ಸೂರ್ಯ, ಶ್ರೇಯಾಂಕಾ ಪಾಟೀಲ್ ಡ್ಯಾನ್ಸ್ ವೈರಲ್
ಭಾರತ ಟಿ20 ತಂಡದ ನಾಯಕ ಸೂರ್ಯಕುಮಾರ್ ಯಾದವ್ ಹಾಗೂ ಟೀಮ್ ಇಂಡಿಯಾದ ಆಟಗಾರ್ತಿ ಕನ್ನಡತಿ ಶ್ರೇಯಾಂಕಾ ಪಾಟೀಲ್ ಅವರ ವಿಡಿಯೋ ಒಂದು ಈಗ ಸಾಮಾಜಿಕ ತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ. ಈ ವಿಡಿಯೋವನ್ನು ನೋಡಿದ ಅಭಿಮಾನಿಗಳು ಸಖತ್ ಖುಷ್ ಅಗಿದ್ದಾರೆ. ಈ ವಿಡಿಯೋ ಈಗ ಸಖತ್ ವೈರಲ್ ಆಗುತ್ತಿದೆ.
ಟೀಮ್ ಇಂಡಿಯಾ ಸದ್ಯ ಇಂಗ್ಲೆಂಡ್ ಪ್ರವಾಸದಲ್ಲಿದೆ. ಆದರೆ ಟಿ20 ನಾಯಕ ಸುರ್ಯಕುಮಾರ್ ಯಾದವ್ ಮಾತ್ರ ಭಾರತದಲ್ಲಿದ್ದಾರೆ. ಈ ವೇಳೆ ಇವರು ಸೂರ್ಯಕುಮಾರ್ ಯಾದವ್ ಹಾಗೂ ಶ್ರೇಯಾಂಕಾ ಪಾಟೀಲ್ "ಅರಾ ಫಾರ್ಮಿಂಗ್" ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ. ಈ ವಿಡಿಯೋ ಈಗ ಸಖತ್ ಸದ್ದು ಮಾಡುತ್ತಿದೆ. ಅರಾ ಫಾರ್ಮಿಂಗ್ ಹಾಡಿನ ದೃಶ್ಯದಲ್ಲಿ ಸೂರ್ಯಕುಮಾರ್ ಯಾದವ್ ಮುಂಬದಿ ಡ್ಯಾನ್ಸ್ ಮಾಡುತ್ತಿರುವುದು ಕಾಣಬಹುದು. ಅಲ್ಲದೆ ಶ್ರೇಯಾಂಕಾ ಪಾಟೀಲ್ ಹಿಂಬದಿಯಲ್ಲಿ ಕುಳಿತು ಬೋಟ್ ಚಲಿಸುತ್ತಿರುವಾಗೆ ಕಾಣಿಸುತ್ತಿದೆ.

ಏನಿದು ಡ್ಯಾನ್ಸ್?
ಇಂಡೋನೇಷ್ಯಾದಲ್ಲಿ ಬೋಟ್ ರೆಸಿಂಗ್ ನಡೆಯುತ್ತದೆ. ಈ ವೇಳೆ ಬೋಟ್ ಮುಂಭಾಗದಲ್ಲಿ ಒಬ್ಬ ವ್ತಕ್ತಿ ನೃತ್ಯ ಮಾಡುತ್ತಾ ನಾವಿಕರಿಗೆ ಮನೋರಂಜನೆ ನೀಡುತ್ತಾನೆ. ಕಳೆದ ಕೆಲವು ವರ್ಷಗಳಲ್ಲಿ ಇಂಡೋನೇಷ್ಯಾದ 11 ವರ್ಷದ ಬಾಲಾಕ ಮಾಡಿದ ನೃತ್ಯ ಸಖತ್ ಫೇಮಸ್ ಆಗಿತ್ತು. ಆರಾ ಫಾರ್ಮಿಂಗ್ ಹಾಡು ಈ ಮೂಲಕವೇ ಸಖತ್ ಸದ್ದು ಮಾಡುತ್ತಿದೆ. ಇದೇ ಹಾಡಿಗೆ ಸೂರ್ಯ ಹಾಗೂ ಶ್ರೇಯಾಂಕಾ ತಮ್ಮದೇ ಧಾಟಿಯಲ್ಲಿ ಡ್ಯಾನ್ಸ್ ಮಾಡಿದ್ದಾರೆ. ಈ ವಿಡಿಯೋ ಟ್ರೆಂಡ್ ಮಾಡಲು ಸೂರ್ಯ ಮ್ಯಾನೇಜರ್ ಬಯಸಿದ್ದರು.
ಟೀಮ್ ಇಂಡಿಯಾದ ಟಿ20 ನಾಯಕ ಸೂರ್ಯಕುಮಾರ್ ಯಾದವ್ ಟೆಸ್ಟ್ ಕ್ರಿಕೆಟ್‌ನಲ್ಲಿ ತಮ್ಮ ಛಾಪು ಮೂಡಿಸುವಲ್ಲಿ ವಿಫಲರಾಗಿದ್ದಾರೆ. ಹೀಗಾಗಿ ಇವರು ಸೀಮಿತ ಓವರ್‌ಗಳ ಪಂದ್ಯಗಳಲ್ಲಿ ಮಾತ್ರ ಆಡುತ್ತಿದ್ದಾರೆ. ಇಂಡೀಯನ್ ಪ್ರೀಮಿಯರ್ ಲೀಗ್ ಹಾಗೂ ಮುಂಬೈ ಟಿ20 ಲೀಗ್‌ನಲ್ಲಿ ಆಡಿದ ನಂತರ ಸೂರ್ಯ ಶಸ್ತ್ರಚಿಕಿತ್ಸೆಗೆ ಒಳಗದರು. ಸದ್ಯ ಇವರು ತಮ್ಮ ಫಿಟ್ನೆಸ್ ಮೇಲೆ ಕೆಲಸ ಮಾಡುತ್ತಿದ್ದು, ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಬೆವರು ಹರಿಸುತ್ತಿದ್ದಾರೆ.
ಶ್ರೇಯಾಂಕಾ ಮಹಿಳಾ ಪ್ರೀಮಿಯರ್ ಲೀಗ್ 2024 ರಲ್ಲಿ ಗಾಯಗೊಂಡರು. ಅವರು ಆಸ್ಟ್ರೇಲಿಯಾ ಪ್ರವಾಸಕ್ಕಾಗಿ ಭಾರತ ಎ ತಂಡಕ್ಕೆ ಆಯ್ಕೆಯಾಗಿದ್ದರು. ಆದರೆ ಎನ್‌ಸಿಎನಲ್ಲಿ ನಡೆದ ಫಿಟ್ ನೆಸ್ ಪರೀಕ್ಷೆಯಲ್ಲಿ ಫೇಲ್ ಆಗಿದ್ದರಿಂದ, ತಂಡದಿಂದ ಕೈ ಬಿಡಬೇಕಾಯಿತು. ಇವರ ಚಿತ್ತ 2025ರ ಮಹಿಳಾ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವ ಮೇಲೆ ನೆಟ್ಟಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications