Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಲಯಕ್ಕಾಗಿ ಸೂರ್ಯಕುಮಾರ್ ಯಾದವ್ ಪರದಾಟ: ಕೈಯಿಂದ ಜಾರುತ್ತಾ ಭಾರತದ ನಾಯಕತ್ವ?

ಮುಂಬೈ ಇಂಡಿಯನ್ಸ್ ತಂಡದ ಸೂಪರ್ ಸ್ಟಾರ್ ಬ್ಯಾಟರ್‌ ಹಾಗೂ ಭಾರತ ಟಿ20 ತಂಡದ ನಾಯಕ ಸೂರ್ಯಕುಮಾರ್ ಯಾದವ್ ಅವರ ಕಳಪೆ ಫಾರ್ಮ್ ಮುಂದುವರಿದಿದೆ. ಗುರುವಾರ ಪಂಜಾಬ್‌ ಕಿಂಗ್ಸ್‌ ವಿರುದ್ಧದ ಪಂದ್ಯದಲ್ಲಿ ಸೂರ್ಯ ನೀರಸ ಪ್ರದರ್ಶನ ನೀಡಿದ್ದಾರೆ. ತವರಿನಲ್ಲಿ ನಡೆದ ಪಂದ್ಯದಲ್ಲಿ ಸ್ಕೈ ತಾವು ಎದುರಿಸಿದ ಮೊದಲ ಎಸೆತದಲ್ಲಿ ಸೊನ್ನೆ ಸುತ್ತಿದರು.

ಮುಂಬೈನ ವಾಂಖೆಡೆ ಅಂಗಳದಲ್ಲಿ ನಡೆದ ಪಂದ್ಯದಲ್ಲಿ ಪಂಜಾಬ್ ತಂಡದ ಬೌಲರ್‌ ಅರ್ಷದೀಪ್ ಸಿಂಗ್ ಅವರ ಎಸೆತ ಸೂರ್ಯ ಅವರ ಬ್ಯಾಟ್‌ ಅಂಚಿಗೆ ತಗುಲಿ, ಶಾರ್ಟ್‌ ಥರ್ಡ್‌ ಮ್ಯಾನ್‌ ಕೈಗೆ ಕ್ಯಾಚ್ ನೀಡಿದರು. ಆಗ ಮುಂಬೈ ತಂಡದ ಮೊತ್ತ 2.2 ಓವರ್‌ಗಳಲ್ಲಿ 2 ವಿಕೆಟ್‌ಗೆ 12 ರನ್‌ ಆಗಿತ್ತು. ಒತ್ತಡದಲ್ಲಿದ್ದ ತಂಡಕ್ಕೆ ನೆರವಾಗಬೇಕಿದ್ದ ಸೂರ್ಯ ಜವಾಬ್ದಾರಿ ಮರೆತರು.

Suryakumar Yadav

ಗಾಯದ ಸಮಸ್ಯೆಯಿಂದ ಹೊರಗುಳಿದಿದ್ದ ರೋಹಿತ್ ಶರ್ಮಾ ಅವರ ಅನುಪಸ್ಥಿತಿಯಲ್ಲಿ ಸೂರ್ಯಕುಮಾರ್ ಯಾದವ್ ಅವರಿಗೆ ಜವಾಬ್ದಾರಿ ನೀಡಲಾಯಿತು. ಆದರೆ ಇವರು ಈ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ಎಡವಿದರು. ಟಿ20 ವಿಶ್ವಕಪ್‌ ಚಾಂಪಿಯನ್ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಈ ಬಾರಿಯ ಐಪಿಎಲ್‌ನಲ್ಲಿ ರನ್‌ ಕಲೆ ಹಾಕುವಲ್ಲಿ ವಿಫಲರಾಗಿದ್ದಾರೆ. ಇವರು ಆಡಿದ 5 ಪಂದ್ಯಗಳಲ್ಲಿ 106 ರನ್‌ ಸಿಡಿಸಿದ್ದಾರೆ. ಇದರಲ್ಲಿ ಎರಡು ಬಾರಿ ಮಾತ್ರ 20ಕ್ಕೂ ಹೆಚ್ಚು ರನ್ ಸಿಡಿಸಿದ್ದಾರೆ.

ಬಿಸಿಸಿಐಗೆ ಭವಿಷ್ಯದ ಚಿಂತೆ

ಸೂರ್ಯಕುಮಾರ್ ಯಾದವ್ ಅವರ ಲಯ ನಿಜಕ್ಕೂ ತಂಡದ ಚಿಂತೆಯನ್ನು ದ್ವಿಗುಣ ಮಾಡಿದೆ. ಬಿಸಿಸಿಐ ಭವಿಷ್ಯದ ದೃಷ್ಟಿಯಿಂದ ಹಲವು ಪ್ಲ್ಯಾನ್ ಮಾಡಿಕೊಂಡಿದೆ. 2028ರ ಲಾಸ್ ಏಂಜಲೀಸ್‌ನಲ್ಲಿ ನಡೆಯಲಿರುವ ಒಲಿಂಪಿಕ್ಸ್‌ಗಾಗಿ ತಂಡವನ್ನು ಕಟ್ಟುವ ಗುರಿ ಬಿಸಿಸಿಐದ್ದಾಗಿದೆ. ಈ ವೇಳೆ ಸ್ಥಿರ ಪ್ರದರ್ಶನ ನೀಡುತ್ತಿರುವ ಆಟಗಾರರಿಗೆ ಬಿಸಿಸಿಐ ಮಣೆ ಹಾಕಲಿದೆ. ಸೂರ್ಯ ಅವರ ಲಯ ನಿಜಕ್ಕೂ ಬಿಸಿಸಿಐ ತಲೆ ನೋವು ಹೆಚ್ಚಿಸಿದೆ. ನಾಯಕತ್ವದಲ್ಲಿ ಸೂರ್ಯಕುಮಾರ್ ಅಬ್ಬರಿಸಿದರು, ಬ್ಯಾಟ್‌ ಮೌನಕ್ಕೆ ಶರಣಾಗಿರುವುದು ಪ್ರಶ್ನೆಗಳು ಹುಟ್ಟುವಂತೆ ಮಾಡಿದೆ.

Suryakumar Yadav

ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್‌ನಲ್ಲಿ ಸ್ಥಿರತೆ ತರುವ ಅನಿವಾರ್ಯತೆ ಇದೆ. ಇವರಿಗೆ ಕೋಚ್‌ ಗೌತಮ್‌ ಗಂಭೀರ್ ಸಹ ಬೆನ್ನಿಗೆ ನಿಂತಿದ್ದಾರೆ. ಸೂರ್ಯ ಇತ್ತೀಚಿಗೆ ಭಾರತದಲ್ಲಿ ನಡೆದಿದ್ದ ಟಿ20 ವಿಶ್ವಕಪ್‌ನಲ್ಲಿ 4 ಅರ್ಧಶತಕಗಳನ್ನು ಬಾರಿಸಿದ್ದರು. ಆದರೆ ಈ ವೇಳೆ ಇವರ ಸ್ಟ್ರೈಕ್‌ ರೇಟ್‌ 120 ಆಗಿದೆ.

ಅಜಿತ್ ಅಗರ್ಕರ್‌ ಮುಂದಾಳತ್ವದ ಆಯ್ಕೆ ಸಮಿತಿಗೆ ಸೂರ್ಯಕುಮಾರ್ ಯಾದವ್ ಅವರ ವಯಸ್ಸು ಸಹ ಚಿಂತೆಯನ್ನು ಹೆಚ್ಚಿಸಿದೆ. ಒಲಿಂಪಿಕ್ಸ್‌ ವೇಳೆಗೆ ಸುರ್ಯ 38ರ ಆಸುಪಾಸಿನಲ್ಲಿ ಇರಲಿದ್ದಾರೆ. ಸೂರ್ಯ ಅವರ ಬೆನ್ನಿಗೆ ಅವರ ದಾಖಲೆಗಳು ನಿಲ್ಲುತ್ತಿವೆ. ಸೂರ್ಯ ಟಿ20 ಕ್ರಿಕೆಟ್‌ನ ಬೆಸ್ಟ್ ಕ್ಯಾಪ್ಟನ್‌. ಇವರು 52 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದು, 40 ಪಂದ್ಯಗಳನ್ನು ತಂಡ ಗೆದ್ದಿದೆ. ಈ ಮೂಲಕ ಸೂರ್ಯ ಟಿ20 ಕ್ರಿಕೆಟ್‌ನ ಬೆಸ್ಟ್‌ ನಾಯಕ ಎಂಬುದನ್ನು ತಮ್ಮನ್ನು ತಾವೇ ಸಾಬೀತು ಪಡಿಸಿಕೊಂಡಿದ್ದಾರೆ.

ಲಯಕ್ಕೆ ಮರಳುವುದು ಅನಿವಾರ್ಯ

ಸೂರ್ಯಕುಮಾರ್ ಯಾದವ್ ಅವರು ತಮಗೆ ವಿಶ್ವ ಮಟ್ಟದಲ್ಲಿ ಹೆಸರು ತಂದು ಕೊಟ್ಟಿದ್ದ 360 ಡಿಗ್ರಿ ಆಟವನ್ನು ಆಡಬೇಕಿದೆ. ಇವರು ಬ್ಯಾಟಿಂಗ್‌ನಲ್ಲಿ ರನ್‌ ಕಲೆ ಹಾಕದೇ ಇದ್ದಾಗ ನಾಯಕತ್ವದ ಮೇಲೂ ಪ್ರಶ್ನೆಗಳು ಏಳುತ್ತವೆ. ಟಾಪ್‌ ಆರ್ಡರ್‌ ಸ್ಥಾನವನ್ನು ಪಡೆಯಲು ಯುವ ಆಟಗಾರರು ಜಿದ್ದು ನಡೆಸಿದ್ದಾರೆ. ಈ ನಿಟ್ಟಿನಲ್ಲಿ ಸೂರ್ಯ ಲಯಕ್ಕೆ ಮರಳುವುದು ಅನಿವಾರ್ಯ. ಮುಂದಿನ ಪಂದ್ಯಗಳಲ್ಲಾದರೂ ಸೂರ್ಯಕುಮಾರ್ ಯಾದವ್ ಸ್ಥಿರ ಪ್ರದರ್ಶನ ನೀಡಿ ತಂಡದ ಗೆಲುವಿನಲ್ಲಿ ಮಿಂಚಲಿ ಎಂಬುದೇ ಅಭಿಮಾನಿಗಳ ಆಶಯ.

Story first published: Friday, April 17, 2026, 8:27 [IST]
Other articles published on Apr 17, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+