ಮುಂಬೈ ಇಂಡಿಯನ್ಸ್ ಈ ಬಾರಿಯ ಐಪಿಎಲ್‌ನಲ್ಲಿ ಸಾಲು ಸಾಲು ಸೋಲುಗಳಿಂದ ಕಂಗೆಟ್ಟಿದೆ. ಈ ವೇಳೆ ಎಂಐ ಸೋಮವಾರ ತನ್ನ ತವರಿನಲ್ಲಿ ಮೊದಲ ಪಂದ್ಯವನ್ನು ಆಡಲಿದೆ. ಈ ವೇಳೆ ಮುಂಬೈ ಇಂಡಿಯನ್ಸ್ ತಂಡದ ಸ್ಟಾರ್ ಆಟಗಾರರು ಲಯಕ್ಕೆ ಮರಳಲು ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಸೋಮವಾರ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಎಲ್ಲರ ಕಣ್ಣುಗಳು ಸ್ಟಾರ್ ಸ್ಟಾರ್ ಆಟಗಾರ ಸೂರ್ಯಕುಮಾರ್ ಯಾದವ್ ಅವರ ಮೇಲೆ ಎಲ್ಲರ ಚಿತ್ತು ನೆಟ್ಟಿರಲಿವೆ.
ಮುಂಬೈ ತಂಡದ ಸ್ಟಾರ್ ಆಟಗಾರರು ರನ್ ಕಲೆ ಹಾಕುವಲ್ಲಿ ವಿಫಲರಾಗುತ್ತಿರುವುದು ತಂಡದ ಚಿಂತೆಯನ್ನು ಹೆಚ್ಚಿಸಿದೆ. ಈ ವೇಳೆ ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ 48 ರನ್ ಸಿಡಿಸಿ ಮಿಂಚಿದ್ದರು. ಈ ಪ್ಲೇಯರ್ ಕೆಕೆಆರ್ ವಿರುದ್ಧವೂ ಇದೇ ಪ್ರದರ್ಶನ ನೀಡುವ ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಕೆಕೆಆರ್ ವಿರುದ್ಧ ಸೂರ್ಯ ಸ್ಥಿರ ಪ್ರದರ್ಶನ ನೀಡುವಲ್ಲಿ ಸಫಲರಾದಲ್ಲಿ ದೊಡ್ಡ ದಾಖಲೆಯನ್ನು ನಿರ್ಮಿಸಬಹುದು.

ಕೋಲ್ಕತ್ತಾ ವಿರುದ್ಧದ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ 20 ರನ್‌ಗಳನ್ನು ಬಾರಿಸುವಲ್ಲಿ ಯಶಸ್ವಿಯಾದರೆ, ದೊಡ್ಡ ದಾಖಲೆಯನ್ನು ಬರೆಯಬಹುದಾಗಿದೆ. ಸ್ಕೈ ಖ್ಯಾತಿಯ ಬ್ಯಾಟರ್ ಟಿ20 ಕ್ರಿಕೆಟ್‌ನಲ್ಲಿ 311 ಪಂದ್ಯಗಳ 287 ಇನ್ನಿಂಗ್ಸ್‌ಗಳಲ್ಲಿ 7980 ರನ್ ಗಳಿಸಿದ್ದಾರೆ. ಈ ವೇಳೆ 6 ಶತಕ ಹಾಗೂ 54 ಅರ್ಧಶತಕಗಳು ಸೇರಿವೆ. ಸೂರ್ಯ ಸೋಮವಾರದ ಪಂದ್ಯದಲ್ಲಿ 20 ರನ್ ಸಿಡಿಸಿದರೆ, ಟಿ20 ಕ್ರಿಕೆಟ್‌ನಲ್ಲಿ 8 ಸಾವಿರ ರನ್ ಕಲೆ ಹಾಕಿದ ಸಾಧನೆ ಮಾಡಲಿದ್ದಾರೆ.
ಕೋಲ್ಕತ್ತಾದ ವಿರುದ್ಧದ ಪಂದ್ಯದಲ್ಲಿ 20 ರನ್ ಸಿಡಿಸಿದರೆ, 8 ಸಾವಿರ ರನ್ ಕಲೆ ಹಾಕಲಿದ್ದಾರೆ. ಈ ಮೂಲಕ ವಿಶ್ವ ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದ ವಿಶ್ವದ 35ನೇ ಬ್ಯಾಟರ್ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಳ್ಳಲಿದ್ದಾರೆ. ಇನ್ನು ಈ ಸಾಧನೆಯನ್ನು ಮಾಡಿದ ಭಾರತದ ಪರ ಈ ಸಾಧನೆ ಮಾಡಿದ 5ನೇ ಬ್ಯಾಟರ್ ಎಂಬ ಹಿರಿಮೆಯನ್ನು ತಮ್ಮದಾಗಿಸಿಕೊಳ್ಳಲಿದ್ದಾರೆ. ಇಲ್ಲಿಯವರೆಗೆ ಭಾರತದ ಪರ ಟಿ20 ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಶಿಖರ್ ಧವನ್ ಮತ್ತು ಸುರೇಶ್ ರೈನಾ ಮಾತ್ರ ಈ ಸಾಧನೆ ಮಾಡಿದ್ದಾರೆ.
ವಿರಾಟ್ ಕೊಹ್ಲಿ, 12976
ರೋಹಿತ್ ಶರ್ಮಾ, 11838
ಶಿಖರ್ ಧವನ್, 9797
ಸುರೇಶ್ ರೈನಾ, 8654
ಸೂರ್ಯಕುಮಾರ್ ಯಾದವ್, 7980
ಸೂರ್ಯಕುಮಾರ್ ಯಾದವ್ ಈ ವರೆಗೆ ಐಪಿಎಲ್‌ನಲ್ಲಿ 152 ಪಂದ್ಯಗಳನ್ನು ಆಡಿದ್ದು, 32.49ರ ಸರಾಸರಿಯಲ್ಲಿ 3671 ರನ್ ಸಿಡಿಸಿದ್ದಾರೆ. ಈ ವೇಳೆ 2 ಶತಕಗಳು ಹಾಗೂ 24 ಅರ್ಧಶತಕಗಳು ಮೂಡಿ ಬಂದಿವೆ. ಅಲ್ಲೆದ 388 ಬೌಂಡರಿ, 135 ಸಿಕ್ಸರ್ ದಾಖಲಿಸಿದ ಹಿರಿಮೆ ತಮ್ಮದಾಗಿಸಿಕೊಂಡಿದ್ದಾರೆ. ಅಲ್ಲದೆ ಐಪಿಎಲ್‌ನಲ್ಲಿ ಇವರು 68 ಕ್ಯಾಚ್‌ಗಳನ್ನು ಪಡೆದ ಹಿರಿಮೆ ಹೊಂದಿದ್ದಾರೆ.