For Quick Alerts
ALLOW NOTIFICATIONS  
For Daily Alerts
 

ಯುಎಸ್‌ಎ ವಿರುದ್ಧ ಅಬ್ಬರಿಸಿದ ಸೂರ್ಯಕುಮಾರ್; ಕೊಹ್ಲಿ-ಬಾಬರ್ ರೆಕಾರ್ಡ್ ಬ್ರೇಕ್

ಮುಂಬೈ: ಟೀಮ್ ಇಂಡಿಯಾ ಟಿ20 ವಿಶ್ವಕಪ್‌ 2026 ಅಭಿಯಾನವನ್ನು ಗೆಲುವಿನಿಂದ ಆರಂಭಿಸಿದೆ. ವಾಂಖೆಡೆ ಅಂಗಳದಲ್ಲಿ ಸೂರ್ಯ ಪಡೆ ಭರ್ಜರಿ ಪ್ರದರ್ಶನ ನೀಡಿ ಜಯ ಸಾಧಿಸಿದೆ. ಈ ಗೆಲುವಿನ ಮೂಲಕ ಭಾರತ ಟಿ20 ವಿಶ್ವಕಪ್ ಗೆಲುವಿನ ಅಭಿಯಾನಕ್ಕೆ ಚಾಲನೆ ನೀಡಿದೆ. ಈ ಪಂದ್ಯದಲ್ಲಿ ಟಾಪ್‌ ಆರ್ಡರ್‌ ಬ್ಯಾಟರ್‌ಗಳು ರನ್‌ ಕಲೆಹಾಕುವಲ್ಲಿ ವಿಫಲರಾದಾಗ ನಾಯಕ ಸೂರ್ಯಕುಮಾರ್ ಯಾದವ್ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದರು. ಈ ಭರ್ಜರಿ ಪ್ರದರ್ಶನದ ಮೂಲಕ ನಾಯಕ ಸ್ಕೈ ಮೊದಲ ಪಂದ್ಯದಲ್ಲೇ ಹಲವು ದಾಖಲೆಗಳನ್ನು ನಿರ್ಮಿಸಿದರು.

ವಾಂಖೆಡೆ ಅಂಗಳದಲ್ಲಿ ಟೀಮ್ ಇಂಡಿಯಾ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿತು. ಟಾಪ್‌ ಆರ್ಡರ್‌ ಬ್ಯಾಟರ್‌ಗಳ ಅಬ್ಬರ ಮೊದಲ ಪಂದ್ಯದಲ್ಲಿ ನಡೆಯಲೇ ಇಲ್ಲ. ಅಕ್ಷರ್‌ ಪಟೇಲ್ ಹಾಗೂ ಸೂರ್ಯಕುಮಾರ್ ಯಾದವ್ ಮಾತ್ರ ಉತ್ತಮ ಜೊತೆಯಾಟದ ಕಾಣಿಕೆ ನೀಡಿದರು. ಉಳಿದ ಬ್ಯಾಟರ್‌ಗಳು ರನ್‌ ಬರವನ್ನು ಅನುಭವಿಸಿದರು. ಸೂರ್ಯಕುಮಾರ್ ತಾವು ಬೆಳೆದ ಪಿಚ್‌ನ ಮರ್ಮ ಅರಿತು ಬ್ಯಾಟ್ ಮಾಡಿ ಅಬ್ಬರಿಸಿದರು. ಆರಂಭದಲ್ಲಿ ನೆಲಕಚ್ಚಿ ಬ್ಯಾಟಿಂಗ್ ಮಾಡಿದ ಸೂರ್ಯ ಬಳಿಕ ರನ್‌ ವೇಗಕ್ಕೆ ಚುರುಕು ಮುಟ್ಟಿಸುವ ಕೆಲಸವನ್ನು ಮಾಡಿದರು.

Suryakumar Yadav

ಸೂರ್ಯಕುಮಾರ್ ಯಾದವ್ ಅವರ ಬಿರುಸಿನ ಇನಿಂಗ್ಸ್‌ ಫಲವಾಗಿಯೇ ಟೀಮ್ ಇಂಡಿಯಾ ಸ್ಪರ್ಧಾತ್ಮಕ ಮೊತ್ತವನ್ನು ಕಲೆ ಹಾಕುವಂತೆ ಆಯಿತು. ಈ ಪಂದ್ಯದಲ್ಲಿ ಸೂರ್ಯ 10 ಬೌಂಡರಿ, 4 ಸಿಕ್ಸರ್ ಸಹಾಯದಿಂದ ಅಜೇಯ 84 ರನ್‌ ಬಾರಿಸಿ ಆರ್ಭಟಿಸಿದರು. ಇವರ ಕ್ಲಾಸ್‌ ಇನಿಂಗ್ಸ್‌ಗೆ ಹಲವು ದಾಖಲೆಗಳು ಪುಡಿ ಪುಡಿಯಾದವು.

ವಿರಾಟ್‌ ದಾಖಲೆ ಅಳಿಸಿದ ಸೂರ್ಯ

ಚುಟುಕು ವಿಶ್ವಕಪ್‌ನಲ್ಲಿ ಭಾರತದ ನಾಯಕರಾಗಿ ರೋಹಿತ್ ಶರ್ಮಾ ಗರಿಷ್ಠ ರನ್ ಬಾರಿಸಿದ್ದಾರೆ. ಇವರು 2024ರ ಟಿ20 ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ 92 ರನ್‌ ಬಾರಿಸಿದ್ದರು. ಈಗ ಈ ಪಟ್ಟಿಯಲ್ಲಿ ಸೂರ್ಯಕುಮಾರ್ ಎರಡನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ. ಸೂರ್ಯ ಈ ಮನಮೋಹಕ ಇನಿಂಗ್ಸ್‌ ಮೂಲಕ ವಿರಾಟ್‌ ದಾಖಲೆ ಅಳಿಸಿ ಹಾಕಿದರು. ವಿರಾಟ್‌ ನಾಯಕನಾಗಿ 2021 ರ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ 57 ರನ್ ಬಾರಿಸಿದ್ದರು.


ಟಿ20 ವಿಶ್ವಕಪ್‌ನಲ್ಲಿ ಅತಿ ಹೆಚ್ಚು ರನ್ ಕಲೆ ಹಾಕಿದ ಭಾರತದ ನಾಯಕ

ರೋಹಿತ್ ಶರ್ಮಾ, ಆಸ್ಟ್ರೇಲಿಯಾ ವಿರುದ್ಧ 92 ರನ್‌
ಸೂರ್ಯಕುಮಾರ್ ಯಾದವ್, ಯುಎಸ್ಎ ವಿರುದ್ಧ 84 ರನ್‌
ವಿರಾಟ್ ಕೊಹ್ಲಿ, ಪಾಕಿಸ್ತಾನ ವಿರುದ್ಧ 57 ರನ್‌
ಎಂಎಸ್ ಧೋನಿ, ದಕ್ಷಿಣ ಆಫ್ರಿಕಾ ವಿರುದ್ಧ 45 ರನ್‌

ಬಾಬರ್‌ ದಾಖಲೆ ಉಡೀಸ್‌

ಸೂರ್ಯಕುಮಾರ್ ಯಾದವ್ ನಾಯಕರಾಗಿ ತಮ್ಮ ಮೊದಲ ಟಿ20 ವಿಶ್ವಕಪ್ ಆಡುತ್ತಿದ್ದಾರೆ. ಈ ವೇಳೆ ತಾವಾಡಿದ ಮೊದಲ ಪಂದ್ಯದಲ್ಲಿಯೇ ಸೂರ್ಯ ಕಮಾಲ್‌ ಬ್ಯಾಟಿಂಗ್ ಪ್ರದರ್ಶನ ನೀಡಿ, ಪಾಕ್‌ನ ಬಾಬರ್‌ ಅಜಂ ದಾಖಲೆ ಅಳಿಸಿ ಹಾಕಿದರು. ನಾಯಕನಾಗಿ ಟಿ20 ವಿಶ್ವಕಪ್‌ ಪದಾರ್ಪಣೆ ಪಂದ್ಯದಲ್ಲಿ ಸೂರ್ಯ 84 ರನ್‌ ಬಾರಿಸಿದರು. ಈ ಮೂಲಕ ನಾಯಕನಾಗಿ ಮೊದಲ ಟಿ20 ವಿಶ್ವಕಪ್‌ ಚೊಚ್ಚಲ ಪಂದ್ಯದಲ್ಲೇ ಗರಿಷ್ಠ ರನ್‌ ಬಾರಿಸಿದ ಎರಡನೇ ಬ್ಯಾಟರ್‌ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಂಡರು.


ಟಿ20 ವಿಶ್ವಕಪ್‌ನಲ್ಲಿ ನಾಯಕರಾಗಿ ಮೊದಲ ಪಂದ್ಯದಲ್ಲಿ ಗರಿಷ್ಠ ರನ್ ಬಾರಿಸಿದ ಬ್ಯಾಟರ್ಸ್‌

ನಾಯಕ ದೇಶ ವಿರುದ್ಧ ರನ್ ವರ್ಷ
ಕ್ರಿಸ್ ಗೇಲ್ ವೆಸ್ಟ್ ಇಂಡೀಸ್ ಆಸ್ಟ್ರೇಲಿಯಾ 88 2009
ಸೂರ್ಯಕುಮಾರ್ ಯಾದವ್ ಭಾರತ ಯುಎಸ್ಎ 84 2026
ಬಾಬರ್ ಅಜಂ ಪಾಕಿಸ್ತಾನ ಭಾರತ 68 2021
ಮಹೇಲ ಜಯವರ್ಧನೆ ಶ್ರೀಲಂಕಾ ಕೀನ್ಯಾ 65 2007
ಮೊಹಮ್ಮದ್ ಅಶ್ರಫುಲ್ ಬಾಂಗ್ಲಾದೇಶ ವೆಸ್ಟ್ ಇಂಡೀಸ್ 61 2007

ಅತಿ ಹೆಚ್ಚು ಪಂದ್ಯ ಶ್ರೇಷ್ಠ ಪ್ರಶಸ್ತಿ

ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಸೂರ್ಯಕುಮಾರ್‌ ಯಾದವ್ ಮತ್ತೊಂದು ದಾಖಲೆಯನ್ನು ಭಾರತದ ಪರ ಮಾಡಿದ್ದಾರೆ. ಯುಎಸ್‌ಎ ವಿರುದ್ಧದ 84 ರನ್‌ ಇನಿಂಗ್ಸ್‌ ಫಲವಾಗಿ ಇವರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ನೀಡಲಾಯಿತು. ಈ ಮೂಲಕ ಇವರು ವಿರಾಟ್‌ ಕೊಹ್ಲಿ ದಾಖಲೆಯನ್ನು ಅಳಿಸಿ ಹಾಕಿದ್ದಾರೆ. ವಿರಾಟ್ ಕೊಹ್ಲಿ ಟಿ20 ಕ್ರಿಕೆಟ್‌ನಲ್ಲಿ 16 ಬಾರಿ ಈ ಸಾಧನೆ ಮಾಡಿದ್ದರು. ಈಗ ಸೂರ್ಯ ಈ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದು, ಇವರು 17 ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದಿದ್ದಾರೆ. ಈ ಪಟ್ಟಿಯಲ್ಲಿ ರೋಹಿತ್ ಶರ್ಮಾ (14) ಮೂರನೇ ಸ್ಥಾನದಲ್ಲಿದ್ದಾರೆ.


ಸೂರ್ಯ ನಿರ್ಮಿಸಿ ಮತ್ತೊಂದು ರೆಕಾರ್ಡ್‌

ಟಿ20 ವಿಶ್ವಕಪ್‌ನಲ್ಲಿ ಸೂರ್ಯಕುಮಾರ್ ಯಾದವ್ ಮತ್ತೊಂದು ದಾಖಲೆಗಳನ್ನು ನಿರ್ಮಿಸಿದ್ದಾರೆ. ಭಾರತದ ಪರ ಈ ಟೂರ್ನಿಯಲ್ಲಿ ಗರಿಷ್ಠ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ಆಟಗಾರರ ಪಟ್ಟಿಯಲ್ಲಿ ಇವರು ಈಗ ಎರಡನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ. ಈ ಮೂಲಕ ಇವರು ಯುವರಾಜ್‌ ಸಿಂಗ್ (4) ದಾಖಲೆ ಅಳಿಸಿದ್ದಾರೆ. ಟಿ20 ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಬಾರಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ದಾಖಲೆ ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್‌ ಕೊಹ್ಲಿ ಹೆಸರಿನಲ್ಲಿದ್ದು, ಇವರು 8 ಬಾರಿ ಈ ಸಾಧನೆ ಮಾಡಿದ್ದಾರೆ. ಸೂರ್ಯ ಇದೇ ಟೂರ್ನಿಯಲ್ಲಿ 4 ಬಾರಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದಿದ್ದಾರೆ.

Story first published: Sunday, February 8, 2026, 7:48 [IST]
Other articles published on Feb 8, 2026
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+