Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಸುಳ್ಳು ವದಂತಿಗಳಿಗೆ ಬ್ರೇಕ್ ಹಾಕಿದ ಸೂರ್ಯಕುಮಾರ್ ಯಾದವ್; ವೈಭವ್ ಸೂರ್ಯವಂಶಿಗೆ ವಿಶೇಷ ಸಂದೇಶ

ಭಾರತದಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾಕ್ಕೆ ಚಾಂಪಿಯನ್ ಪಟ್ಟವನ್ನು ತೊಡಿಸಿದ ನಾಯಕ ಸೂರ್ಯಕುಮಾರ್ ಯಾದವ್ ಅವರನ್ನು ಐರ್ಲೆಂಡ್‌ ಹಾಗೂ ಇಂಗ್ಲೆಂಡ್ ಪ್ರವಾಸದಿಂದ ಕೈ ಬಿಡಲಾಗಿದೆ. ಆರಂಭದಲ್ಲಿ ಇವರ ನಾಯಕತ್ವಕ್ಕೆ ಕುತ್ತು ಬರಲಿದೆ ಎಂದು ಹೇಳಲಾಗಿತ್ತು. ಆದರೆ ತಂಡ ಪ್ರಕಟಿಸಿದ ಬಳಿಕವೇ ಸೂರ್ಯ ಅವರಿಗೆ ತಂಡದಲ್ಲೂ ಸ್ಥಾನ ಇಲ್ಲದೇ ಇರುವುದು ತಿಳಿದು ಬಂದಿತು. ಈಗ, ಸೂರ್ಯ ತಂಡಕ್ಕೆ ಬೆಂಬಲ ವ್ಯಕ್ತಪಡಿಸಿದ ಪೋಸ್ಟ್‌ನೊಂದಿಗೆ ಸಂಚಲನ ಮೂಡಿಸಿದ್ದಾರೆ.

ಇಂಗ್ಲೆಂಡ್‌ನ ನಾಟಿಂಗ್‌ಹ್ಯಾಮ್‌ನಲ್ಲಿ ನಡೆಯಲಿರುವ ಮೂರನೇ ಟಿ20 ಪಂದ್ಯಕ್ಕೂ ಮುನ್ನ ಸೂರ್ಯಕುಮಾರ್ ಯಾದವ್ ಅವರು ಮಾಡಿದ ಪೋಸ್ಟ್‌ ಸಖತ್ ವೈರಲ್ ಆಗುತ್ತಿದೆ. ಈ ಪೋಸ್ಟ್‌ನಲ್ಲಿ ಸೂರ್ಯ ಅವರು ವೈಭವ್ ಸೂರ್ಯವಂಶಿ ಅವರ ಬಗ್ಗೆಯೂ ಮಾತನಾಡಿದ್ದಾರೆ. ಅಲ್ಲದೆ ಸುಳ್ಳು ಹೇಳಿಕೆಗಳನ್ನು ನಂಬ ಬೇಡಿ ಎಂದು ಅಭಿಮಾನಿಗಳಿಗೆ ಒತ್ತಾಯಿಸಿದ್ದಾರೆ.

Suryakumar Yadav

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಸೂರ್ಯಕುಮಾರ್ ಯಾದವ್ ಅವರ ಪೋಸ್ಟ್‌ನಲ್ಲಿ, ತಂಡದಿಂದ ನಾನು ಸಂತೋಷವಾಗಿದ್ದೇನೆ. ಅಲ್ಲದೆ ಯಾವಾಗಲೂ ತಂಡಕ್ಕೆ ಶುಭಾ ಹಾರೈಸುತ್ತೇನೆ. ತಂಡದಲ್ಲಿರುವ ಪ್ರತಿಯೊಬ್ಬರು ಆಟಗಾರರು ತಮ್ಮ ಸಾಮರ್ಥ್ಯ ಪ್ರದರ್ಶಿಸುತ್ತಿದ್ದಾರೆ. ನಾನು ಸದಾ ತಂಡದ ಆಟಗಾರರನ್ನು ಬೆಂಬಲಿಸುತ್ತೇನೆ ಎಂದು ಸೂರ್ಯ ಬರೆದುಕೊಂಡಿದ್ದಾರೆ.

ವೈಭವ್ ಸೂರ್ಯವಂಶಿಗೆ ವಿಶೇಷ ಸಂದೇಶ

ಇನ್ನು ಟೀಮ್ ಇಂಡಿಯಾದ ಯುವ ಆಟಗಾರ ವೈಭವ್ ಸೂರ್ಯವಂಶಿ ಬಗ್ಗೆಯೂ ಸೂರ್ಯಕುಮಾರ್ ಯಾದವ್ ಬರೆದುಕೊಂಡಿದ್ದಾರೆ. ವೈಭವ್ ನಿಮ್ಮದು ಭರವಸೆ ಮತ್ತು ಉತ್ಸಾಹದಿಂದ ತುಂಬಿರುವ ಪ್ರಯಾಣದ ಆರಂಭದಲ್ಲಿದ್ದೀರಿ. ಪ್ರತಿ ಕ್ಷಣವನ್ನು ಆನಂದಿಸಿ ಮತ್ತು ದೇಶವನ್ನು ಹೆಮ್ಮೆಪಡುವಂತೆ ಮಾಡುತ್ತಲೇ ಇರಿ ಎಂದು ಬರೆದುಕೊಂಡಿದ್ದಾರೆ.

ಇದೇ ಪೋಸ್ಟ್‌ನಲ್ಲಿ ಸೂರ್ಯ ಸುಳ್ಳು ಹೇಳಿಕೆಗಳ ಬಗ್ಗೆಯೂ ಬರೆದುಕೊಂಡಿದ್ದಾರೆ. ನನ್ನ ಮೇಲೆ ಸಾಮಾಜಿಕ ಮಾಧ್ಯಮದಲ್ಲಿ ತಪ್ಪಾಗಿ ಆರೋಪ ಮಾಡಲಾಗುತ್ತಿದೆ. ಇದನ್ನು ನಾನು ಗಮನಿಸುತ್ತಲೇ ಇರುವೆ. ನಾನು ಅಂತಹ ಯಾವುದೇ ಹೇಳಿಕೆಯನ್ನು ನೀಡಿಲ್ಲ ಎಂದು ನಾನು ಸ್ಪಷ್ಟಪಡಿಸಲು ಬಯಸುತ್ತೇನೆ. ದಯವಿಟ್ಟು ಆಧಾರರಹಿತ ಮಾಹಿತಿಯನ್ನು ನಂಬಬೇಡಿ ಅಥವಾ ಹಂಚಿಕೊಳ್ಳಬೇಡಿ ಎಂದು ಅಭಿಮಾನಿಗಳಿಗೆ ಸ್ಪಷ್ಟಪಡಿಸಿದ್ದಾರೆ.

ಸೂರ್ಯಕುಮಾರ್ ಯಾದವ್ ಸಾಧನೆ

35 ವರ್ಷದ ಸೂರ್ಯಕುಮಾರ್ ಯಾದವ್ ಟೀಮ್ ಇಂಡಿಯಾದ ಭರವಸೆಯ ಆಟಗಾರ. ಇವರು ಎರಡು ಬಾರಿ ಟೀಮ್ ಇಂಡಿಯಾ ಟಿ20 ವಿಶ್ವಚಾಂಪಿಯನ್ ಆದಾಗ ತಂಡದ ಸದಸ್ಯರಾಗಿದ್ದಾರೆ. ವೆಸ್ಟ್‌ ಇಂಡೀಸ್ ಹಾಗೂ ಅಮೆರಿಕದಲ್ಲಿ ಟೀಮ್ ಇಂಡಿಯಾ ಚಾಂಪಿಯನ್ ಆಗುವಲ್ಲಿ ಸೂರ್ಯಕುಮಾರ್ ಯಾದವ್ ಕಾಣಿಕೆ ಅಪಾರ. ಇನ್ನು ಭಾರತದಲ್ಲಿ ನಡೆದಿದ್ದ ಟಿ20 ವಿಶ್ವಕಪ್‌ನಲ್ಲಿ ತಂಡವನ್ನು ಮುನ್ನಡೆಸಿದ್ದ ನಾಯಕ. ಭಾರತ ತಂಡದ ಪರ ಮೂರು ಫಾರ್ಮೆಟ್‌ಗಳಲ್ಲಿ ತಂಡವನ್ನು ಪ್ರತಿನಿಧಿಸಿದ ಆಟಗಾರ ಸೂರ್ಯಕುಮಾರ್. ಇವರು 113 ಟಿ20 ಪಂದ್ಯಗಳಲ್ಲಿ 36ರ ಸರಾಸರಿಯಲ್ಲಿ 3272 ರನ್‌ ಕಲೆ ಹಾಕಿದ್ದಾರೆ. ಈ ವೇಳೆ 4 ಶತಕ ಹಾಗೂ 25 ಅರ್ಧಶತಕ ಸಿಡಿಸಿದ್ದಾರೆ.

Story first published: Tuesday, July 7, 2026, 19:25 [IST]
Other articles published on Jul 7, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+