For Quick Alerts
ALLOW NOTIFICATIONS  
For Daily Alerts
 

ಸೂರ್ಯ ಆರ್ಭಟಕ್ಕೆ ಜಿಂಬಾಬ್ವೆ ಕಂಗಾಲು: ಭಾರತದ ಪರ ಯಾರೂ ಮಾಡದ ಸಾಧನೆ ಮಾಡಿದ SKY

Suryakumar Yadav historical achievement for India completed 1000 T20I runs in a calendar year

ಟೀಮ್ ಇಂಡಿಯಾದ ಮಧ್ಯಮ ಕ್ರಮಾಂಕದ ಆಟಗಾರ ಸೂರ್ಯಕುಮಾರ್ ಯಾದವ್ ಅಮೋಘ ಬ್ಯಾಟಿಂಗ್ ಪ್ರದರ್ಶನ ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿಯೂ ಮುಂದುವರಿದಿದೆ. ಜಿಂಬಾಬ್ವೆ ಬೌಲರ್‌ಗಳನ್ನು ಸೂರ್ಯಕುಮಾರ್ ನಿರ್ದಯವಾಗಿ ದಂಡಿಸಿದ್ದು ತಂಡದ ಮೊತ್ತ 186 ರನ್‌ಗಳಿಸಲು ಸಾಧ್ಯವಾಗಿದೆ. ಈ ಮೂಲಕ ಜಿಂಬಾಬ್ವೆ ತಂಡದಕ್ಕೆ ಬೃಹತ್ ಗುರಿ ನೀಡುವಲ್ಲಿ ಭಾರತ ತಂಡ ಯಶಸ್ವಿಯಾಗಿದೆ.

ಜಿಂಬಾಬ್ವೆ ವಿರುದ್ಧ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಕೇವಲ 25 ಎಸೆತಗಳಲ್ಲಿ 61 ರನ್ ಬಾರಿಸಿ ಅಬ್ಬರಿಸಿದ್ದಾರೆ. ಮೈದಾನದ ಮೂಲೆ ಮೂಲೆಗೂ ಚೆಂಡನ್ನು ಅಟ್ಟಿದ ಸೂರ್ಯಕುಮಾರ್ ಯಾದವ್ 4 ಸಿಕ್ಸರ್ ಹಾಗೂ 6 ಬೌಂಡರಿ ಬಾರಿಸಿದ್ದಾರೆ. ಬರೊಬ್ಬರಿ 244 ಸ್ಟ್ರೈಕ್‌ರೇಟ್‌ನಲ್ಲಿ ಸೂರ್ಯಕುಮಾರ್ ಯಾದವ್ ಬ್ಯಾಟ್ ಬೀಸಿದ್ದು ಪಂದ್ಯದಲ್ಲಿ ಭಾರತ ಸಂಪೂರ್ಣ ಹಿಡಿತ ಸಾಧಿಸಲು ಕಾರಣವಾಯಿತು. ಇನ್ನು ಈ ಬ್ಯಾಟಿಂಗ್ ಪ್ರದರ್ಶನದೊಂದಿಗೆ ಟಿ20 ಕ್ರಿಕೆಟ್‌ನಲ್ಲಿ ಸೂರ್ಯಕುಮಾರ್ ಯಾದವ್ ವಿಶೇಷ ಸಾಧನೆ ಮಾಡಿದ್ದಾರೆ.

1000 ರನ್‌ಗಳಿಸಿದ ಸೂರ್ಯ

1000 ರನ್‌ಗಳಿಸಿದ ಸೂರ್ಯ

ಇನ್ನು ಈ ಪಂದ್ಯದಲ್ಲಿ ನೀಡಿದ ಭರ್ಜರಿ ಬ್ಯಾಟಿಂಗ್ ಪ್ರದರ್ಶನದೊಂದಿಗೆ ಸೂರ್ಯಕುಮಾರ್ ಯಾದವ್ ಟಿ20 ಇತಿಹಾಸದಲ್ಲಿ ವಿಶೇಷ ಸಾಧನೆ ಮಾಡಿದ್ದಾರೆ. ಕ್ಯಾಲೆಂಡರ್ ವರ್ಷವೊಂದರಲ್ಲಿ ಸೂರ್ಯಕುಮಾರ್ ಯಾದವ್ 1000ಕ್ಕೂ ಅಧಿಕ ರನ್‌ಗಳಿಸಿದ ಭಾರತದ ಮೊದಲ ಆಟಗಾರ ಎಂಬ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಇನ್ನು ಒಟ್ಟಾರೆಯಾಗಿ ಈ ಸಾಧನೆ ಮಾಡಿದ ಕೇವಲ ಎರಡನೇ ಆಟಗಾರ ಎನಿಸಿಕೊಂಡಿದ್ದಾರೆ ಸೂರ್ಯಕುಮಾರ್ ಯಾದವ್. 2021ರಲ್ಲಿ ಪಾಕಿಸ್ತಾನದ ಮೊಹಮ್ಮದ್ ರಿಜ್ವಾನ್ ಈ ಸಾಧನೆ ಮಾಡಿದ್ದು 1326 ರನ್‌ಗಳಿಸಿದ್ದರು.

ನಂಬರ್ 1 ಶ್ರೇಯಾಂಕದಲ್ಲಿ ಸೂರ್ಯ

ನಂಬರ್ 1 ಶ್ರೇಯಾಂಕದಲ್ಲಿ ಸೂರ್ಯ

ಟೀಮ್ ಇಂಡಿಯಾದ ಮಧ್ಯಮ ಕ್ರಮಾಂಕದ ಆಧಾರ ಸ್ತಂಭವಾಗಿರುವ ಸೂರ್ಯಕುಮಾರ್ ಯಾದವ್ ತಮ್ಮ ಅಮೋಘ ಫಾರ್ಮ್ ಮುಂದುವರಿಸಿದ್ದಾರೆ. ಈ ಮೂಲಕ ಐಸಿಸಿ ಟಿ20 ಶ್ರೇಯಾಂಕ ಪಟ್ಟಿಯಲ್ಲಿ ನಂಬರ್ 1 ಸ್ಥಾನಕ್ಕೇರಿದ್ದಾರೆ ಸೂರ್ಯಕುಮಾರ್ ಯಾದವ್. ಪಾಕಿಸ್ತಾನದ ಆರಂಭಿಕ ಆಟಗಾರ ಮೊಹಮ್ಮದ್ ರಿಜ್ವಾನ್ ಅವರನ್ನು ಹಿಂದಿಕ್ಕಿ ಸೂರ್ಯ ಈ ಸಾಧನೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಮುಂದುವರಿದ ಸೂರ್ಯಕುಮಾರ್ ಅಮೋಘ ಫಾರ್ಮ್

ಮುಂದುವರಿದ ಸೂರ್ಯಕುಮಾರ್ ಅಮೋಘ ಫಾರ್ಮ್

ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಸೂರ್ಯಕುಮಾರ್ ಯಾದವ್ ಅವರ ಅಮೋಘ ಫಾರ್ಮ್ ಮುಂದುವರಿದಿದೆ. ಆಡಿದ ಐದು ಪಂದ್ಯಗಳಲ್ಲಿ ಸೂರ್ಯ ಮೂರು ಅರ್ಧ ಶತಕ ಸಿಡಿಸಿರುವುದು ಅವರ ಅದ್ಭುತ ಬ್ಯಾಟಿಂಗ್‌ಗೆ ಸಾಕ್ಷಿಯಾಗಿದೆ. ಅದರಲ್ಲೂ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಇತರ ಬ್ಯಾಟರ್‌ಗಳು ರನ್‌ಗಳಿಸಲು ಪರದಾಡುತ್ತಿದ್ದಾಗ ಸೂರ್ಯ 40 ಎಸೆತಗಳಲ್ಲಿ 68 ರನ್ ಬಾರಿಸಿ ಮಿಂಚಿದ್ದರು. ಈ ವರ್ಷ ಟಿ20 ಕ್ರಿಕೆಟ್‌ನಲ್ಲಿ ಅತೀ ಹೆಚ್ಚು ರನ್‌ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೂ ಭಾರತದ ಈ ಆಟಗಾರ ಪಾತ್ರರಾಗಿದ್ದಾರೆ.

ಬೃಹತ್ ಗುರಿ ನೀಡಿದ ಭಾರತ

ಬೃಹತ್ ಗುರಿ ನೀಡಿದ ಭಾರತ

ಇನ್ನು ಜಿಂಬಾಬ್ವೆ ವಿರುದ್ಧದ ಅಂತಿಮ ಪಂದ್ಯದಲ್ಲಿ ಟೀಮ್ ಇಂಡಿಯಾ ಕೆಎಲ್ ರಾಹುಲ್ ಹಾಗೂ ಸೂರ್ಯಕುಮಾರ್ ಯಾದವ್ ಅವರ ಅದ್ಭುತ ಪ್ರದರ್ಶನದಿಂದಾಗಿ ದೊಡ್ಡ ಮೊತ್ತದ ಗುರಿ ನೀಡಲು ಯಶಸ್ವಿಯಾಗಿದೆ. ಆರಂಭಿಕ ಆಟಗಾರ ಕೆಎಲ್ ರಾಹುಲ್ ಕೂಡ ಅರ್ಧ ಶತಕ ಸಿಡಿಸಿ ಮಿಂಚಿದರೆ ನಂತರ ಸೂರ್ಯಕುಮಾರ್ ಯಾದವ್ ಜಿಂಬಾಬ್ವೆ ಬೌಲರ್‌ಗಳಿಗೆ ಆಘಾತ ನೀಡಿದರು. ವಿರಾಟ್ ಕೊಹ್ಲಿ ಈ ಪಂದ್ಯದಲ್ಲಿ 25 ರನ್‌ಗಳಿಸಿ ವಿಕೆಟ್ ಕಳೆದುಕೊಂಡರು. ಟೀಮ್ ಇಂಡಿಯಾ ಈ ಪಂದ್ಯದಲ್ಲಿ ನಿಗದಿತ 20 ಓವರ್‌ಗಳಲ್ಲಿ 186 ರನ್‌ಗಳಿಸಿದೆ.

ಟೀಮ್ ಇಂಡಿಯಾ ಆಡುವ ಬಳಗ: ಕೆಎಲ್ ರಾಹುಲ್, ರೋಹಿತ್ ಶರ್ಮಾ (ನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ರಿಷಬ್ ಪಂತ್ (ವಿಕೆಟ್ ಕೀಪರ್), ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ, ಅರ್ಷದೀಪ್ ಸಿಂಗ್
ಬೆಂಚ್: ಯುಜುವೇಂದ್ರ ಚಹಾಲ್, ಹರ್ಷಲ್ ಪಟೇಲ್, ದೀಪಕ್ ಹೂಡಾ, ದಿನೇಶ್ ಕಾರ್ತಿಕ್

ಜಿಂಬಾಬ್ವೆ ಆಡುವ ಬಳಗಳ ವೆಸ್ಲಿ ಮಾಧೆವೆರೆ, ಕ್ರೇಗ್ ಎರ್ವಿನ್ (ಸಿ), ರೆಗಿಸ್ ಚಕಬ್ವಾ (ವಾಕ್), ಸೀನ್ ವಿಲಿಯಮ್ಸ್, ಸಿಕಂದರ್ ರಜಾ, ಟೋನಿ ಮುನ್ಯೊಂಗಾ, ರಯಾನ್ ಬರ್ಲ್, ತೆಂಡೈ ಚಟಾರ, ರಿಚರ್ಡ್ ನಾಗರವ, ವೆಲ್ಲಿಂಗ್ಟನ್ ಮಸಕಡ್ಜ, ಬ್ಲೆಸಿಂಗ್ ಮುಜರಬಾನಿ
ಬೆಂಚ್: ಬ್ರಾಡ್ ಇವಾನ್ಸ್, ಕ್ಲೈವ್ ಮಡಾಂಡೆ, ಮಿಲ್ಟನ್ ಶುಂಬಾ, ಲ್ಯೂಕ್ ಜೊಂಗ್ವೆ

Story first published: Sunday, November 6, 2022, 16:18 [IST]
Other articles published on Nov 6, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+