Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಸೂರ್ಯ 2 ಸಿಕ್ಸರ್ ಬಾರಿಸುತ್ತಲೇ ದಾಖಲೆ; ಏನದು?

ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಮೊದಲ ಟಿ20 ಬುಧವಾರ ಕ್ಯಾನ್‌ಬೆರೆ ಅಂಗಳದಲ್ಲಿ ನಡೆಯಲಿದೆ. ಈ ವೇಳೆ ಎಲ್ಲರ ಗಮನ ಭಾರತ ತಂಡದ ಸ್ಟಾರ್ ಆಟಗಾರರ ಮೇಲೆ ನೆಟ್ಟಿದೆ. ಈ ಸರಣಿ ಟೀಮ್ ಇಂಡಿಯಾದ ಹಲವು ಆಟಗಾರರಿಗೆ ಮಹತ್ವದಾಗಿದೆ. ಕಳೆದ ಕೆಲವು ಪಂದ್ಯಗಳಲ್ಲಿ ರನ್‌ ಕಲೆ ಹಾಕುವಲ್ಲಿ ವಿಫಲರಾಗಿದ್ದ ಸೂರ್ಯ ಈ ಸರಣಿಯಲ್ಲಿ ಸ್ಥಿರ ಪ್ರದರ್ಶನ ನೀಡಿ, ತಮ್ಮ ಕ್ಷಮತೆ ಸಾಬೀತು ಪಡಿಸಬೇಕಿದೆ. ಈ ಮೂಲಕ ಮುಂದಿನ ವರ್ಷದ ಟಿ20 ವಿಶ್ವಕಪ್‌ಗೆ ತಾನು ಸಿದ್ಧ ಎಂದು ಸಾರಬೇಕಿದೆ.

ಸೂರ್ಯಕುಮಾರ್ ಯಾದವ್ ರನ್‌ ಬರ ಅನುಭವಿಸುತ್ತಿರುವುದು ಟೀಕೆಗಳು ಏಳುವಂತೆ ಮಾಡಿವೆ. ಇವರು ಬೇಗ ಲಯಕ್ಕೆ ಮರಳುವುದು ಅನಿವಾರ್ಯವಾಗಿದೆ. ಆಸೀಸ್‌ ವಿರುದ್ಧದ ಸರಣಿಯಲ್ಲಿ ಸೂರ್ಯ ಶ್ರೇಷ್ಠ ಪ್ರದರ್ಶನ ನೀಡಿ ಟೀಕೆಗಳಿಗೆ ಉತ್ತರ ನೀಡಬೇಕಿದೆ. ಅಲ್ಲದೆ ಅಭಿಮಾನಿಗಳಿಗೆ ಹಬ್ಬದೂಟವನ್ನು ಉಣಬಡಿಸಬೇಕಿದೆ. ಸೂರ್ಯ ಒಂದು ವೇಳೆ ಫಾರ್ಮ್‌ ಕಂಡುಕೊಂಡಲ್ಲಿ ಎದುರಾಳಿಗಳಿಗೆ ನಡುಕ ಆರಂಭವಾಗುತ್ತದೆ.

Suryakumar Yadav on brink of major T20I record Needs just two sixes to join Rohit Sharma

ಸೂರ್ಯ ಏಷ್ಯಾ ಕಪ್‌ ಟಿ20 ಕ್ರಿಕೆಟ್‌ ಟೂರ್ನಿಯಲ್ಲಿ ರನ್‌ ಕಲೆ ಹಾಕುವಲ್ಲಿ ವಿಫಲರಾಗಿದ್ದರು. ಹೀಗಾಗಿ ಕಳೆದ 14 ಟಿ20 ಇನಿಂಗ್ಸ್‌ನಿಂದ ಯಾವುದೇ ದೊಡ್ಡ ಇನಿಂಗ್ಸ್‌ ಬಂದಿಲ್ಲ. ಹೀಗಾಗಿ ಇವರ ಬ್ಯಾಟ್‌ನಿಂದ ಈ ಸರಣಿಯಲ್ಲಿ ಅಬ್ಬರ ಬರುವುದು ಅನಿವಾರ್ಯವಾಗಿದೆ. ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಈ ಸರಣಿಯಲ್ಲಿ ಇನ್ನು 2 ಸಿಕ್ಸರ್ ಬಾರಿಸಿದ್ದೇ ಆದಲ್ಲಿ ದೊಡ್ಡ ದಾಖಲೆಯನ್ನು ಬರೆಯಲಿದ್ದಾರೆ. ಈ ಮೂಲಕ ಈ ಸಾಧನೆ ಮಾಡಿದ ಎರಡನೇ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಳ್ಳಲಿದ್ದಾರೆ.

2 ಸಿಕ್ಸರ್ ಬಾರಿಸುತ್ತಲೇ ದಾಖಲೆ

ಸೂರ್ಯಕುಮಾರ್ ಯಾದವ್ ಆಡಿದ 90 ಪಂದ್ಯಗಳಲ್ಲಿ 148 ಸಿಕ್ಸರ್‌ ಸಿಡಿಸಿದ್ದಾರೆ. ಈ ಸರಣಿಯಲ್ಲಿ 2 ಸಿಕ್ಸರ್ ಬಾರಿಸಿದರೆ ಟಿ20 ಕ್ರಿಕೆಟ್‌ನಲ್ಲಿ 150 ಸಿಕ್ಸರ್ ಬಾರಿಸಿದ ಹಿರಿಮೆ ತಮ್ಮದಾಗಿಸಿಕೊಳ್ಳಲಿದ್ದಾರೆ. ಈ ಮೂಲಕ ನಿಕೋಲಸ್ ಪೂರನ್ ಅವರ ದಾಖಲೆಯನ್ನು ಮೀರಿ ನಿಲ್ಲುವ ಅವಕಾಶ ಸಹ ಸೂರ್ಯ ಅವರಿಗಿದೆ. ನಿಕೋಲಸ್ ಪೂರನ್‌ 149 ಸಿಕ್ಸರ್ ಬಾರಿಸಿದ್ದಾರೆ.

Suryakumar Yadav on brink of major T20I record Needs just two sixes to join Rohit Sharma

ವಿಶ್ವ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ದಾಖಲೆ ಟೀಮ್ ಇಂಡಿಯಾದ ಸ್ಟಾರ್ ಆಟಗಾರ ರೋಹಿತ್ ಶರ್ಮಾ ಅವರ ಹೆಸರಿನಲ್ಲಿದೆ. ಇವರು 159 ಟಿ20 ಪಂದ್ಯಗಳಲ್ಲಿ 205 ಸಿಕ್ಸರ್ ಬಾರಿಸಿದ್ದಾರೆ. ಸೂರ್ಯ ಈ ಸರಣಿಯಲ್ಲಿ ಈ ಸಾಧನೆ ಮಾಡಿದ್ದೇ ಆದಲ್ಲಿ 150ಕ್ಕೂ ಹೆಚ್ಚು ಸಿಕ್ಸರ್ ಬಾರಿಸಿದ ಭಾರತದ 2ನೇ ಆಟಗಾರ ಎಂಬ ಹೆಗ್ಗಳಿಕೆ ಅವರದ್ದಾಗಲಿದೆ. ಅಲ್ಲದೆ ವಿಶ್ವ ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದ 5ನೇ ಆಟಗಾರ ಎಂಬ ಶ್ರೇಯ ತಮ್ಮದಾಗಿಸಿಕೊಳ್ಳಲಿದ್ದಾರೆ.

ಟಿ20 ಕ್ರಿಕೆಟ್‌ನಲ್ಲಿ ಹೆಚ್ಚು ಸಿಕ್ಸರ್ ಬಾರಿಸಿದ ಭಾರತೀಯ ಪ್ಲೇಯರ್ಸ್‌

ರೋಹಿತ್ ಶರ್ಮಾ - 205 ಸಿಕ್ಸರ್‌
ಸೂರ್ಯಕುಮಾರ್ ಯಾದವ್ - 148 ಸಿಕ್ಸರ್‌
ವಿರಾಟ್ ಕೊಹ್ಲಿ - 124 ಸಿಕ್ಸರ್‌
ಕೆಎಲ್ ರಾಹುಲ್ - 99 ಸಿಕ್ಸರ್‌
ಹಾರ್ದಿಕ್ ಪಾಂಡ್ಯ - 96 ಸಿಕ್ಸರ್‌

Story first published: Wednesday, October 29, 2025, 9:07 [IST]
Other articles published on Oct 29, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+