For Quick Alerts
ALLOW NOTIFICATIONS  
For Daily Alerts
 

Suryakumar Yadav: ವಿರಾಟ್‌, ರೋಹಿತ್‌ ವಿಶೇಷ ಕ್ಲಬ್‌ ಸೇರಿದ ಸೂರ್ಯ

ಟಿ20 ಕ್ರಿಕೆಟ್‌ನ ಸೂಪರ್ ಸ್ಟಾರ್ ಬ್ಯಾಟರ್‌ ಸೂರ್ಯಕುಮಾರ್ ಯಾದವ್, ದೊಡ್ಡ ಸಾಧನೆಯನ್ನು ಮಾಡಿದ್ದಾರೆ. ಸದ್ಯ ಭಾರತದಲ್ಲಿ ನಡೆಯುತ್ತಿರುವು ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಭಾಗವಾಗಿರುವ ಇವರು, ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. ಮುಂಬೈನ ವಾಂಖೆಡೆ ಅಂಗಳದಲ್ಲಿ ನಡೆದ ಕೆಕೆಆರ್‌ ವಿರುದ್ಧದ ಪಂದ್ಯದಲ್ಲಿ 27 ರನ್ ಬಾರಿಸಿ ದೊಡ್ಡ ಸಾಧನೆಯನ್ನು ಮಾಡಿದ್ದಾರೆ. ಈ ಮೂಲಕ ಈ ದೊಡ್ಡ ಮೈಲುಗಲ್ಲು ತಲುಪಿದ ಭಾರತದ ಐದನೇ ಬ್ಯಾಟರ್‌ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.

ಸೋಮವಾರ ಮುಂಬೈನಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಸೋತರೂ ಮೊದಲು ಬ್ಯಾಟ್ ಮಾಡಿದ ಕೋಲ್ಕತ್ತಾ ನೈಟ್ ರೈಡರ್ಸ್ 16.2 ಓವರ್‌ಗಳಲ್ಲಿ 116 ರನ್‌ ಸೇರಿಸಿತು. ಮುಂಬೈ ಪರ ಚೊಚ್ಚಲ ಐಪಿಎಲ್ ಪಂದ್ಯವನ್ನು ಆಡುತ್ತಿರುವ ಅಶ್ವನಿ ಕುಮಾರ್‌ 4 ವಿಕೆಟ್‌ ಕಬಳಿಸಿ ಮಿಂಚಿದರು. ಗುರಿಯನ್ನು ಬೆನ್ನಟ್ಟಿದ ಮುಂಬೈ 12.5 ಓವರ್‌ಗಳಲ್ಲಿ 2 ವಿಕೆಟ್‌ ಕಳೆದುಕೊಂಡು 121 ರನ್‌ ಸೇರಿಸಿತು. ಈ ವೇಳೆ ಆರಂಭಿಕ ರಯಾನ್ ರಿಕೆಲ್ಟನ್ ಅಜೇಯ 62 ಹಾಗೂ ಸೂರ್ಯಕುಮಾರ್ ಯಾದವ್ ಅಜೇಯ 27 ರನ್‌ ಬಾರಿಸಿ ಮಿಂಚಿದರು.

Suryakumar Yadav Joins Virat Kohli and Rohit Sharma in Elite 8000 T20 Runs Club

ಕೆಕೆಆರ್‌ ವಿರುದ್ಧದ ಪಂದ್ಯದಲ್ಲಿ ಸೂರ್ಯ 300ರ ಸ್ಟ್ರೈಕ್‌ ರೇಟ್‌ನಲ್ಲಿ ರನ್ ಕಲೆ ಹಾಕಿದರು. ಈ ವೇಳೆ ಇವರು 9 ಎಸೆತಗಳಲ್ಲಿ 3 ಬೌಂಡರಿ, 2 ಸಿಕ್ಸರ್ ಸಹಾಯದಿಂದ 27 ರನ್‌ ಸಿಡಿಸಿದರು. ಈ ಉತ್ತಮ ಇನಿಂಗ್ಸ್ ಸಹಾಯದಿಂದ ಸೂರ್ಯಕುಮಾರ್‌ ವಿಶೇಷ ಕ್ಲಬ್‌ಗೆ ಎಂಟ್ರಿ ನೀಡಿದರು. ಟಿ20 ಕ್ರಿಕೆಟ್‌ನಲ್ಲಿ 8 ಸಾವಿರ ರನ್‌ಗಳನ್ನು ಪೂರ್ಣಗೊಳಿಸಿದ ಭಾರತದ ಐದನೇ ಬ್ಯಾಟರ್‌ ಎಂಬ ಹೆಗ್ಗಳಿಕೆ ಇವರದ್ದಾಗಿಸಿಕೊಂಡರು. ಇವರು ಈಗಾಗಲೇ ಕೆಕೆಆರ್‌ ಹಾಗೂ ಮುಂಬೈ ಇಂಡಿಯನ್ಸ್‌ ತಂಡದ ಪರ ಐಪಿಎಲ್‌ನಲ್ಲಿ ಮಿಂಚಿದ್ದಾರೆ. ಅಲ್ಲದೆ ಭಾರತದ ಟಿ20 ನಾಯಕನಾಗಿ ಕಾಣಿಸಿಕೊಂಡಿದ್ದಾರೆ.

ವಿರಾಟ್‌ಗೆ ಅಗ್ರ ಸ್ಥಾನ

ಟೀಮ್ ಇಂಡಿಯಾ ಪರ 8 ಸಾವಿರ ರನ್‌ ಕಲೆ ಹಾಕಿದ ಆಟಗಾರರ ಪಟ್ಟಿಯಲ್ಲಿ ವಿರಾಟ್‌ ಕೊಹ್ಲಿ ಒಂದನೇ ಸ್ಥಾನದಲ್ಲಿ ನಿಲುತ್ತಾರೆ. ಇವರು 12976 ರನ್‌ ಸಿಡಿಸಿದ್ದಾರೆ. ಈ ಪಟ್ಟಿಯಲ್ಲಿ ರೋಹಿತ್‌ಗೆ ಎರಡನೇ ಸ್ಥಾನ ಇವರು 11851 ರನ್‌ ಕಲೆ ಹಾಕಿದ್ದಾರೆ. ಶಿಖರ್‌ ಧವನ್‌ ಮೂರನೇ ಸ್ಥಾನದಲ್ಲಿದ್ದು, ಇವರು 9797 ರನ್‌ ಬುಟ್ಟಿಗೆ ಹಾಕಿಕೊಂಡಿದ್ದಾರೆ. ಸುರೇಶ್‌ ರೈನಾ 8654 ರನ್‌ಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದಾರೆ. ಸೂರ್ಯ ಈ ಪಟ್ಟಿಗೆ ಸೇರಿರುವ ಐದನೇ ಆಟಗಾರ.

Suryakumar Yadav Joins Virat Kohli and Rohit Sharma in Elite 8000 T20 Runs Club

ಸಿಕ್ಕ ಅವಕಾಶವನ್ನು ಎರಡೂ ಕೈಗಳಲ್ಲಿ ಬಳಸಿಕೊಳ್ಳುವ ಸೂರ್ಯಕುಮಾರ್‌ ಯಾದವ್ ಐಪಿಎಲ್‌ ಮೂಲಕ ಟೀಮ್ ಇಂಡಿಯಾ ಸೇರಿದ ಪ್ರತಿಭೆ. ಈಗಾಗಲೇ ಸೂರ್ಯ ಭಾರತದ ಪರ 83 ಟಿ20 ಪಂದ್ಯಗಳನ್ನು ಆಡಿದ್ದು 167 ಸ್ಟ್ರೈಕ್‌ ರೇಟ್‌ ಹಾಗೂ 38ರ ಸರಾಸರಿಯಲ್ಲಿ 2598 ರನ್‌ ಕಲೆ ಹಾಕಿದ್ದಾರೆ. ಇನ್ನು ಐಪಿಎಲ್‌ನಲ್ಲಿ ಸೂರ್ಯಾ ಆಡಿದ 153 ಪಂದ್ಯಗಳಲ್ಲಿ 3698 ರನ್‌ ಕಲೆ ಹಾಕಿದ್ದಾರೆ. ಈ ವೇಳೆ 2 ಶತಕ ಹಾಗೂ 24 ಅರ್ಧಶತಕಗಳ ಮೂಡಿ ಬಂದಿವೆ.

Story first published: Tuesday, April 1, 2025, 11:06 [IST]
Other articles published on Apr 1, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+