For Quick Alerts
ALLOW NOTIFICATIONS  
For Daily Alerts
 

Suryakumar Yadav: ವಿರಾಟ್‌, ರೋಹಿತ್ ಮಾಡದ ಸಾಧನೆ ಮಾಡಿದ ಸೂರ್ಯಕುಮಾರ್‌ ಯಾದವ್

ಟೀಮ್ ಇಂಡಿಯಾ ಟಿ20 ನಾಯಕ ಸೂರ್ಯಕುಮಾರ್‌ ಯಾದವ್ ಲಕ್ನೋ ಸೂಪರ್‌ ಜೈಂಟ್ಸ್‌ ವಿರುದ್ಧದ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ಮುಂದುವರೆಸಿದ್ದಾರೆ. ಪ್ರಸಕ್ತ ಐಪಿಎಲ್‌ನಲ್ಲಿ ಅಮೋಘ ಫಾರ್ಮ್‌ನಲ್ಲಿರುವ ಸೂರ್ಯಕುಮಾರ್‌ ಯಾದವ್‌ ಮುಂಬೈ ಇಂಡಿಯನ್ಸ್ ತಂಡಕ್ಕೆ ಆಧಾರವಾದರು. ಇವರ ಭರ್ಜರಿ ಆಟದ ನೆರವಿನಿಂದ ಮಾಜಿ ಚಾಂಪಿಯನ್ ಮುಂಬೈ ಇಂಡಿಯನ್ಸ್‌ ಸವಾಲಿನ ಮೊತ್ತವನ್ನು ಕಲೆ ಹಾಕಿದೆ. ಈ ಪಂದ್ಯದಲ್ಲಿ ಸೂರ್ಯ ಮತ್ತೊಂದು ದಾಖಲೆ ಬರೆದಿದ್ದಾರೆ. ಭಾನುವಾರ ನಡೆದ ಪಂದ್ಯದಲ್ಲಿ ಸೂರ್ಯ 4 ಬೌಂಡರಿ, 4 ಸಿಕ್ಸರ್ ಸಹಾಯದಿಂದ 54 ರನ್‌ ಸಿಡಿಸಿದರು.

ಮುಂಬೈ ಇಂಡಿಯನ್ಸ್‌ ತಂಡದ ಸ್ಟಾರ್ ಬ್ಯಾಟರ್‌ ಸೂರ್ಯಕುಮಾರ್ ಯಾದವ್‌ ಐಪಿಎಲ್‌ನಲ್ಲಿ ಮತ್ತೊಂದು ದೊಡ್ಡ ದಾಖಲೆಗೆ ತಮ್ಮ ಹೆಸರನ್ನು ನಮೂದಿಸಿಕೊಂಡಿದ್ದಾರೆ. ಇವರು 4000 ರನ್‌ಗಳನ್ನು ವೇಗವಾಗಿ ಪೂರ್ಣಗೊಳಿಸಿದ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಸೂರ್ಯ ನಾಲ್ಕು ಸಾವಿರ ರನ್‌ಗಳನ್ನು ಕೇವಲ 2714 ರನ್‌ಗಳಲ್ಲಿ ಪೂರ್ಣಗೊಳಿಸಿದರು. 18ನೇ ಆವೃತ್ತಿಯ 45ನೇ ಪಂದ್ಯದಲ್ಲಿ ಸೂರ್ಯ ಈ ಸಾಧನೆ ಮಾಡಿದರು.

Suryakumar Yadav Becomes Fastest Indian to Score 4000 IPL Runs Shines Against Lucknow Super Giants

ಸೂರ್ಯ 4000 ಸಾಧನೆ

ಲಕ್ನೋ ವಿರುದ್ಧದ ಪಂದ್ಯದಲ್ಲಿ ಸೂರ್ಯ ಈ ಸಾಧನೆ ಮಾಡಿದರು. ಇನಿಂಗ್ಸ್‌ನ 14ನೇ ಓವರ್‌ನ ಎರಡನೇ ಎಸೆತದಲ್ಲಿ ಸುರ್ಯ ಈ ಸಾಧನೆ ಮಾಡಿ ಬೀಗಿದರು. ಆವೇಶ್‌ ಖಾನ್‌ ಎಸೆದ ಲೆಂತ್‌ ಬೌಲ್‌ನ್ನು ಸೂರ್ಯ ಶಾರ್ಟ್‌ ಥರ್ಡ್‌ ಮ್ಯಾನ್‌ ಬೌಂಡರಿ ದಾಟಿಸುತ್ತಿದ್ದಂತೆ 4000 ರನ್‌ ದಾಖಲೆ ಮಾಡಿದರು. ಈ ಮೂಲಕ ಸೂರ್ಯಕುಮಾರ್ ಯಾದವ್ ವೇಗವಾಗಿ ನಾಲ್ಕು ಸಾವಿರ ರನ್‌ ಸಿಡಿಸಿದರು. ಇವರಿಗಿಂತ ಕಡಿಮೆ ಎಸೆತದಲ್ಲಿ ಕ್ರಿಸ್‌ ಗೇಲ್‌ ಹಾಗೂ ಎಬಿಡಿ ವಿಲಿಯರ್ಸ್‌ ಮಾತ್ರ ಈ ಸಾಧನೆ ಮಾಡಿದ್ದಾರೆ.

ಸ್ಕೈ ತಮ್ಮ 160ನೇ ಐಪಿಎಲ್‌ ಪಂದ್ಯದಲ್ಲಿ ಈ ಸಾಧನೆ ಮಾಡಿದರು. ಈ ವೇಳೆ ಇವರು 145 ಇನಿಂಗ್ಸ್‌ಗಳಲ್ಲಿ ಅಂಗಳಕ್ಕೆ ಪ್ರವೇಶಿಸಿದ್ದಾರೆ. ಸೂರ್ಯ ಅವರ ಅಮೋಘ ವೃತ್ತಿ ಬದುಕಿನಲ್ಲಿ 2 ಶತಕ ಹಾಗೂ 26 ಅರ್ಧಶತಕಗಳು ಸೇರಿವೆ. ಈ ವೇಳೆ ಇವರ ಸ್ಟ್ರೈಕ್‌ ರೇಟ್‌ 146 ಆಗಿದೆ. ಇವರು 146 ಸ್ಟ್ರೈಕ್‌ ರೇಟ್‌ನಲ್ಲಿ 4000 ರನ್‌ ಕಲೆ ಹಾಕಿದ್ದಾರೆ. ಇವರಿಗಿಂತ ಹೆಚ್ಚಿನ ಸ್ಟ್ರೈಕ್‌ ರೇಟ್‌ನಲ್ಲಿ ಎಬಿ ಡಿವಿಲಿಯರ್ಸ್‌ (151.68) ಹಾಗೂ ಕ್ರಿಸ್‌ ಗೇಲ್‌ (148.96)ಈ ಸಾಧನೆ ಮಾಡಿದ್ದಾರೆ.

Suryakumar Yadav Becomes Fastest Indian to Score 4000 IPL Runs Shines Against Lucknow Super Giants


ಇನ್ನು ಮುಂಬೈ ಇಂಡಿಯನ್ಸ್‌ ತಂಡದ ಪರ 3000 ರನ್‌ಗಳ ಮೈಲುಗೈ ಸಾಧಿಸಿ ದಾಖಲೆ ಬರೆದರು. ಈ ಮೊದಲು ಕೀರನ್‌ ಪೋಲಾರ್ಡ್‌, ರೋಹಿತ್ ಶರ್ಮಾ ಮಾತ್ರ ಈ ಸಾಧನೆ ಮಾಡಿದ್ದರು. ಐಪಿಎಲ್‌ನಲ್ಲಿ 150 ಸಿಕ್ಸರ್‌ ಪೂರೈಸಿದ ದಾಖಲೆಯನ್ನು ಮಾಡಿದರು. ಮುಂಬೈ ಇಂಡಿಯನ್ಸ್ ಪರ ಎರಡನೇ ಬಾರಿ ಶತಕ ಬಾರಿಸಿದ ಹಿರಿಮೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಸೂರ್ಯ ಮುಂಬೈ ಪರ 2012ರಿಂದ ಆಡುತ್ತಿದ್ದಾರೆ. 2014ರಲ್ಲಿ ಇವರು ಕೆಕೆಆರ್‌ ಆಡಿದರು. ಅಲ್ಲದೆ 2017ರ ವರೆಗೂ ಕೋಲ್ಕತ್ತಾ ತಂಡದ ಪರ ಆಡಿ 2018ರಲ್ಲಿ ಮತ್ತೆ ಮುಂಬೈ ತಂಡ ಸೇರಿದರು.

Story first published: Sunday, April 27, 2025, 18:41 [IST]
Other articles published on Apr 27, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+