ಚೊಚ್ಚಲ ಇನ್ನಿಂಗ್ಸ್‌ನಲ್ಲೇ ವಿಶ್ವದಾಖಲೆ ನಿರ್ಮಿಸಿದ SKY: ವಿಡಿಯೋ

ಅಹ್ಮದಾಬಾದ್: ಗುರುವಾರ (ಮಾರ್ಚ್ 18) ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದಿದ್ದ ಭಾರತ ಮತ್ತು ಇಂಗ್ಲೆಂಡ್ 4ನೇ ಟಿ20ಐ ಪಂದ್ಯದಲ್ಲಿ ಮುಂಬೈ ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್ ವಿಶಿಷ್ಠ ದಾಖಲೆ ನಿರ್ಮಿಸಿದ್ದಾರೆ. ಆಡಿದ ಚೊಚ್ಚಲ ಅಂತಾರಾಷ್ಟ್ರೀಯ ಇನ್ನಿಂಗ್ಸ್‌ನ ಆರಂಭಿಕ ಎಸೆತದಲ್ಲೇ ಸಿಕ್ಸ್ ಬಾರಿಸಿದ ಹಿರಿಮೆ ಯಾದವ್ ಹೆಸರಿಗೆ ಸೇರಿಕೊಂಡಿದೆ.
ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟಿ20ಐನಲ್ಲಿ ಸೂರ್ಯಕುಮಾರ್ ಯಾದವ್ ಮೊದಲ ಎಸೆತದಲ್ಲೇ ಸಿಕ್ಸ್ ಬಾರಿಸಿ ಹಳೆಯ ದಾಖಲೆಯೊಂದನ್ನು ನೆನಪಿಸಿದ್ದಾರೆ. 2014ರಲ್ಲಿ ನ್ಯೂಜಿಲೆಂಡ್‌ನ ಮಾರ್ಕ್ ಕ್ರೇಗ್ ಈ ಸಾಧನೆ ಮಾಡಿದ್ದರು.

ಟೆಸ್ಟ್‌ನಲ್ಲಿ ಸಿಕ್ಸ್ ಚಚ್ಚಿದ್ದ ಕ್ರೇಗ್
ನ್ಯೂಜಿಲೆಂಡ್‌ನ ಮಾಜಿ ಬ್ಯಾಟ್ಸ್‌ಮನ್ ಮಾರ್ಕ್ ಕ್ರೇಗ್ ಅವರು ಕಿಂಗ್‌ಸ್ಟನ್‌ನಲ್ಲಿ ನಡೆದಿದ್ದ ಟೆಸ್ಟ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಪಾದಾರ್ಪಣೆ ಇನ್ನಿಂಗ್ಸ್‌ನ ಆರಂಭಿಕ ಎಸೆತದಲ್ಲಿ ಸಿಕ್ಸ್ ಚಚ್ಚಿ ವಿಶ್ವ ವಿಶ್ವದಾಖಲೆ ನಿರ್ಮಿಸಿದ್ದರು. ಸುಲಿಮಾನ್ ಬೆನ್ ಎಸೆತಕ್ಕೆ ಆವತ್ತು ಕ್ರೇಗ್ ಸಿಕ್ಸ್ ಚಚ್ಚಿದ್ದರು.

ಭಾರತಕ್ಕೆ ರೋಚಕ ಜಯ
ಗುರುವಾರ (ಮಾರ್ಚ್ 18) ನಡೆದ ಭಾರತ-ಇಂಗ್ಲೆಂಡ್ 4ನೇ ಟಿ20ಐ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಪಡೆ 8 ರನ್ ರೋಚಕ ಜಯ ಗಳಿಸಿದೆ. ಪಾದಾರ್ಪಣೆ ಇನ್ನಿಂಗ್ಸ್ ಆಡಿದ ಸೂರ್ಯಕುಮಾರ್ ಯಾದವ್ ಅವರ ಸ್ಫೋಟಕ ಅರ್ಧ ಶತಕ (57 ರನ್, 31 ಎಸೆತ)ದೊಂದಿಗೆ ಭಾರತ ಐದು ಪಂದ್ಯಗಳ ಟಿ20ಐ ಸರಣಿಯಲ್ಲಿ 2-2ರ ಸಮಬಲ ಸಾಧಿಸಿದೆ.
ಪಂದ್ಯದ ಸಂಕ್ಷಿಪ್ತ ಸ್ಕೋರ್
* ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತದಿಂದ ರೋಹಿತ್ ಶರ್ಮಾ 12, ಕೆಎಲ್ ರಾಹುಲ್ 14, ಸೂರ್ಯಕುಮಾರ್ ಯಾದವ್ 57 (31), ರಿಷಭ್ ಪಂತ್ 30, ಶ್ರೇಯಸ್ ಐಯ್ಯರ್ 37, ಹಾರ್ದಿಕ್ ಪಾಂಡ್ಯ 11, ಶಾರ್ದೂಲ್ ಠಾಕೂರ್ 10 ರನ್ ಸೇರಿಸಿದರು. ಭಾರತ 20 ಓವರ್‌ಗೆ 8 ವಿಕೆಟ್ ಕಳೆದು 185 ರನ್ ಗಳಿಸಿತು.
* ಗುರಿ ಬೆನ್ನಟ್ಟಿದ ಇಂಗ್ಲೆಂಡ್, ಜೇಸನ್ ರಾಯ್ 40 (27), ಜೋಸ್ ಬಟ್ಲರ್ 9, ಡೇವಿಡ್ ಮಲಾನ್ 14, ಜಾನಿ ಬೇರ್ಸ್ಟೋವ್ 25, ಬೆನ್ ಸ್ಟೋಕ್ಸ್ 46 (23), ಕ್ರಿಸ್ ಜೋರ್ಡನ್ 12, ಜೋಫ್ರಾ ಆರ್ಚರ್ 18 (8) ರನ್‌ನೊಂದಿಗೆ 20 ಓವರ್‌ಗೆ 8 ವಿಕೆಟ್ ಕಳೆದು 177 ರನ್ ಬಾರಿಸಿ ತಲೆ ಬಾಗಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications