ್‌ಗಳಲ್ಲಿ 114 ರನ್‌ ಸೇರಿಸಿ ಅಲೌಟ್ ಆಯಿತು. ಇಶಾನ್‌ ಕಿಶನ್‌ ಭರ್ಜರಿ ಆಟಕ್ಕೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಲಭಿಸಿತು.

Story first published: Monday, February 16, 2026, 10:12 [IST]
Other articles published on Feb 16, 2026
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+