ಸೂರ್ಯಕುಮಾರ್ ಯಾದವ್: ಎಂಎಸ್ ಧೋನಿಯನ್ನು ಹಿಂದಿಕ್ಕಲು ಸೂರ್ಯನಿಗೆ ಬೇಕು ಇಷ್ಟು ಸಿಕ್ಸರ್!
ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ ಭಾರತ ತಂಡ ಬಾಂಗ್ಲಾದೇಶ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯನ್ನು ಗೆದ್ದಿದೆ. ಮೊದಲೆರಡು ಪಂದ್ಯಗಳ ಗೆಲುವಿನೊಂದಿಗೆ ತಂಡ 2-0 ಅಂತರದ ಅಜೇಯ ಮುನ್ನಡೆ ಸಾಧಿಸಿದೆ.
ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆಯಲಿರುವ ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ ಭಾರತ ತಂಡ ಬಾಂಗ್ಲಾದೇಶವನ್ನು ಕ್ಲೀನ್ ಸ್ವೀಪ್ ಮಾಡುವ ನಿರೀಕ್ಷೆಯಲ್ಲಿದೆ. ಈ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ದೊಡ್ಡ ದಾಖಲೆ ಮಾಡುವ ಅವಕಾಶವನ್ನು ಹೊಂದಿದ್ದಾರೆ. ಈ ದಾಖಲೆ ಸೃಷ್ಟಿಸುವ ಮೂಲಕ ಅವರು, ಮಾಜಿ ನಾಯಕ ಎಂಎಸ್ ಧೋನಿಯನ್ನು ಹಿಂದಿಕ್ಕಬಹುದು.

ಟಿ20 ಕಿಂಗ್ ಸೂರ್ಯ
ಕಳೆದ ಮೂರು ವರ್ಷಗಳಿಂದ ವಿಶ್ವ ಟಿ20 ಕ್ರಿಕೆಟ್‌ನಲ್ಲಿ ಸೂರ್ಯಕುಮಾರ್ ಯಾದವ್ ಅಬ್ಬರಿಸುತ್ತಿದ್ದಾರೆ. ಹೀಗಾಗಿ ಅವರು ಟಿ20 ನಂಬರ್ ಒನ್ ಬ್ಯಾಟರ್ ಆಗಿ ಉಳಿದಿದ್ದಾರೆ. ಇಲ್ಲಿವರಗೂ ಯಾವ ಬ್ಯಾಟರ್ ಕೂಡ ಸೂರ್ಯಕುಮಾರ್ ಅವರನ್ನು ಹಿಂದಿಕ್ಕಲು ಸಾಧ್ಯವಾಗಿಲ್ಲ. ಅಷ್ಟರ ಮಟ್ಟಿಗೆ ಟಿ20 ಕ್ರಿಕೆಟ್‌ನಲ್ಲಿ ಅವರು ತಮ್ಮ ಅಮೋಘ ಬ್ಯಾಟಿಂಗ್ ಪ್ರದರ್ಶನದ ಮೂಲಕ ಪ್ರಾಬಲ್ಯ ಸಾಧಿಸಿದ್ದಾರೆ.
ಇದೀಗ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಹೊಡೆದಿರುವ ಪಟ್ಟಿಯಲ್ಲಿ ಎಂಎಸ್ ಧೋನಿಯನ್ನು ಸೂರ್ಯಕುಮಾರ್ ಯಾದವ್ ಹಿಂದಿಕ್ಕುವ ಅವಕಾಶವನ್ನು ಹೊಂದಿದ್ದಾರೆ. ಧೋನಿ ದಾಖಲೆಯನ್ನು ಮುರಿಯಲು ಸೂರ್ಯ ಒಂದು ದೊಡ್ಡ ಇನ್ನಿಂಗ್ಸ್ ಆಡಬೇಕಾಗಿದೆ. ಸೂರ್ಯಕುಮಾರ್ ಇದುವರಗೆ ಟಿ20 ಕ್ರಿಕೆಟ್‌ನಲ್ಲಿ328 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿರುವ ಧೋನಿ 338 ಸಿಕ್ಸರ್‌ಗಳನ್ನು ಹೊಂದಿದ್ದಾರೆ. ಧೋನಿಯನ್ನು ಹಿಂದಿಕ್ಕಲು ಸೂರ್ಯ 11 ಸಿಕ್ಸರ್‌ಗಳ ಅವಶ್ಯಕವಿದೆ. ಸೂರ್ಯ ಬ್ಯಾಟಿಂಗ್ ಮಾಡುವ ರೀತಿ ನೋಡಿದರೆ ಬಾಂಗ್ಲಾದೇಶ ವಿರುದ್ಧ ಮೂರನೇ ಟಿ20 ಪಂದ್ಯದಲ್ಲಿ ಈ ದಾಖಲೆ ಮಾಡುವ ಸಾಧ್ಯತೆಯಿದೆ. ಅವರಿಗೆ ಈ ದಾಖಲೆ ಮಾಡೋದು ದೊಡ್ಡ ವಿಷಯವಲ್ಲ.
ಮತ್ತೊಂದೆಡೆ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಿಂದ ನಿವೃತ್ತಿಯಾಗಿರುವ ರೋಹಿತ್ ಶರ್ಮಾ, ಚುಟುಕು ಮಾದರಿಯಲ್ಲಿ ಭಾರತ ಪರ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಬ್ಯಾಟರ್ ಆಗಿದ್ದಾರೆ. ಅವರು ಇದುವರೆಗೆ 525 ಸಿಕ್ಸರ್‌ಗಳನ್ನು ಚಚ್ಚಿದ್ದಾರೆ. ಇದಲ್ಲದೆ, 500 ಸಿಕ್ಸರ್‌ಗಳ ಗಡಿ ಮುಟ್ಟಿದ ಏಕೈಕ ಭಾರತೀಯ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಹೆಸರು ಎರಡನೇ ಸ್ಥಾನದಲ್ಲಿದೆ. ಕೊಹ್ಲಿ ಸಹಾ ಈ ವರ್ಷ ಟಿ20 ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದು, 416 ಸಿಕ್ಸರ್‌ಗಳನ್ನು ಹೊಡೆದಿದ್ದಾರೆ.
ಗೇಲ್ ಹೆಸರಿನಲ್ಲಿ ವಿಶ್ವ ದಾಖಲೆ
ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ದಾಖಲೆಯನ್ನು ವೆಸ್ಟ್ ಇಂಡೀಸ್‌ನ ಸ್ಪೋಟಕ ಬ್ಯಾಟರ್ ಕ್ರಿಸ್ ಗೇಲ್ ಹೊಂದಿದ್ದಾರೆ. ಗೇಲ್ 1056 ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ಆಗ್ರ ಸ್ಥಾನದಲ್ಲಿದ್ದಾರೆ. ಇದಾದ ನಂತರ, ಎರಡನೇ ಸ್ಥಾನದಲ್ಲಿ 897 ಸಿಕ್ಸರ್‌ಗಳನ್ನು ಬಾರಿಸಿರುವ ವೆಸ್ಟ್ ಇಂಡೀಸ್‌ನ ಮತ್ತೊರ್ವ ಆಟಗಾರ ಕೀರಾನ್ ಪೊಲಾರ್ಡ್ ಇದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications