ಮಂಗಳವಾರ, ಡಿಸೆಂಬರ್ 12ರಂದು ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಭಾರತ ತಂಡದ ಸ್ಟಾರ್ ಬ್ಯಾಟ್ಸ್‌ಮನ್‌ಗಳಾದ ಸೂರ್ಯಕುಮಾರ್ ಯಾದವ್ ಮತ್ತು ರಿಂಕು ಸಿಂಗ್ ಅವರು ತಮ್ಮ ವೇಗದ ಅರ್ಧಶತಕಗಳಿಗೆ ಐಸಿಸಿ ಕಡೆಯಿಂದ ಬಹುಮಾನ ಪಡೆದಿದ್ದಾರೆ.
ಐಸಿಸಿ ಪುರುಷರ ಟಿ20 ಬ್ಯಾಟಿಂಗ್ ರ‍್ಯಾಂಕಿಂಗ್‌ನಲ್ಲಿ ಸೂರ್ಯಕುಮಾರ್ ಯಾದವ್ ಅಗ್ರಸ್ಥಾನದಲ್ಲಿ ಮುನ್ನಡೆ ಸಾಧಿಸಿದ್ದರೆ, ರಿಂಕು ಸಿಂಗ್ 46 ಸ್ಥಾನಗಳ ಮೇಲೇರಿ 59ನೇ ಸ್ಥಾನ ತಲುಪಿದ್ದಾರೆ.

ಸ್ಫೋಟಕ ಬಲಗೈ ಆಟಗಾರ ಸೂರ್ಯಕುಮಾರ್ ಯಾದವ್ ಕೇವಲ 36 ಎಸೆತಗಳಲ್ಲಿ 56 ರನ್ ಗಳಿಸಿದ ಬಳಿಕ, ಒಟ್ಟು 10 ರೇಟಿಂಗ್ ಪಾಯಿಂಟ್‌ಗಳನ್ನು ಗಳಿಸಿದರು. ಆದರೆ ರೋಚಕ ಪಂದ್ಯದಲ್ಲಿ ಭಾರತ ಐದು ವಿಕೆಟ್‌ಗಳಿಂದ ಸೋಲು ಕಂಡಿತು.
ಸೂರ್ಯಕುಮಾರ್ ಯಾದವ್ ಅವರು ಈಗ ಒಟ್ಟು 865 ರೇಟಿಂಗ್ ಪಾಯಿಂಟ್‌ಗಳನ್ನು ಹೊಂದಿದ್ದಾರೆ. ಇದು ಅವರ ಹತ್ತಿರದ ಪ್ರತಿಸ್ಪರ್ಧಿಗಳಾದ ಪಾಕಿಸ್ತಾನದ ಮೊಹಮ್ಮದ್ ರಿಜ್ವಾನ್ (787 ರೇಟಿಂಗ್ ಪಾಯಿಂಟ್‌ಗಳು) ಮತ್ತು ದಕ್ಷಿಣ ಆಫ್ರಿಕಾದ ಏಡೆನ್ ಮಾರ್ಕ್ರಾಮ್ (758) ಬಹಳ ದೂರವಿದ್ದಾರೆ.
2024ರ ಐಸಿಸಿ ಟಿ20 ವಿಶ್ವಕಪ್ ಪಂದ್ಯಾವಳಿ ಪ್ರಾರಂಭಕ್ಕೆ ಕೇವಲ ಆರು ತಿಂಗಳಿಗಿಂತ ಕಡಿಮೆ ಸಮಯವಿದೆ. ಕಳೆದ ವರ್ಷಾಂತ್ಯದಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್‌ನ ಇತ್ತೀಚಿನ ಆವೃತ್ತಿಯಲ್ಲಿ ಸೂರ್ಯಕುಮಾರ್ ಯಾದವ್ ಅಗ್ರ ಶ್ರೇಯಾಂಕವನ್ನು ಪಡೆದರು.
ಪ್ರಸ್ತುತ ಫಾರ್ಮ್‌ನಲ್ಲಿರುವುದನ್ನು ನೋಡಿದರೆ, ಮುಂದಿನ ವರ್ಷ ವೆಸ್ಟ್ ಇಂಡೀಸ್ ಮತ್ತು ಯುಎಸ್‌ಎನಲ್ಲಿ ನಡೆಯಲಿರುವ ಪಂದ್ಯಾವಳಿಯಲ್ಲಿ ಭಾರತೀಯ ಬ್ಯಾಟರ್ ಆ ಸ್ಥಾನವನ್ನು ಮುಂದುವರೆಸುವ ಸಾಧ್ಯತೆಯಿದೆ ಎಂದು ತೋರುತ್ತದೆ.

ದಕ್ಷಿಣ ಆಫ್ರಿಕಾದ ಆರಂಭಿಕ ಆಟಗಾರ ರೀಜಾ ಹೆಂಡ್ರಿಕ್ಸ್ ಅವರು ಭಾರತ ವಿರುದ್ಧ 49 ರನ್‌ಗಳ ನಂತರ, ಒಂದು ಸ್ಥಾನ ಮೇಲೇರಿ ಎಂಟನೇ ಸ್ಥಾನಕ್ಕೆ ತಲುಪಿದ ಆಟಗಾರನಾಗಿದ್ದಾರೆ. ತಿಲಕ್ ವರ್ಮಾ 10 ಸ್ಥಾನಗಳ ಮೇಲೇರಿ 55ನೇ ಸ್ಥಾನಕ್ಕೆ ಮತ್ತು ರಿಂಕು ಸಿಂಗ್ 46 ಸ್ಥಾನ ಮೇಲೇರಿ 59ನೇ ಸ್ಥಾನಕ್ಕೆ ತಲುಪಿದ್ದಾರೆ.
ಕಳೆದ ವಾರವಷ್ಟೇ ನೂತನ ನಂ.1 ಟಿ20 ಬೌಲರ್ ಆಗಿದ್ದ ಭಾರತದ ಯುವ ಸ್ಪಿನ್ನರ್ ರವಿ ಬಿಷ್ಣೋಯ್ ಈವರೆಗೆ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಆಡುವ 11ರ ಬಳಗದಲ್ಲಿ ಆಯ್ಕೆ ಕಳೆದುಕೊಂಡಿದ್ದಾರೆ.
ಇದು ಅಫ್ಘಾನಿಸ್ತಾನ ತಂಡದ ಪ್ರಮುಖ ಸ್ಪಿನ್ನರ್ ರಶೀದ್ ಖಾನ್ ಟಿ20 ಬೌಲರ್‌ಗಳ ಶ್ರೇಯಾಂಕದಲ್ಲಿ ರವಿ ಬಿಷ್ಣೋಯ್ ಅವರೊಂದಿಗೆ ಜಂಟಿ-ಅಗ್ರಸ್ಥಾನದಲ್ಲಿದ್ದಾರೆ.
ದಕ್ಷಿಣ ಆಫ್ರಿಕಾ ಸ್ಪಿನ್ನರ್ ತಬ್ರೈಜ್ ಶಮ್ಸಿ ಅವರ ಇತ್ತೀಚಿನ ಪಂದ್ಯದಲ್ಲಿ 18 ರನ್‌ಗಳಿಗೆ 1 ವಿಕೆಟ್ ಪಡೆದು ಅತ್ಯುತ್ತಮ ಎಕಾನಮಿ ಸ್ಪೆಲ್ ಮಾಡಿದರು. ಹೀಗಾಗಿ ಎರಡು ಸ್ಥಾನಗಳ ಏರಿಕೆಯೊಂದಿಗೆ 10ನೇ ಸ್ಥಾನಕ್ಕೆ ಲಗ್ಗೆ ಇಟ್ಟಿದ್ದಾರೆ.
ಭಾರತದ ಎಡಗೈ ಆಟಗಾರ ಕುಲದೀಪ್ ಯಾದವ್ ಅದೇ ಪಟ್ಟಿಯಲ್ಲಿ ಐದು ಸ್ಥಾನಗಳನ್ನು ಮೇಲಕ್ಕೇರಿ 32ನೇ ಸ್ಥಾನಕ್ಕೆ ತಲುಪಿದ್ದಾರೆ. ಆದರೆ ಏಡೆನ್ ಮಾರ್ಕ್ರಾಮ್ ಟಿ20 ಶ್ರೇಯಾಂಕದ ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ಎರಡು ಸ್ಥಾನಗಳ ಏರಿಕೆ ಕಂಡು, ಭಾರತದ ರವೀಂದ್ರ ಜಡೇಜಾ ನಂತರ ಎರಡನೇ ಸ್ಥಾನಕ್ಕೆ ತಲುಪಿದ್ದಾರೆ.