ಸೂರ್ಯ, ಇಶಾನ್ ಅಬ್ಬರದ ಆಟ: ಭಾರತಕ್ಕೆ ದಾಖಲೆಯ ಜಯ
ರಾಯ್‌ಪುರ್: ನಾಯಕ ಸೂರ್ಯಕುಮಾರ್ ಯಾದವ್ ಹಾಗೂ ಇಶಾನ್ ಕಿಶನ್ ಅವರ ಸಿಡಿಲಬ್ಬರದ ಬ್ಯಾಟಿಂಗ್ ನೆರವಿನಿಂದ ಟೀಮ್ ಇಂಡಿಯಾ ಎರಡನೇ ಟಿ20 ಪಂದ್ಯದಲ್ಲಿ 7 ವಿಕೆಟ್‌ಗಳಿಂದ ನ್ಯೂಜಿಲೆಂಡ್ ತಂಡವನ್ನು ಮಣಿಸಿ ಐದು ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ
ಸವಾಲಿನ ಮೊತ್ತವನ್ನು ಹಿಂಬಾಲಿಸಿದ ಟೀಮ್ ಇಂಡಿಯಾದ ಆರಂಭ ಕಳಪೆಯಾಗಿತ್ತು. ಆರಂಭಿಕ ಆಟಗಾರ ಸಂಜು ಸ್ಯಾಮ್ಸನ್ ಸಿಕ್ಸರ್ ಬಾರಿಸಿ ಅಬ್ಬರಿಸಿದ್ದರು. ಆದರೆ ಮತ್ತೊಂದು ಸಿಕ್ಸರ್ ಬಾರಿಸಲು ಹೋಗಿ ಮಿಡ್ ಆನ್‌ನಲ್ಲಿ ರಚಿನ್‌ಗೆ ಕ್ಯಾಚ್ ನೀಡಿದರು. ಸ್ಫೋಟಕ ಬ್ಯಾಟರ್ ಅಭಿಷೇಕ್ ಶರ್ಮಾ, ಜಾಕೋಬ್ ಡಫ್ಫಿ ಅವರ ಎಸೆತವನ್ನು ಅರಿಯುವಲ್ಲಿ ವಿಫಲರಾಗಿ ಔಟ್ ಆದರು.

6 ರನ್ ಗಳಿಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಇಶಾನ್ ಕಿಶನ್ ಹಾಗೂ ನಾಯಕ ಸೂರ್ಯಕುಮಾರ್ ಯಾದವ್ ಜೋಡಿ ಆಧಾರವಾಯಿತು. ದೇಶೀಯ ಟೂರ್ನಿಯಲ್ಲಿ ಅಬ್ಬರಿಸಿದ್ದ ಇಶಾನ್ ಕಿಶನ್ ಮನಮೋಹಕ ಬ್ಯಾಟಿಂಗ್ ನಡೆಸಿದರು. ಈ ಜೋಡಿ ತಂಡದ ರನ್ ವೇಗಕ್ಕೆ ಚುರುಕು ಮುಟ್ಟಿಸಿತು. ಈ ಜೋಡಿ ಕೇವಲ 49 ಎಸೆತಗಳಲ್ಲಿ 122 ರನ್ ಸೇರಿಸಿತು.
ಇಶಾನ್ ಅಬ್ಬರ
ಇಶಾನ್ ಕಿಶನ್ ತಮ್ಮ ಅಮೋಘ ಬ್ಯಾಟಿಂಗ್ ನಿಂದ ಅಭಿಮಾನಿಗಳ ಮನ ಗೆದ್ದರು. ಇವರು ಕೇವಲ 32 ಎಸೆತಗಳಲ್ಲಿ 237 ರ ಸ್ಟ್ರೈಕ್ ರೇಟ್ ನಲ್ಲಿ ರನ್ ಕಲೆ ಹಾಕಿದರು. ಇವರು 11 ಬೌಂಡರಿ, 4 ಸಿಕ್ಸರ್ ಸಹಾಯದಿಂದ 76 ರನ್ ಬಾರಿಸಿ ಅಬ್ಬರಿಸಿದರು.
438 ದಿನಗಳ ಬಳಿಕ ಸೂರ್ಯ ಅರ್ಧಶತಕ
ಟೀಮ್ ಇಂಡಿಯಾದ ನಾಯಕ ಸೂರ್ಯಕುಮಾರ್ ಯಾದವ್ ಲಯ ಕಂಡು ಕೊಂಡರು. ಟಿ20 ವಿಶ್ವಕಪ್ ಮುನ್ನ ಸೂರ್ಯ ಭರ್ಜರಿ ಫಾರ್ಮ್ ಮರಳಿದ್ದು ಅಭಿಮಾನಿಗಳಿಗೆ ಖುಷಿ ನೀಡಿದೆ. ಇವರು 438 ದಿನಗಳ ಬಳಿಕ ಟಿ20 ಕ್ರಿಕೆಟ್ ನಲ್ಲಿ ಅರ್ಧಶತಕ ಬಾರಿಸಿದರು. ಇವರು ಕೇವಲ 37 ಎಸೆತಗಳಲ್ಲಿ 9 ಬೌಂಡರಿ, 4 ಸಿಕ್ಸರ್ ನೆರವಿನಿಂದ ಅಜೇಯ 82 ರನ್ ಬಾರಿಸಿದರು. ಇವರಿಗೆ ನಾಲ್ಕನೇ ವಿಕೆಟ್ ಗೆ ಶಿವಂ ದುಬೆ ಉತ್ತಮ ಸಾಥ್ ನೀಡಿದರು. ದುಬೆ 200ರ ಸ್ಟ್ರೈಕ್ ರೇಟ್ ನಲ್ಲಿ 36 ರನ್ ಸಿಡಿಸಿದರು. ನಾಲ್ಕನೇ ವಿಕೆಟ್ ಗೆ ಈ ಜೋಡಿ 37 ಎಸೆತಗಳಲ್ಲಿ ಅಜೇಯ 81 ರನ್ ಜೊತೆಯಾಟದ ಕಾಣಿಕೆ ನೀಡಿತು.
ಅಂತಿಮವಾಗಿ ಟೀಮ್ ಇಂಡಿಯಾ 15.2 ಒವರ್ ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 209 ರನ್ ಸಿಡಿಸಿ ಅಬ್ಬರಿಸಿತು. ಟಿ20 ಕ್ರಿಕೆಟ್ ಇತಿಹಾಸದಲ್ಲಿ ತಂಡವೊಂದು 200 ರನ್ ಟಾರ್ಗೆಟ್ ವೇಗವಾಗಿ ಚೇಸ್ ಮಾಡಿದ ದಾಖಲೆ ಟೀಮ್ ಇಂಡಿಯಾ ಪಾಲಾಯಿತು.

ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ ತಂಡದ ಆರಂಭಿಕರಾದ ಡೆವೊನ್ ಕಾನ್ವೇ ಹಾಗೂ ಟಿಮ್ ಸೀಫರ್ಟ್ ಜೋಡಿ ಮೊದಲ ವಿಕೆಟ್‌ಗೆ 3.2 ಓವರ್‌ಗಳಲ್ಲಿ 43 ರನ್ ಜೊತೆಯಾಟದ ಕಾಣಿಕೆ ನೀಡಿತು. ಡೆವೊನ್ ಕಾನ್ವೇ (19) ಅವರಿಗೆ ಹರ್ಷಿತ್ ರಾಣಾ ಪೆವೆಲಿಯನ್ ಹಾದಿ ತೋರಿಸಿದರು. ಟಿಮ್ ಸೀಫರ್ಟ್ (24) ವರುಣ್ ಚಕ್ರವರ್ತಿ ಅವರ ಸ್ಪಿನ್ ಬೌಲಿಂಗ್ ಎದುರಿಸುವಲ್ಲಿ ವಿಫಲರಾದರು.
ಮೂರನೇ ವಿಕೆಟ್‌ಗೆ ರಚಿನ್ ರವೀಂದ್ರ ಹಾಗೂ ಭರವಸೆಯ ಆಟಗಾರ ಗ್ಲೆನ್ ಫಿಲಿಪ್ಸ್ (19) ಜೋಡಿ 27 ಎಸೆತಗಳಲ್ಲಿ 55 ರನ್ ಕಾಣಿಕೆ ನೀಡಿತು. ಡ್ಯಾರಿಲ್ ಮಿಚಲ್ (18) ಜವಾಬ್ದಾರಿಯುತ ಬ್ಯಾಟಿಂಗ್ ಮಾಡುವಲ್ಲಿ ವಿಫಲರಾದರು. ಮಾರ್ಕ್ ಚಾಂಪ್ಮನ್ (10) ಬೇಗನೆ ಔಟ್ ಆದರು. ನಾಯಕ ಮಿಚಲ್ ಸ್ಯಾಂಟ್ನರ್ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿ ಅಜೇಯ 47 ರನ್ ಸಿಡಿಸಿದರು. ಅಂತಿಮವಾಗಿ ನ್ಯೂಜಿಲೆಂಡ್ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 208 ರನ್ ಸೇರಿಸಿತು. ಭಾರತದ ಪುರ ಕುಲ್‌ದೀಪ್ ಯಾದವ್ 2 ವಿಕೆಟ್ ಉರುಳಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications