ಸೂರ್ಯಕುಮಾರ್ ಚೊಚ್ಚಲ ಅರ್ಧ ಶತಕ, ಭಾರತಕ್ಕೆ ರೋಚಕ ಜಯ!

ಅಹ್ಮದಾಬಾದ್: ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಗುರುವಾರ (ಮಾರ್ಚ್ 18) ನಡೆದ ಭಾರತ-ಇಂಗ್ಲೆಂಡ್ 4ನೇ ಟಿ20ಐ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಪಡೆ 8 ರನ್ ರೋಚಕ ಜಯ ಗಳಿಸಿದೆ. ಪಾದಾರ್ಪಣೆ ಇನ್ನಿಂಗ್ಸ್ ಆಡಿದ ಸೂರ್ಯಕುಮಾರ್ ಯಾದವ್ ಅವರ ಸ್ಫೋಟಕ ಅರ್ಧ ಶತಕದೊಂದಿಗೆ ಭಾರತ ಐದು ಪಂದ್ಯಗಳ ಟಿ20ಐ ಸರಣಿಯಲ್ಲಿ 2-2ರ ಸಮಬಲ ಸಾಧಿಸಿದೆ.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತದಿಂದ ರೋಹಿತ್ ಶರ್ಮಾ 12, ಕೆಎಲ್ ರಾಹುಲ್ 14, ಐಪಿಎಲ್ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್ 57 (31), ರಿಷಭ್ ಪಂತ್ 30, ಶ್ರೇಯಸ್ ಐಯ್ಯರ್ 37, ಹಾರ್ದಿಕ್ ಪಾಂಡ್ಯ 11, ಶಾರ್ದೂಲ್ ಠಾಕೂರ್ 10 ರನ್ ಸೇರಿಸಿದರು. ಭಾರತ 20 ಓವರ್‌ಗೆ 8 ವಿಕೆಟ್ ಕಳೆದು 185 ರನ್ ಗಳಿಸಿತು.
ಗುರಿ ಬೆನ್ನಟ್ಟಿದ ಇಂಗ್ಲೆಂಡ್, ಜೇಸನ್ ರಾಯ್ 40 (27), ಜೋಸ್ ಬಟ್ಲರ್ 9, ಡೇವಿಡ್ ಮಲಾನ್ 14, ಜಾನಿ ಬೇರ್ಸ್ಟೋವ್ 25, ಬೆನ್ ಸ್ಟೋಕ್ಸ್ 46 (23), ಕ್ರಿಸ್ ಜೋರ್ಡನ್ 12, ಜೋಫ್ರಾ ಆರ್ಚರ್ 18 (8) ರನ್‌ನೊಂದಿಗೆ 20 ಓವರ್‌ಗೆ 8 ವಿಕೆಟ್ ಕಳೆದು 177 ರನ್ ಬಾರಿಸಿ ತಲೆ ಬಾಗಿತು.
ಭಾರತದ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್‌ನ ಜೋಫ್ರಾ ಆರ್ಚರ್ 4 (33 ರನ್), ಆದಿಲ್ ರಶೀದ್, ಮಾರ್ಕ್‌ವುಡ್, ಬೆನ್ ಸ್ಟೋಕ್ಸ್, ಸ್ಯಾಮ್ ಕರನ್ ತಲಾ 1 ವಿಕೆಟ್ ಪಡೆದರೆ, ಇಂಗ್ಲೆಂಡ್ ಇನ್ನಿಂಗ್ಸ್‌ನಲ್ಲಿ ಭಾರತದ ಶಾರ್ದೂಲ್ ಠಾಕೂರ್ 3, ಹಾರ್ದಿಕ್ ಪಾಂಡ್ಯ 2, ರಾಹುಲ್ ಚಾಹರ್ 2, ಭುವನೇಶ್ವರ್ ಕುಮಾರ್ 1 ವಿಕೆಟ್‌ನಿಂದ ಗಮನ ಸೆಳೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications