Suryakumar Yadav: ಮುಂಬೈ ಬಿಟ್ಟು ಗೋವಾ ಸೇರುತ್ತಾರಾ ಸೂರ್ಯಕುಮಾರ್ ಯಾದವ್?
ಟೀಮ್ ಇಂಡಿಯಾದ ಆಟಗಾರರು ಸದ್ಯ ಐಪಿಎಲ್‌ನಲ್ಲಿ ಬ್ಯೂಸಿ ಆಗಿದ್ದಾರೆ. ಈ ವೇಳೆ ಬರುತ್ತಿರುವ ಒಂದು ಸುದ್ದಿ ಯಶಸ್ವಿ ಜೈಸ್ವಾಲ್ ಮುಂದಿನ ಬಾರಿಯ ರಣಜಿ ಋತುವಿನಲ್ಲಿ ಮುಂಬೈ ಬಿಟ್ಟು ಗೋವಾ ಸೇರುತ್ತಾರೆ ಎಂಬ ಸುದ್ದಿ ಹರಿದಾಡುತ್ತಿದ್ದು. ಈ ವಿಚಾರಕ್ಕೆ ಎಂಸಿಎ ಮೂಲಗಳ ಖಚಿತ ಪಡಿಸಿದ ಬಳಿಕ, ಈಗ ಮತ್ತೊಬ್ಬ ಪ್ಲೇಯರ್ ಮುಂಬೈ ತೊರೆದು ಗೋವಾದತ್ತ ಪ್ರಯಾಣ ಬೆಳೆಸುತ್ತಾರೆ ಎಂಬ ಸುದ್ದಿಗಳು ಹರಿದಾಡುತ್ತಿದ್ದವು.
ಯಶಸ್ವಿ ಜೈಸ್ವಾಲ್ ಅವರು ಗೋವಾ ತಂಡದ ನಾಯಕರಾಗಿ ಕಾಣಿಸಿಕೊಳ್ಳಬಹುದು ಎಂದು ಹೇಳಲಾಗುತ್ತಿದೆ. ಇನ್ನು ಸೂರ್ಯ ಸಹ ಗೋವಾ ಪರ ಪಯಾಣ ಬೆಳೆಸಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಇದಕ್ಕೆ ಸ್ಪಷ್ಟನೆ ಸಹ ಸಿಕ್ಕಿದೆ.

ಮುಂಬೈ ಕ್ರಿಕೆಟ್ ಅಸೋಸಿಯೇಷನ್ ಈಗ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವದಂತಿಗಳನ್ನು ಸಂಪೂರ್ಣವಾಗಿ ನಿರಾಕಸಿರಿದೆ. ಸೂರ್ಯಕುಮಾರ್ ಯಾದವ್ ಮುಂದಿನ ಆವೃತ್ತಿ ದೇಶೀಯ ಟೂರ್ನಿಯಲ್ಲೂ ಮುಂಬೈ ಪರ ಕಣಕ್ಕೆ ಇಳಿಯುವುದು ಖಚಿತ ಎಂದು ತಿಳಿಸಿದೆ. ಈ ಎಲ್ಲ ವದಂತಿಗಳಿಗೆ ಮುಂಬೈ ಕ್ರಿಕೆಟ್ ಸಂಸ್ಥೆ ತೆರೆ ಎಳೆದಿದೆ. ಇದೆಲ್ಲಾ ಸತ್ಯಕ್ಕೆ ದೂರವಾದ ಸಂಗತಿ ಎಂದು ಎಂಸಿಎ ಕಾರ್ಯದರ್ಶಿ ಅಭಯ್ ಹಡಪ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸೂರ್ಯ ಹೇಳಿದ್ದೇನು?
ಸೂರ್ಯಕುಮಾರ್ ಮುಂಬೈ ಪರ ಆಡಲು ಹೆಮ್ಮೆ ಪಡುತ್ತಾರೆ. ಅವರೊಂದಿಗೆ ಈಗಾಗಲೇ ಸಂಪರ್ಕಿಸಲಾಗಿದೆ. ಇದೆಲ್ಲಾ ಸುಳ್ಳು ಸುದ್ದಿ. ಈ ಸುದ್ದಿಗಳು ಆಧಾರ ರಹಿತ ಎಂದು ಮುಂಬೈ ಧೃಡಪಿಸಿದೆ. ಇನ್ನು ಸಾಮಾಜಿಕ ತಾಣದಲ್ಲಿ ತಪ್ಪು ಮಾಹಿತಿಯನ್ನು ಹರದಂಡಂತೆ ಎಂದು ಸೂಚಿಸಿದೆ.
ಈ ಸಂಬಂಧ ಸೂರ್ಯಕುಮಾರ್ ಯಾದವ್ ಸಾಮಾಜಿಕ ಮಾಧ್ಯಮ ಪೋಸ್ಟ್ ಮೂಲಕ ಸುಳ್ಳು ಸುದ್ದಿ ಹರಡಿಸುತ್ತಿರುವರಿಗೆ ಛೀಮಾರಿ ಹಾಕಿದ್ದಾರೆ. ಅವರು ಸಾಮಾಜಿಕ ಮಾಧ್ಯಮದಲ್ಲಿ, "ನೀವು ಪತ್ರಕರ್ತರೋ ಅಥವಾ ಸ್ಕ್ರಿಪ್ಟ್ ರೈಟರ್ರೋ? ಎಂದು ಬರೆದಿದ್ದಾರೆ. ಅಲ್ಲದೆ ಇನ್ನು ಮುಂದೆ ನಾನು ನಗಲು ಬಯಸಿದರೆ, ಹಾಸ್ಯ ಕಾರ್ಯಕ್ರಮಗಳನ್ನು ನೋಡುವುದನ್ನು ಬಿಟ್ಟು ಈ ವರದಿಗಳನ್ನು ಓದುತ್ತೇನೆ ಎಂದು ಲೇವಡಿ ಮಾಡಿದ್ದಾರೆ.
ಗೋವಾ ಕ್ರಿಕೆಟ್ ತಂಡ ಇತ್ತೀಚೆಗೆ ಎಲೈಟ್ ಪಟ್ಟಿಗೆ ಬಡ್ತಿ ಪಡೆದಿದೆ. ಗೋವಾ ಕ್ರಿಕೆಟ್ ಅಸೋಸಿಯೇಷನ್ ಭಾರತದಾದ್ಯಂತದ ಆಟಗಾರರನ್ನು ಸಂಪರ್ಕಿಸುತ್ತಿದೆ ಎಂದು ತಿಳಿದು ಬಂದಿದೆ.
ಯಶಸ್ವಿ ಹೇಳಿದ್ದೇನು?
ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಆಟಗಾರ ಯಶಸ್ವಿ ಜೈಸ್ವಾಲ್ ಮುಂಬೈ ತೊರೆದು ಗೋವಾ ಸೇರಿದ್ದಾರೆ. ಈ ವೇಳೆ ಯಶಸ್ವಿ ಮೌನ ಮುರಿದಿದ್ದು, ಗೋವಾ ಸೇರಿದ್ದು ಏಕೆ ಎಂಬ ಪ್ರಶ್ನೆಗೆ ಉತ್ತರ ನೀಡಿದ್ದಾರೆ. ಮುಂದಿನ ದೇಶೀಯ ಟೂರ್ನಿಯಲ್ಲಿ ಗೋವಾ ಪರ ಆಡಲು ಯಶಸ್ವಿ, ಮುಂಬೈ ಕ್ರಿಕೆಟ್ ಸಂಸ್ಥೆಗೆ ಅನುಮತಿ ಕೋರಿದ್ದರು ಎಂದು ತಿಳಿದು ಬಂದಿತ್ತು. ಮುಂಬೈ ತೊರೆಯುವ ನಿರ್ಧಾರವು ತಮಗೆ "ತುಂಬಾ ಕಷ್ಟಕರವಾಗಿತ್ತು" ಮತ್ತು ತಮ್ಮ ವೃತ್ತಿಜೀವನದಲ್ಲಿ ಇಂದು ಈ ಸ್ಥಿತಿಗೆ ಎಂಸಿಎಗೆ ಯಾವಾಗಲೂ ಋಣಿಯಾಗಿರುತ್ತೇನೆ ಎಂದು ಯಶಸ್ವಿ ಜೈಸ್ವಾಲ್ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications