19 ತಿಂಗಳ ಬಳಿಕ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯುವ ಬಯಕೆ
ಟೀಮ್ ಇಂಡಿಯಾದ ಟಿ20 ಸ್ಪೇಷಲಿಸ್ಟ್ ಆಟಗಾರ ಸೂರ್ಯಕುಮಾರ್ ಯಾದವ್, ತಮ್ಮ ಧಮಾಕೆದಾರ್ ಬ್ಯಾಟಿಂಗ್ ಶೈಲಿಯಿಂದ ಅಭಿಮಾನಿಗಳ ಮನ ಗೆದಿದ್ದಾರೆ. ಚುಟುಕು ಕ್ರಿಕೆಟ್‌ನ ಸಾಮ್ರಾಟನಾದರೂ ಸೂರ್ಯಗೆ ಆ ಒಂದು ಚಡಪಡಿಕೆ ಈಗಲೂ ಕಾಡುತ್ತಿದೆ. ಆ ಒಂದು ಕನಸಿನ ಬೆನ್ನು ಏರಿ ಸ್ಕೈ ಸತತ ಪ್ರಯತ್ನ ನಡೆಸುತ್ತಿದ್ದಾರೆ.
ಬ್ಲ್ಯೂ ಜೆರ್ಸಿಯಲ್ಲಿ ಅಮೋಘ ಪ್ರದರ್ಶನ ನೀಡಿರುವ ಸೂರ್ಯಕುಮಾರ್ ಯಾದವ್ ಅಮೋಘ ಪ್ರದರ್ಶನ ನೀಡುತ್ತಿದ್ದಾರೆ. ತಮ್ಮ ಸ್ಥಿರ ಪ್ರದರ್ಶನದ ಫಲವಾಗಿ ಸ್ಕೈ ಸೀಮಿತ ಓವರ್‌ಗಳ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಇವರು ಮೈದಾನಕ್ಕೆ ಎಂಟ್ರಿ ನೀಡಿದರೆ, ಎದುರಾಳಿಗಳಿಗೆ ನಡುಕ. ಇಷ್ಟೇಲ್ಲಾ ಹವಾ ಕ್ರಿಯೆಟ್ ಮಾಡಿರುವ ಕ್ರಿಕೆಟ್ ಆದರೂ ಆ ಒಂದು ಕನಸು ಮಾತ್ರ ಸೂರ್ಯರನ್ನು ಬಹುವಾಗಿ ಕಾಡುತ್ತಿದೆ.

ವಿಶ್ವಕಪ್‌ನಲ್ಲಿ ಅಮೋಘ ಪ್ರದರ್ಶನ
ಇತ್ತೀಚಿಗೆ ವೆಸ್ಟ್ ಇಂಡೀಸ್ ಹಾಗೂ ಅಮೆರಿಕದಲ್ಲಿ ನಡೆದಿದ್ದ ಟಿ20 ವಿಶ್ವಕಪ್‌ನಲ್ಲಿ ಭಾರತ ಅಮೋಘ ಪ್ರದರ್ಶನ ನೀಡಿ ಜಯ ಸಾಧಿಸಿತು. ಈ ಗೆಲುವಿನಲ್ಲಿ ಸೂರ್ಯಕುಮಾರ್ ಯಾದವ್ ಹೀರೋ ಆದರು. ಹಾರ್ದಿಕ್ ಪಾಂಡ್ಯ ಅವರು ಎಸೆದ ಇನಿಂಗ್ಸ್‌ನ ಕೊನೆಯ ಓವರ್‌ನಲ್ಲಿ ಸೂರ್ಯ, ಲಾಂಗ್ ಆನ್ ಮೇಲೆ ಸಿಕ್ಸರ್ ಬಾರಿಸಲು ಮುಂದಾದರು. ಚೆಂಡು ಬೌಂಡರಿ ಗೇರೆಯನ್ನು ಇನ್ನೇನು ದಾಟಿಯೇ ಬಿಟ್ಟಿತು ಎಂದು ಕೊಂಡಿರುವಾಗಲೇ, ಸೂರ್ಯಕುಮಾರ್ ಯಾದವ್ ಸೂಪರ್ ಮ್ಯಾನ್ ರೀತಿ ಫೀಲ್ಡ್ ಮಾಡಿ ಜಯ ಸಾಧಿಸಿದರು.
ಆಸ್ಟ್ರೇಲಿಯಾ ವಿರುದ್ಧ ನನಸಾದ ಕನಸು
ಸೂರ್ಯ ಇಷ್ಟೆಲ್ಲಾ ಸಾಧನೆಯನ್ನು ಕ್ರಿಕೆಟ್ ಅಂಗಳದಲ್ಲಿ ಮಾಡುತ್ತಾ ಇದ್ದರೂ ಸಹ ಅವರಿಗೆ ಸಮಾಧಾನ ಮಾತ್ರ ಇರಲಿಲ್ಲ. ಅವರಿಗೆ ಅದೊಂದು ಸಾಧಿಸುವ ಬಯಕೆ ಮಾತ್ರ ಬಹುವಾಗಿತ್ತು. ಆ ಕನಸು ಫೆಬ್ರವರಿ 9, 2023ರಲ್ಲಿ ನನಸಾಯಿತು. ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್‌ಗೆ ಪದಾರ್ಪಣೆ ಮಾಡಿದರು. ಆಗ ಅವರ ಟೆಸ್ಟ್ ಆಡುವ ಕನಸು ನನಸಾಗಿದೆ. ಆದರೆ ಆ ಕನಸು ಹೆಚ್ಚು ಫಲಿಸಲಿಲ್ಲ. ಹೀಗಾಗಿ ತಮ್ಮಲ್ಲಿಯೂ ಟೆಸ್ಟ್ ಆಡುವ ಕ್ಷಮತೆ ಇದೆ ಎಂದು ಸಾಬೀತು ಮಾಡಲು ಸೂರ್ಯ ಮುಂದಾಗಿದ್ದಾರೆ.
ಬುಚ್ಚಿ ಬಾಬು ಟೂರ್ನಿಯಲ್ಲಿ ಸ್ಕೈ
ಈಗಾಗಲೇ ಶ್ರೀಲಂಕಾ ಪ್ರವಾಸ ಮುಗಿಸಿರುವ ಸೂರ್ಯ ಸದ್ಯ ರೆಸ್ಟ್‌ನಲ್ಲಿದ್ದಾರೆ. ಆದರೆ ಈ ಸಮಯವನ್ನು ಬಳಸಿಕೊಂಡು ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯುವ ಕನಸು ಸ್ಕೈ ಅವರದ್ದಾಗಿದೆ. ಸೂರ್ಯ ಸದ್ಯ ಮುಂಬೈ ತಂಡದ ಪರ ಬುಚ್ಚಿ ಬಾಬು ಕ್ರಿಕೆಟ್ ಟೂರ್ನಿಯಲ್ಲಿ ಆಡಲಿದ್ದಾರೆ. ಈ ಮೂಲಕ ರೆಡ್ ಬೌಲ್ ಕ್ರಿಕೆಟ್‌ಗೆ ಕಂಬ್ಯಾಕ್ ಮಾಡುವ ಕನಸು ಹೊಂದಿದ್ದಾರೆ.

ಮುಂದಿನ ತಿಂಗಳು ಬಾಂಗ್ಲಾದೇಶದ ವಿರುದ್ಧ ನಡೆಯಲಿರುವ ಟೆಸ್ಟ್ ತಂಡದಲ್ಲಿ ಸೂರ್ಯ ಸ್ಥಾನ ಪಡೆಯುವ ಉದ್ದೇಶ ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಬುಚ್ಚಿ ಬಾಬು ಕ್ರಿಕೆಟ್ ಟೂರ್ನಿಯಲ್ಲಿ ಅಬ್ಬರ ನಡೆಸಿ, 19 ತಿಂಗಳ ಬಳಿಕ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯುವ ಹಂಬಲ ಹೊಂದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications