Suryakumar Yadav: ಟೀಮ್ ಇಂಡಿಯಾ ನಾಯಕನ ಮೇಲಿದೆ ದೊಡ್ಡ ಜವಾಬ್ದಾರಿ
ಭಾರತ ಹಾಗೂ ಇಂಗ್ಲೆಂಡ್ ನಡುವಣ ಮೊದಲ ಟಿ20 ಪಂದ್ಯ ಕೋಲ್ಕತ್ತಾದ ಈಡನ್ ಗಾರ್ಡನ್ ಅಂಗಳದಲ್ಲಿ ನಡೆಯಲಿದೆ. ಐದು ಪಂದ್ಯಗಳ ಟಿ20 ಸರಣಿ ಇದಾಗಿದ್ದು, ಇದಾದ ಬಳಿಕ ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿ ಸಹ ನಡೆಯಲಿದೆ. ಟೀಮ್ ಇಂಡಿಯಾವನ್ನು ಟಿ20 ಕ್ರಿಕೆಟ್‌ನಲ್ಲಿ ನಾಯಕನಾಗಿ ಸೂರ್ಯಕುಮಾರ್ ಯಾದವ್ ಮುನ್ನಡೆಸುತ್ತಿದ್ದಾರೆ. ಈ ಸರಣಿಯಲ್ಲಿ ಸೂರ್ಯಕುಮಾರ್ ಯಾದವ್ ಅವರ ಮೇಲೆ ದೊಡ್ಡ ಜವಾಬ್ದಾರಿಯೊಂದಿದೆ.
ಭಾರತ ತವರಿನಲ್ಲಿ ಅಮೋಘ ಪ್ರದರ್ಶನವನ್ನು ನೀಡಿದೆ. ಅಲ್ಲದೆ ಆರು ವರ್ಷಗಳಿಂದ ತವರಿನಲ್ಲಿ ಒಂದೇ ಒಂದು ಸರಣಿ ಸೋಲನ್ನು ಕಂಡಿಲ್ಲ. ಈಗ ಭಾರತ ಮೈದಾನದಲ್ಲಿ ಮಾಜಿ ಟಿ20 ಚಾಂಪಿಯನ್ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. ಈ ಸರಣಿಯಲ್ಲಿ ತಂಡದ ಪ್ರದರ್ಶನದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಭಾರತ 2019ರಲ್ಲಿ ಕೊನೆಯ ಬಾರಿಗೆ ಟಿ20 ಸರಣಿಯನ್ನು ಕೈ ಚೆಲ್ಲಿತ್ತು. ಅಲ್ಲಿಂದ ಈ ವರೆಗೆ ಯಾವುದೇ ಟಿ20 ಸರಣಿಯನ್ನು ಭಾರತ ತವರಿನಲ್ಲಿ ಸೋತಿಲ್ಲ.

ಹೇಗಿದೆ ತವರಿನಲ್ಲಿ ಟೀಮ್ ಇಂಡಿಯಾ ಪ್ರದರ್ಶನ?
2019ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೀಮ್ ಇಂಡಿಯಾ ಸೋಲಿನ ಬಳಿಕ, ಭರ್ಜರಿಯಾಗಿ ಪುಟಿದೆದ್ದಿದೆ. ಭಾರತ ತವರಿನಲ್ಲಿ ಒಟ್ಟು 14 ಟಿ20 ಪಂದ್ಯಗಳನ್ನು ಗೆದ್ದಿದೆ. ಈ ವೇಳೆ ಎರಡು ಸರಣಿಗಳು ಡ್ರಾದಲ್ಲಿ ಅಂತ್ಯವಾಗಿವೆ. 2019ರ ಈಚೆಗೆ ಭಾರತ ಬಾಂಗ್ಲಾದೇಶ, ಅಫ್ಘಾನಿಸ್ತಾನ, ಶ್ರೀಲಂಕಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ ವಿರುದ್ಧ ಜಯದ ನಗೆ ಬೀರಿದೆ. ಈಗ ಇದೇ ಸಾಧನೆಯನ್ನು ಮುಂದುವರೆಸುವ ಜವಾಬ್ದಾರಿ ಟೀಮ್ ಇಂಡಿಯಾದ ಹಾಲಿ ನಾಯಕನ ಮೇಲಿದೆ.
ಟಿ20 ಕ್ರಿಕೆಟ್‌ನಲ್ಲಿ ಇಂಗ್ಲೆಂಡ್ ಬಲಿಷ್ಠವಾಗಿದೆ. ಆಂಗ್ಲರ ವಿರುದ್ಧ ಟೀಮ್ ಇಂಡಿಯಾ ಸ್ಥಿರ ಪ್ರದರ್ಶನ ನೀಡಬೇಕು. ಕೊಂಚ ಯಾಮಾರಿದ್ರೂ ಅಪಾಯ ಕಟ್ಟಿಟ್ಟ ಬುತ್ತಿ. ಇಂಗ್ಲೆಂಡ್ ತಂಡವನ್ನು ಜೋಸ್ ಬಟ್ಲರ್ ಮುನ್ನಡೆಸಲಿದ್ದು, ಬಲಿಷ್ಠವಾಗಿದೆ. ಎಲ್ಲ ಆಟಗಾರರು ಚುಟುಕು ಫಾರ್ಮೆಟ್‌ಗೆ ಹೇಳಿ ಮಾಡಿಸದ ಹಾಗೆ ಆಟವನ್ನು ಆಡಬಲ್ಲರು. ಬಟ್ಲರ್ ಪಡೆಯ ಹಲವು ಆಟಗಾರರು ಭಾರತದ ಹಲವು ಕ್ರೀಡಾಂಗಣಲ್ಲಿ ಆಡಿದ ಅನುಭವ ಹೊಂದಿದ್ದಾರೆ. ಚುಟುಕು ಫಾರ್ಮೆಟ್‌ನಲ್ಲಿ ಇಂಗ್ಲೆಂಡ್ ಯಾವುದೇ ತಂಡಕ್ಕೆ ಭಯ ಹುಟ್ಟಿಸಬಲ್ಲದು. ಹೀಗಾಗಿ ಈ ತಂಡದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.

ಕಳಪೆ ಪ್ರದರ್ಶನ
ಇತ್ತೀಚಿಗೆ ನ್ಯೂಜಿಲೆಂಡ್ ವಿರುದ್ಧ ಟೀಮ್ ಇಂಡಿಯಾ ಟೆಸ್ಟ್ ಸರಣಿಯನ್ನು ಭಾರತದಲ್ಲಿ ಆಡಿತು. ಈ ಸರಣಿಯಲ್ಲಿ ಟೀಮ್ ಇಂಡಿಯಾ ಹೀನಾಯ ಸೋಲನ್ನು ಕಂಡಿತು. ಅಲ್ಲದೆ 12 ವರ್ಷಗಳ ಬಳಿಕ ತವರಿನಲ್ಲಿ ಸೋಲನ್ನು ಕಂಡಿತು. ಈ ಸೋಲಿನ ಕಹಿಯನ್ನು ನೆನಪು ಹಾರಲು ಭಾರತಕ್ಕೆ ಇದು ಬೆಸ್ಟ್ ಅವಕಾಶ.
ಭಾರತ ಹಾಗೂ ಇಂಗ್ಲೆಂಡ್ ನಡುವಣ ಟಿ20 ಸರಣಿಯ ವೇಳಾ ಪಟ್ಟಿ
ಮೊದಲ ಪಂದ್ಯ, ಜ.22, 2025, ಕೋಲ್ಕತ್ತಾ
ಎರಡನೇ ಪಂದ್ಯ, ಜ.25, 2055, ಚೆನ್ನೈ
ಮೂರನೇ ಪಂದ್ಯ, ಜ.28, 2025, ರಾಜ್‌ಕೋಟ್
ನಾಲ್ಕನೇ ಪಂದ್ಯ, ಜ.31, 2025, ಪುಣೆ
ಐದನೇ ಪಂದ್ಯ, ಫೆ.02, 2025, ಮುಂಬೈ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications