ವಿಶ್ವದಾಖಲೆಯ ಮೇಲೆ ಸೂರ್ಯಕುಮಾರ್ ಯಾದವ್ ಕಣ್ಣು
ಸೆಪ್ಟಂಬರ್ 9 ರಿಂದ ಯುಎಇನಲ್ಲಿ ಏಷ್ಯಾ ಕಪ್ ಟಿ20 ಕ್ರಿಕೆಟ್ ಆರಂಭವಾಗಲಿದೆ. ಈ ಟೂರ್ನಿಯಲ್ಲಿ ಟೀಮ್ ಇಂಡಿಯಾ ಸೇರಿದಂತೆ ಒಟ್ಟು 8 ತಂಡಗಳು ಭಾಗವಹಿಸಲಿವೆ. ಈ ಟೂರ್ನಿಯಲ್ಲಿ ಭಾಗವಹಿಸಲು ತಂಡಗಳು ಯುಎಇನತ್ತ ಮುಖ ಮಾಡಿವೆ. ಟೀಮ್ ಇಂಡಿಯಾ ಸಹ ಈ ಟೂರ್ನಿಯನ್ನು ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದಾಗಿದೆ. ಭಾರತ ತಂಡವನ್ನು ಸೂರ್ಯಕುಮಾರ್ ಯಾದವ್ ಮುನ್ನಡೆಸುತ್ತಿದ್ದಾರೆ. ಇವರ ಮೇಲೆ ಅಭಿಮಾನಿಗಳು ಕಣ್ಣು ನೆಟ್ಟಿದ್ದಾರೆ.
ಚುಟುಕು ಫಾರ್ಮೆಟ್‌ನ ಬಾದ್‌ಷಾ ಎಂದೇ ಕರೆಸಿಕೊಳ್ಳುವ ಸೂರ್ಯಕುಮಾರ್ ಯಾದವ್, ಏಷ್ಯಾ ಕಪ್‌ನಲ್ಲಿ ಮತ್ತೊಂದು ದೊಡ್ಡ ದಾಖಲೆಯನ್ನು ಬರೆಯುವ ಕನಸಿನಲ್ಲಿದ್ದಾರೆ. ಈಗಾಗಲೇ ಟಿ20 ಕ್ರಿಕೆಟ್‌ನಲ್ಲಿ ಹಲವು ಪ್ರಥಮಗಳಿಗೆ ತಮ್ಮ ಹೆಸರನ್ನು ನಮೂದಿಸಿರುವ ಸೂರ್ಯ ಈಗ, ಮತ್ತೊಂದು ದಾಖಲೆಗೆ ತನ್ನ ಹೆಸರನ್ನು ಸೇರಿಸುವ ತವಕದಲ್ಲಿ ಸೂರ್ಯಕುಮಾರ್ ಇದ್ದಾರೆ. ಹಾಗಿದ್ದರೆ ಸೂರ್ಯ ಏಷ್ಯಾ ಕಪ್ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಬರೆಯಲಿರುವ ದಾಖಲೆಗಳು ಏನು ಎಂಬ ಬಗ್ಗೆ ವರದಿ ಇಲ್ಲಿದೆ.

ಸೂರ್ಯಕುಮಾರ್ ಯಾದವ್ ಟಿ20 ಕ್ರಿಕೆಟ್‌ನಲ್ಲಿ ಈಗಾಗಲೇ ಆಡಿರುವ 83 ಪಂದ್ಯಗಳಲ್ಲಿ 4 ಶತಕಗಳನ್ನು ಸಿಡಿಸಿದ್ದಾರೆ. ಇನ್ನು ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕಗಳನ್ನು ದಾಖಲಿಸಿದ ಆಟಗಾರರ ಪಟ್ಟಿಯಲ್ಲಿ ಇವರಿಗೆ ಎರಡನೇ ಸ್ಥಾನ. ಏಷ್ಯಾ ಕಪ್ ಟಿ20 ಕ್ರಿಕೆಟ್‌ನಲ್ಲಿ ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ ಹಾಗೂ ಗ್ಲೇನ್ ಮ್ಯಾಕ್ಸ್‌ವೆಲ್ ಜಂಟಿ ಅಗ್ರ ಸ್ಥಾನದಲ್ಲಿದ್ದಾರೆ. ಈ ಇಬ್ಬರೂ ಸೂಪರ್ ಸ್ಟಾರ್ ಆಟಗಾರರು ಟಿ20 ಕ್ರಿಕೆಟ್‌ನಲ್ಲಿ ಒಟ್ಟು 5 ಶತಕಗಳನ್ನು ಬಾರಿಸಿದ್ದಾರೆ.
ರೋಹಿತ್ ಶರ್ಮಾ ಆಡಿರುವ 159 ಪಂದ್ಯಗಳಲ್ಲಿ 5 ಶತಕ ಸಿಡಿಸಿದ್ದಾರೆ. ರೋಹಿತ್ ಶರ್ಮಾ ಈಗಾಗಲೇ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಸಹ ಘೋಷಿಸಿದ್ದಾರೆ. ಇನ್ನು ಜಂಟಿ ಅಗ್ರ ಸ್ಥಾನದಲ್ಲಿರುವ ಗ್ಲೇನ್ ಮ್ಯಾಕ್ಸ್‌ವೆಲ್ 124 ಪಂದ್ಯಗಳಲ್ಲಿ 5 ಶತಕ ಸಿಡಿಸಿದ್ದಾರೆ. ಸೂರ್ಯಕುಮಾರ್ ಯಾದವ್ ಏಷ್ಯಾ ಕಪ್ ಟಿ20 ಕ್ರಿಕೆಟ್‌ನಲ್ಲಿ ಇನ್ನು ಒಂದು ಶತಕವನ್ನು ಸಿಡಿಸಿದ್ದೇ ಆದಲ್ಲಿ, ರೋಹಿತ್ ಹಾಗೂ ಗ್ಲೇನ್ ಮ್ಯಾಕ್ಸ್‌ವೆಲ್ ಸಾಧನೆಯ ಸಮಕ್ಕೆ ನಿಲ್ಲಲಿದ್ದಾರೆ. ಒಂದು ವೇಳೆ ಇವರು ಈ ಟೂರ್ನಿಯಲ್ಲಿ 2 ಶತಕಗಳನ್ನು ಬಾರಿಸಿದ್ದೇ ಆದಲ್ಲಿ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕಗಳನ್ನು ಬಾರಿಸಿದ ಲೆಕ್ಕಾಚಾರದಲ್ಲಿ ಅಗ್ರ ಸ್ಥಾನ ತಲುಪಲಿದ್ದಾರೆ.

4 ಸಿಕ್ಸರ್ ಕನಸು
ಸೂರ್ಯಕುಮಾರ್ ಯಾದವ್ ಏಷ್ಯಾ ಕಪ್ ಟಿ20 ಕ್ರಿಕೆಟ್‌ನಲ್ಲಿ ಇನ್ನು 4 ಸಿಕ್ಸರ್ ಬಾರಿಸುವಲ್ಲಿ ಸಫಲರಾದರೆ, ಭಾರತದ ಪರ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮತ್ತೊಂದು ದಾಖಲೆಯನ್ನು ನಿರ್ಮಿಸಲಿದ್ದಾರೆ. ಇವರು ಈಗಾಗಲೇ ಚುಟುಕು ಕ್ರಿಕೆಟ್‌ನಲ್ಲಿ 146 ಸಿಕ್ಸರ್ ಸಿಡಿಸಿದ್ದಾರೆ. ಏಷ್ಯಾ ಕಪ್ ಟಿ20 ಕ್ರಿಕೆಟ್‌ನಲ್ಲಿ ಇನ್ನು 4 ಸಿಕ್ಸರ್ ಬಾರಿಸಿದ್ದೇ ಆದಲ್ಲಿ 150 ಸಿಕ್ಸರ್ ಬಾರಿಸಿದ ಹಿರಿಮೆ ತಮ್ಮದಾಗಿಸಿಕೊಳ್ಳಲಿದ್ದಾರೆ. ಟೀಮ್ ಇಂಡಿಯಾದ ಪರ ರೋಹಿತ್ ಶರ್ಮಾ ಈ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ. ಇವರು 205 ಸಿಕ್ಸರ್ ಸಿಡಿಸಿದ ಹಿರಿಮೆ ತಮ್ಮದಾಗಿಸಿಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications