ದಾಖಲೆಯ ಪುಟಕ್ಕೆ ಎಂಟ್ರಿ ನೀಡಿದ ಸೂರ್ಯಕುಮಾರ್ ಯಾದವ್, ರಿಂಕು ಸಿಂಗ್
ನಾಗ್ಪುರ: ಭಾರತ ಹಾಗೂ ನ್ಯೂಜಿಲೆಂಡ್ ನಡುವಣ ಮೊದಲ ಟಿ20 ಪಂದ್ಯದಲ್ಲಿ ಸೂರ್ಯ ಪಡೆ 48 ರನ್ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಸಂಘಟಿತ ಆಟದ ಪ್ರದರ್ಶನ ನೀಡಿದೆ. ರನ್ ಕಲೆ ಹಾಕುವಲ್ಲಿ ವಿಫಲರಾಗುತ್ತಿದ್ದ ಸೂರ್ಯಕುಮಾರ್ ಯಾದವ್ ಬಿಗ್ ಇನಿಂಗ್ಸ್ ಕಟ್ಟದೇ ಇದ್ದರೂ ಭರವಸೆ ಮೂಡಿಸಿದ್ದಾರೆ. ಫಿನಿಷರ್ ಪಾತ್ರದಲ್ಲಿ ರಿಂಕು ಸಿಂಗ್ ನ್ಯಾಯ ಒದಗಿಸಿದ್ದಾರೆ. ಈ ಇಬ್ಬರೂ ಆಟಗಾರರು ನ್ಯೂಜಿಲೆಂಡ್ ವಿರುದ್ಧ ಮೊದಲ ಪಂದ್ಯದಲ್ಲಿ ಸೊಗಸಾದ ಬ್ಯಾಟಿಂಗ್ ಪ್ರದರ್ಶನ ನೀಡಿ ವೈಯಕ್ತಿಕ ದಾಖಲೆ ಬರೆದಿದ್ದಾರೆ.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾದ ಆರಂಭಿಕ ಅಭಿಷೇಕ್ ಶರ್ಮಾ ಸ್ಫೋಟಕ ಬ್ಯಾಟಿಂಗ್ ನಡೆಸಿ ತಂಡಕ್ಕೆ ನೆರವಾದರು. ಅಲ್ಲದೆ 8 ಸಿಕ್ಸರ್, 5 ಬೌಂಡರಿ ಸೇರಿದಂತೆ 84 ರನ್ ಬಾರಿಸಿದರು. ಇವರಿಗೆ ನಾಯಕ ಸೂರ್ಯಕುಮಾರ್ ಯಾದವ್ ಉತ್ತಮ ಸಾಥ್ ನೀಡಿದ್ದಾರೆ. ಸೂರ್ಯ ರನ್ ಕಲೆ ಹಾಕುವಲ್ಲಿ ವಿಫಲರಾಗುತ್ತಿದ್ದರು. ಆದರೆ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ನೆಲಕಚ್ಚಿ ಬ್ಯಾಟ್ ಮಾಡಿ 32 ರನ್ ಸೇರಿಸಿದರು. ಅಲ್ಲದೆ ಅಭಿಷೇಕ್ ಜೊತೆಗೂಡಿ ಮೂರನೇ ವಿಕೆಟ್‌ಗೆ 99 ರನ್ ಜೊತೆಯಾಟದ ಕಾಣಿಕೆ ನೀಡಿದರು. ಈ ಮೂಲಕ ಸೂರ್ಯಕುಮಾರ್ ಯಾದವ್ ಸಹ ಇತಿಹಾಸ ನಿರ್ಮಿಸಿದ್ದಾರೆ.

ಸೂರ್ಯ ಕುಮಾರ್ ಮೈದಾನಕ್ಕೆ ಇಳಿಯುತ್ತಲೇ ಡ್ರೈವ್ ಬಾರಿಸಿ ಖಾತೆ ಓಪನ್ ಮಾಡಿದರು. ತಮ್ಮ ಆಕ್ರಮಣಕಾರಿ ಆಟಕ್ಕಿಂತ ಭಿನ್ನ ಆಟವನ್ನು ಆಡಿದ ಸೂರ್ಯ ತಂಡಕ್ಕೆ ಆಧಾರವಾದರು. ಇವರು ಈ ಪಂದ್ಯದಲ್ಲಿ 25 ರನ್ ಬಾರಿಸುತ್ತಿದ್ದಂತೆ ದೊಡ್ಡ ದಾಖಲೆಯನ್ನು ಬರೆದರು. ಇವರು ಟಿ 20 ಕ್ರಿಕೆಟ್‌ನಲ್ಲಿ 9000 ರನ್‌ಗಳನ್ನು ಪೂರ್ಣಗೊಳಿಸಿದ ಹೆಗ್ಗಳಿಕೆ ತಮ್ಮದಾಗಿಸಿಕೊಂಡರು.
ಚುಟುಕು ಮಾದರಿಯ ಕ್ರಿಕೆಟ್‌ನಲ್ಲಿ 9 ಸಾವಿರ ರನ್ ಪುರೈಸಿದ ಭಾರತದ ನಾಲ್ಕನೇ ಆಟಗಾರ ಎಂಬ ಖ್ಯಾತಿ ಇವರದ್ದಾಯಿತು. ಇವರಿಗಿಂತಲೂ ಮೊದಲು ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಶಿಖರ್ ಧವನ್ ಮಾತ್ರ ಈ ಸಾಧನೆಯನ್ನು ಮಾಡಿದ್ದಾರೆ.
ಟಿ20 ಕ್ರಿಕೆಟ್‌ನಲ್ಲಿ ಭಾರತದ ಪರ ಗರಿಷ್ಠ ರನ್ ಬಾರಿಸಿದ ಬ್ಯಾಟರ್ಸ್
ವಿರಾಟ್ ಕೊಹ್ಲಿ - 13543
ರೋಹಿತ್ ಶರ್ಮಾ - 12248
ಶಿಖರ್ ಧವನ್ - 9797
ಸೂರ್ಯಕುಮಾರ್ ಯಾದವ್ - 9000
ಧೋನಿ ದಾಖಲೆಯ ಸಮಕ್ಕೆ ನಿಂತ ರಿಂಕು
ನ್ಯೂಜಿಲೆಂಡ್ ವಿರುದ್ಧ ಮೊದಲ ಪಂದ್ಯದಲ್ಲಿ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ರಿಂಕು ಸಿಂಗ್ ಸಹ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಇವರು 220ರ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಮಾಡಿದರು. ಇವರು ಅಜೇಯ 44 ರನ್‌ಗಳ ಇನಿಂಗ್ಸ್‌ನಲ್ಲಿ 4 ಬೌಂಡರಿ, 3 ಸಿಕ್ಸರ್ ಸೇರಿವೆ. ಈ ಸಮಯೋಚಿತ ಬ್ಯಾಟಿಂಗ್ ಮೂಲಕ ರಿಂಕು ಸಹ ದಾಖಲೆಯ ಪುಟಕ್ಕೆ ಎಂಟ್ರಿ ಪಡೆದರು.
ಟಿ20 ಕ್ರಿಕೆಟ್‌ನಲ್ಲಿ ಭಾರತದ ಪರ ಬ್ಯಾಟ್ ಮಾಡುವಾಗ 20ನೇ ಓವರ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಎಂಎಸ್ ಧೋನಿ ಅವರ ದಾಖಲೆಯ ಸಮಕ್ಕೆ ರಿಂಕು ನಿಂತರು. ರಿಂಕು ತಮ್ಮ ಟಿ20 ಕ್ರಿಕೆಟ್ ವೃತ್ತಿ ಜೀವನದಲ್ಲಿ 20ನೇ ಓವರ್‌ನಲ್ಲಿ 38 ಎಸೆತಗಳನ್ನು ಎದುರಿಸಿದ್ದು 12 ಸಿಕ್ಸರ್ ಬಾರಿಸಿದ್ದಾರೆ. ಧೋನಿ 132 ಎಸೆತಗಳನ್ನು ಎದುರಿಸಿ ಇಷ್ಟೇ ಸಿಕ್ಸರ್ ಬಾರಿಸಿದ್ದಾರೆ. ಈ ಪಟ್ಟಿಯಲ್ಲಿ ಹಾರ್ದಿಕ್ ಪಾಂಡ್ಯ ಅಗ್ರ ಸ್ಥಾನದಲ್ಲಿದ್ದಾರೆ. ಇವರು 99 ಎಸೆತಗಳನ್ನು ಎದುರಿಸಿ 15 ಸಿಕ್ಸರ್ ಬಾರಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications