For Quick Alerts
ALLOW NOTIFICATIONS  
For Daily Alerts
 

Suryakumar Yadav: ಡಬಲ್‌ ದಾಖಲೆಯ ಮೇಲೆ ಸೂರ್ಯ ಕಣ್ಣು

ಟೀಮ್ ಇಂಡಿಯಾ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಮೂರನೇ ಟಿ20 ಪಂದ್ಯ ಧರ್ಮಶಾಲಾದಲ್ಲಿ ನಡೆಯಲಿದೆ. ಈ ಪಂದ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಈ ವೇಳೆ ಟೀಮ್ ಇಂಡಿಯಾದ ನಾಯಕ ಸೂರ್ಯಕುಮಾರ್ ಯಾದವ್ ಅವರು ದೊಡ್ಡ ದಾಖಲೆಯನ್ನು ಬರೆಯುವ ಕನಸಿನಲ್ಲಿದ್ದಾರೆ. ಇವರು ಟಿ20 ಕ್ರಿಕೆಟ್‌ನಲ್ಲಿ ಡಬಲ್‌ ದಾಖಲೆಯನ್ನು ಬರೆಯುವ ಆಸೆಯನ್ನು ಹೊಂದಿದ್ದಾರೆ.

ಸದ್ಯ ಟೀಮ್ ಇಂಡಿಯಾದ ನಾಯಕ ಸೂರ್ಯಕುಮಾರ್ ಯಾದವ್ ಕಳಪೆ ಫಾರ್ಮ್‌ನಿಂದ ಬಳಲುತ್ತಿದ್ದಾರೆ. ಇವರು ಕೆಲವು ಪಂದ್ಯಗಳಲ್ಲಿ ಲಯಕಂಡುಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಧರ್ಮಶಾಲಾದಲ್ಲಿ ನಡೆಯಲಿರುವ ಪಂದ್ಯದಲ್ಲಿ ಸೂರ್ಯ ದೊಡ್ಡ ಇನಿಂಗ್ಸ್ ಕಟ್ಟುವಲ್ಲಿ ಯಶಸ್ವಿಯಾದರೆ, ಹಲವು ದಾಖಲೆಗಳನ್ನು ನಿರ್ಮಿಸಬಹುದಾಗಿದೆ. ಸೂರ್ಯ ಟಿ20 ಸ್ವರೂಪದಲ್ಲಿ 9000 ರನ್ ಮತ್ತು 400 ಸಿಕ್ಸರ್‌ಗಳನ್ನು ಪೂರ್ಣಗೊಳಿಸುವ ಹೊಸ್ತಿಲಲ್ಲಿ ನಿಂತಿದ್ದಾರೆ.

Suryakumar Yadav Eyes Double T20 Milestone in Dharamsala Match 9000 Runs and 400 Sixes

ಸೂರ್ಯಕುಮಾರ್ ಯಾದವ್ ಟಿ20 ಕ್ರಿಕೆಟ್‌ನ ಸ್ಟಾರ್ ಆಟಗಾರ ಎಂಬುದರಲ್ಲಿ ಎರಡು ಮಾತಿಲ್ಲ. ಇವರು ಈ ವರೆಗೆ ಆಡಿದ 344 ಪಂದ್ಯಗಳಲ್ಲಿ 8958 ರನ್ ಗಳಿಸಿದ್ದಾರೆ. ಮೂರನೇ ಪಂದ್ಯದಲ್ಲಿ 42 ರನ್‌ಗಳು ಬೇಕು. ಈ ಸಾಧನೆಯನ್ನು ಮಾಡುವಲ್ಲಿ ಯಶಸ್ವಿಯಾದರೆ, ಸೂರ್ಯ ದೊಡ್ಡ ದಾಖಲೆಯನ್ನು ನಿರ್ಮಿಸಬಹುದು. ಈ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ನಂಬರ್ 1 ಸ್ಥಾನದಲ್ಲಿದ್ದಾರೆ. ಇವರು 13543 ರನ್ ಗಳಿಸಿದ್ದಾರೆ.


ಟಿ20 ಕ್ರಿಕೆಟ್‌ನಲ್ಲಿ ಹೆಚ್ಚು ರನ್‌

ವಿರಾಟ್‌ ಕೊಹ್ಲಿ, 414 ಪಂದ್ಯ, 13543 ರನ್‌
ರೋಹಿತ್ ಶರ್ಮಾ, 463 ಪಂದ್ಯ, 12248 ರನ್‌
ಶಿಖರ್‌ ಧವನ್‌, 334 ಪಂದ್ಯ, 9797 ರನ್‌
ಸೂರ್ಯಕುಮಾರ್ ಯಾದವ್, 344 ಪಂದ್ಯ, 8958 ರನ್‌

5 ಸಿಕ್ಸರ್ ಬಾರಿಸುತ್ತಲೇ ದಾಖಲೆ

ಇನ್ನೊಂದು ದಾಖಲೆಯನ್ನು ನಿರ್ಮಿಸುವ ಕನಸು ಸೂರ್ಯಕುಮಾರ್ ಅವರದ್ದಾಗಿದೆ. ಇವರು ಆಡಿರುವ 344 ಪಂದ್ಯಗಳಲ್ಲಿ 395 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಈ ಸ್ವರೂಪದಲ್ಲಿ 400 ಅಥವಾ ಅದಕ್ಕಿಂತ ಹೆಚ್ಚು ಸಿಕ್ಸರ್‌ ಬಾರಿಸಲು ಸೂರ್ಯಕುಮಾರ್‌ಗೆ ಇನ್ನು ಐದು ಸಿಕ್ಸರ್ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಸೂರ್ಯ ಕಣ್ಣು ನೆಟ್ಟಿದ್ದಾರೆ. ಟೀಮ್ ಇಂಡಿಯಾದ ಸ್ಟಾರ್ ಆಟಗಾರ ರೋಹಿತ್‌ ಶರ್ಮಾ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಇವರು ಆಡಿದ 463 ಟಿ20 ಪಂದ್ಯಗಳಲ್ಲಿ 547 ಸಿಕ್ಸರ್ ಸಿಡಿಸಿದ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಇನ್ನು ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿ ವಿರಾಟ್‌ ಕೊಹ್ಲಿ ಇದ್ದಾರೆ. ಇವರು ಆಡಿದ 414 ಪಂದ್ಯಗಳಲ್ಲಿ 435 ಸಿಕ್ಸರ್‌ ಬಾರಿಸಿದ್ದಾರೆ.

ಸೂರ್ಯಕುಮಾರ್ ಯಾದವ್ ಮೂರನೇ ಟಿ20 ಪಂದ್ಯದಲ್ಲಿ ಲಯಕ್ಕೆ ಮರಳಿ ಬಿಗ್ ಇನಿಂಗ್ಸ್ ಕಟ್ಟಿದಲ್ಲಿ ಈ ಎರಡೂ ದಾಖಲೆಗಳನ್ನು ಬರೆಯಬಹುದು. ಈ ದಾಖಲೆ ಧರ್ಮಶಾಲಾದಲ್ಲಿ ನಡೆಯಲಿರುವ ಮೂರನೇ ಟಿ20 ಪಂದ್ಯದಲ್ಲಿ ನಿರ್ಮಾಣವಾಗುತ್ತವಾ ಎಂಬುದೇ ಅಭಿಮಾನಿಗಳ ಪ್ರಶ್ನೆಯಾಗಿದೆ.

Story first published: Sunday, December 14, 2025, 11:03 [IST]
Other articles published on Dec 14, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+