Suryakumar Yadav: ಟಿ20 ಸರಣಿಯಲ್ಲಿ ಸೂರ್ಯಕುಮಾರ್ ಎಲೈಟ್ ಕ್ಲಬ್ ಸನಿಹ
ಒಂದು ಸರಣಿ ಆರಂಭವಾಗುವ ಮುನ್ನ ದಾಖಲೆಗಳ ಪುಟಗಳನ್ನು ತಿರಿವಿ ಹಾಕಬೇಕಾಗುತ್ತದೆ. ಅಂದಾಗ ಯಾವ ದಾಖಲೆಯ ಸನಿಹದಲ್ಲಿ ಯಾವ ಪ್ಲೇಯರ್ ಇದ್ದಾರೆ ಎಂದು ತಿಳಿಯುತ್ತದೆ. ಸ್ಟಾರ್ ಆಟಗಾರರು ಮೈದಾನಕ್ಕೆ ಇಳಿದಾಗಲೆಲ್ಲಾ ರೆಕಾರ್ಡ್ ಕುತೂಹಲ ಇದ್ದೇ ಇರುತ್ತದೆ. ಈ ಬಾರಿ ಸಹ ಸೂರ್ಯಕುಮಾರ್ ಯಾದವ್ ಇಂಗ್ಲೆಂಡ್ ವಿರುದ್ಧ ಟಿ20 ಸರಣಿ ಆಡಲು ಮೈದಾನಕ್ಕೆ ಇಳಿಯುತ್ತಿದ್ದಂತೆ ದಾಖಲೆಯ ಮೇಲೆ ಕಣ್ಣು ನೆಟ್ಟಿರಲಿದೆ.
ಬುಧವಾರದಿಂದ ಭಾರತ ಹಾಗೂ ಇಂಗ್ಲೆಂಡ್ ವಿರುದ್ಧ ಟಿ20 ಸರಣಿ ಆರಂಭವಾಗಲಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾವನ್ನು ಸೂರ್ಯಕುಮಾರ್ ಯಾದವ್ ಮುನ್ನಡೆಸಲಿದ್ದಾರೆ. ಕಳೆದ ವರ್ಷ ಟಿ20 ಕ್ರಿಕೆಟ್‌ನಲ್ಲಿ ಅಮೋಘ ಫಾರ್ಮ್‌ನಲ್ಲಿದ್ದ ಸ್ಕೈ ಅದೇ ಫಾರ್ಮ್ ಕಂಟಿನ್ಯೂ ಮಾಡುವ ಇರಾದೆಯನ್ನು ಹೊಂದಿದ್ದಾರೆ. ಈ ಬಾರಿ ಇಂಗ್ಲೆಂಡ್ ವಿರುದ್ಧ ಸೂರ್ಯಕುಮಾರ್ ಸ್ಥಿರ ಬ್ಯಾಟಿಂಗ್ ಪ್ರದರ್ಶನ ನೀಡಿದರೆ, ಮತ್ತೊಂದು ದಾಖಲೆಯನ್ನು ಬರೆಯಬಹುದು. ಆ ದಾಖಲೆ ಯಾವುದು ಎಂಬ ಬಗ್ಗೆ ವಿವರ ಇಲ್ಲಿದೆ.

ಯಾವ ದಾಖಲೆಯ ಸನಿಹದಲ್ಲಿ ಸೂರ್ಯ
ಟಿ20 ಕ್ರಿಕೆಟ್‌ನಲ್ಲಿ ಸೂರ್ಯಕುಮಾರ್ ಯಾದವ್ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆದಿದ್ದಾರೆ. ಈ ಬಾರಿ ಇಂಗ್ಲೆಂಡ್ ವಿರುದ್ಧ ಸರಣಿಯಲ್ಲಿ ಸಿಕ್ಸರ್‌ಗಳನ್ನು ಸುಲಭವಾಗಿ ಬಾರಿಸಿದ್ದೇ ಆದಲ್ಲಿ ದಾಖಲೆಯ ಪುಟಕ್ಕೆ ಎಂಟ್ರಿ ನೀಡಬಹುದು. ಸದ್ಯ ಸೂರ್ಯಕುಮಾರ್ ಯಾದವ್ ಟಿ20 ಕ್ರಿಕೆಟ್‌ನಲ್ಲಿ 145 ಸಿಕ್ಸರ್‌ಗನ್ನು ಹೊಂದಿದ್ದಾರೆ. ಐದು ಪಂದ್ಯಗಳ ಸರಣಿಯಲ್ಲಿ ಇನ್ನು ಐದು ಸಿಕ್ಸರ್ ಬಾರಿಸಿದರೆ ಸೂರ್ಯ ವಿಶೇಷ ಎಲೈಟ್ ಕ್ಲಬ್ ಸೇರಲಿದ್ದಾರೆ.
ಸೂರ್ಯ ಭಾರತದ ಪರ 78 ಟಿ20 ಪಂದ್ಯಗಳನ್ನು ಆಡಿದ್ದು, 2570 ರನ್‌ಗಳನ್ನು ದಾಖಲಿಸಿದ್ದಾರೆ. ಈ ವೇಳೆ 4 ಶತಕ ಹಾಗೈ 21 ಅರ್ಧಶತಕ ಸಹ ಸೇರಿವೆ. ಇಂಗ್ಲೆಂಡ್ ವಿರುದ್ಧ 5 ಸಿಕ್ಸರ್ ಸಿಡಿಸಿದರೆ, ಸೂರ್ಯ ಟಿ20 ಕ್ರಿಕೆಟ್‌ನಲ್ಲಿ ರೋಹಿತ್ ಶರ್ಮಾ ಬಳಿಕ 150 ಸಿಕ್ಸರ್ ಸಿಡಿಸಿದ ಸಾಧನೆ ಮಾಡಲಿದ್ದಾರೆ.

ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಅತಿ ಹೆಚ್ಚು ಸಿಕ್ಸರ್
ರೋಹಿತ್ ಶರ್ಮಾ - 205
ಮಾರ್ಟಿನ್ ಗುಪ್ಟಿಲ್ - 173
ಮುಹಮ್ಮದ್ ವಾಸಿಂ - 158
ನಿಕೋಲಸ್ ಪೂರನ್ - 149
ಜೋಸ್ ಬಟ್ಲರ್ - 146
ಸೂರ್ಯಕುಮಾರ್ ಯಾದವ್ - 145
ಇನ್ನು ಇದೇ ಸರಣಿಯಲ್ಲಿ ಸೂರ್ಯ 17 ಸಿಕ್ಸರ್‌ಗಳನ್ನು ಬಾರಿಸಿದ್ದೇ ಆದಲ್ಲಿ, ಮತ್ತೊಂದು ದಾಖಲೆ ಬರೆಯಲಿದ್ದಾರೆ. ಟಿ20 ಕ್ರಿಕೆಟ್ ಇತಿಹಾಸದಲ್ಲಿ ನಾನ್ ಒಪನರ್ ಆಗಿ 150 ಸಿಕ್ಸರ್ ಸಿಡಿಸುವ ದಾಖಲೆ ಬರೆಯಲಿದ್ದಾರೆ. ಇಲ್ಲಿಯವರೆಗೆ, ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆರಂಭಿಕರಲ್ಲದ ಯಾವುದೇ ಬ್ಯಾಟ್ಸ್‌ಮನ್ 150 ಸಿಕ್ಸರ್‌ಗಳ ಸಂಖ್ಯೆಯನ್ನು ಮುಟ್ಟಲು ಸಾಧ್ಯವಾಗಿಲ್ಲ. ಈ ಮೈಲಿಗಲ್ಲು ಸಾಧಿಸಲು ಸೂರ್ಯ ಅವರಿಗೆ ಉತ್ತಮ ಅವಕಾಶ. ಈ ಪಟ್ಟಿಯಲ್ಲಿ ಸದ್ಯ ನಿಕೋಲಸ್ ಪೂರನ್ ಮೊದಲ ಸ್ಥಾನದಲ್ಲಿದ್ದಾರೆ. ಇವರು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 149 ಸಿಕ್ಸರ್ ಸಿಡಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications