ತನ್ನ ನೆಚ್ಚಿನ ಕ್ರಿಕೆಟ್ ಮಾದರಿಯಲ್ಲಿ ಆಡುವ ಅವಕಾಶ ಇನ್ನೂ ದೊರೆಯದ ಬಗ್ಗೆ ಬೇಸರ ಹೊರಹಾಕಿದ SKY

ಪ್ರಸ್ತುತ ಟೀಮ್ ಇಂಡಿಯಾದ ಬ್ಯಾಟಿಂಗ್ ಸೆನ್ಸೇಶನ್ ಆಗಿ ಗುರುತಿಸಿಕೊಂಡಿರುವ ಆಟಗಾರ ಸೂರ್ಯಕುಮಾರ್ ಯಾದವ್ ಈ ಕ್ಯಾಲೆಂಡರ್ ವರ್ಷದಲ್ಲಿ ಅಮೋಘ ಪ್ರದರ್ಶನ ನೀಡಿದ್ದಾರೆ. ಅದರಲ್ಲೂ ಟಿ20 ಮಾದರಿಯಲ್ಲಿ ಸೂರ್ಯ ನೀಡಿದ ಪ್ರದರ್ಶನ ಟೀಮ್ ಇಂಡಿಯಾದ ಯಶಸ್ಸಿನಲ್ಲಿಯೂ ಅಂತ್ಯಂತ ಮಹತ್ವದ ಪಾತ್ರವಹಿಸಿತ್ತು ಎಂಬುದು ಗಮನಾರ್ಹ ಅಂಶ. 32ರ ಹರೆಯದ ಸೂರ್ಯಕುಮಾರ್ ಯಾದವ್ ವೈಟ್‌ಬಾಲ್ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಆಟವನ್ನು ಪ್ರದರ್ಶಿಸಿದರೂ ಅವರಿಗಿನ್ನೂ ಟೆಸ್ಟ್ ಮಾದರಿಯಲ್ಲಿ ಆಡುವ ಅವಕಾಶ ದೊರೆತಿಲ್ಲ ಎಂಬುದು ಗಮನಾರ್ಹ ಅಂಶ.
ದೇಶೀಯ ಕ್ರಿಕೆಟ್‌ನಲ್ಲಿ ರೆಡ್ ಬಾಲ್ ಕ್ರಿಕೆಟ್‌ನಲ್ಲಿಯೂ ಅದ್ಭುತ ಪ್ರದರ್ಶನ ನೀಡಿ ಮಿಂಚಿರುವ ಸೂರ್ಯಕುಮಾರ್ ಯಾದವ್ ಭಾರತ ಟೆಸ್ಟ್ ತಂಡದಲ್ಲಿ ಸ್ಥಾನವನ್ನು ಗಿಟ್ಟಿಸಿಕೊಳ್ಳಬೆಕು ಎಂಬ ಕನಸು ಕಾಣುತ್ತಿದ್ದಾರೆ. ಈ ಸಂದರ್ಭದಲ್ಲಿ ಅವರು ಟೆಸ್ಟ್ ಮಾದರಿ ತನಗೆ ಎಷ್ಟು ಆಪ್ತ ಎಂಬುದನ್ನು ಕೂಡ ಹೇಳಿಕೊಂಡಿದ್ದು ದೇಶದ ಪರವಾಗಿ ಟೆಸ್ಟ್ ಮಾದರಿಯಲ್ಲಿ ಆಡುವುದು ನನ್ನ ದೊಡ್ಡ ಕನಸು ಎಂಬುದನ್ನು ಹಂಚಿಕೊಂಡಿದ್ದಾರೆ.

ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದರೂ ಆಡುವ ಬಳಗದಲ್ಲಿಲ್ಲ ಸ್ಥಾನ
ಇನ್ನು ಸೂರ್ಯಕುಮಾರ್ ಯಾದವ್ ಭಾರತ ತಂಡದ ಟೆಸ್ಟ್ ತಂಡದಲ್ಲಿ ಒಂದೆರಡು ಸಂದರ್ಭಗಳಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಈ ಸಂದರ್ಭದಲ್ಲಿ ಬದಲಿ ಆಟಗಾರನಾಗಿ ಫಿಲ್ಡಿಂಗ್ ಕೂಡ ನಡೆಸಿದ್ದಾರೆ. ಆದರೆ ಆಡುವ ಹನ್ನೊಂದರ ಬಳಗದಲ್ಲಿ ಅವರಿಗೆ ಇನ್ನು ಕೂಡ ಸ್ಥಾನ ಪಡೆಯಲು ಸಾಧ್ಯವಾಗಿಲ್ಲ. ಆದರೆ ಸೂರ್ಯಕುಮಾರ್ ಅತ್ಯಂತ ಶೀಘ್ರದಲ್ಲಿ ಭಾರತದ ಟೆಸ್ಟ್ ತಂಡದಲ್ಲಿ ಸ್ಥಾನವನ್ನು ಪಡೆಯಲಿದ್ದಾರೆ ಎಂದು ಮಾಜಿ ಕ್ರಿಕೆಟಿಗ ಹಾಗೂ ಮಾಜಿ ಕೋಚ್ ರವಿ ಶಾಸ್ತ್ರಿ ಈ ಹಿಂದೆ ಹೇಳಿಕೆ ನೀಡಿದ್ದರು.

ರವಿ ಶಾಸ್ತ್ರಿ ಆಡಿದ ಮಾತು ಮೆಲುಕು ಹಾಕಿದ ಸೂರ್ಯ
ಹಿಂದುಸ್ತಾನ್ ಟೈಮ್ಸ್‌ಗೆ ಪ್ರತಿಕ್ರಿಯೆ ನೀಡಿರುವ ಸೂರ್ಯಕುಮಾರ್ ಯಾದವ್ ಟೆಸ್ಟ್ ಮಾದರಿ ತನಗೆ ಎಷ್ಟು ಆಪ್ತ ಎಂಬುದನ್ನು ಹೇಳಿಕೊಂಡಿದ್ದಾರೆ. "ಪ್ರಥಮದರ್ಜೆ ಕ್ರಿಕೆಟ್‌ನಲ್ಲಿ ನಾನು ಈ ಮಾದರಿಯಲ್ಲಿ ಕೂಡ ಸಾಕಷ್ಟು ರನ್‌ಗಳನ್ನು ಗಳಿಸಿದ್ದೇನೆ. ನಾನು ಈ ಮಾದರಿಯಲ್ಲಿ ಬ್ಯಾಟಿಂಗ್ ನಡೆಸುವುದನ್ನು ಬಹಳಷ್ಟು ಆನಂದಿಸುತ್ತೇನೆ. ರವಿ ಶಾಸ್ತ್ರಿ ಅವರು ಹೇಳಿರುವ 'ಆತ ಮೂರು ಮಾದರಿಯ ಆಟಗಾರ' ಎಂಬ ಮಾತು ನನಗಿನ್ನೂ ಚೆನ್ನಾಗಿ ನೆನಪಿದೆ. ಅವರಂತವರಿಂದ ಈ ರೀತಿಯ ಮಾತುಗಳನ್ನು ಕೇಳಿಸಿಕೊಳ್ಳಲು ಬಹಳ ಖುಷಿಯಾಗುತ್ತದೆ" ಎಂದಿದ್ದಾರೆ ಸೂರ್ಯಕುಮಾರ್ ಯಾದವ್.

ಟೆಸ್ಟ್ ಮಾದರಿ ಹೃದಯಕ್ಕೆ ಹತ್ತಿರ ಎಂದ SKY
ಇನ್ನು ದೇಶಿಯ ಕ್ರಿಕೆಟ್‌ನಲ್ಲಿ ರೆಡ್ ಬಾಲ್ ಮಾದರಿಯಲ್ಲಿ ನೀಡಿರುವ ಪ್ರದರ್ಶನದಿಂದಲೇ ತನಗೆ ಆರಂಭದಲ್ಲಿ ಮನ್ನಣೆ ದೊರೆಯಿತು ಎಂಬ ಮಾತನ್ನು ಕೂಡ ಸೂರ್ಯಕುಮಾರ್ ಯಾದವ್ ಹೇಳಿದ್ದಾರೆ. "ರೆಡ್ ಬಾಲ್ ಕ್ರಿಕೆಟ್‌ನಲ್ಲಿ ನೀಡಿದ ಪ್ರದರ್ಶನದಿಂದಲೇ ನನಗೆ ಆರಂಭದಲ್ಲಿ ಅವಕಾಶಗಳು ದೊರೆಯಿತು. ಹಾಗಾಗಿ ರೆಡ್ ಬಾಲ್ ಕ್ರಿಕೆಟ್ ಯಾವಾಗಲೂ ನನ್ನ ಹೃದಯಕ್ಕೆ ಹತ್ತಿರವಾದ ಮಾದರಿ" ಎಂದಿದ್ದಾರೆ ಟೀಮ್ ಇಂಡಿಯಾದ ಪ್ರಮುಖ ಆಟಗಾರ ಸೂರ್ಯಕುಮಾರ್ ಯಾದವ್.

ಚುಟುಕು ಮಾದರಿಯಲ್ಲಿ ಸೂರ್ಯ ಅಮೋಘ ಪ್ರದರ್ಶನ
ಇನ್ನು 2022 ಕ್ಯಾಲೆಂಡರ್ ವರ್ಷದಲ್ಲಿ ಸೂರ್ಯಕುಮಾರ್ ಅಮೋಘ ಪ್ರದರ್ಶನ ನೀಡಿ ಮಿಂಚಿದ್ದಾರೆ. ಆಡಿರುವ 31 ಪಂದ್ಯಗಳಲ್ಲಿ ಸೂರ್ಯ 1164 ರನ್‌ಗಳನ್ನು ಬಾರಿಸಿದ್ದು 187.43ರ ಸ್ಟ್ರೈಕ್‌ರೇಟ್‌ಲ್ಲಿ ಬ್ಯಾಟ್ ಬೀಸಿದ್ದಾರೆ. ಇದರಲ್ಲಿ ಎರಡು ಶತಕ ಹಾಗೂ 9 ಅರ್ಧ ಶತಕ ಸೇರಿಕೊಂಡಿದೆ. ಈ ಮೂಲಕ ಅಂತಾರಾಷ್ಟ್ರೀಯ ಟಿ20 ಮಾದರಿಯ ಇತಿಹಾಸದಲ್ಲಿ ಕ್ಯಾಲೆಂಡರ್ ವರ್ಷವೊಂದರಲ್ಲಿ ಅತಿ ಹೆಚ್ಚು ರನ್‌ಗಳಿಸಿದ ಆಟಗಾರ ಪಟ್ಟಿಯಲ್ಲಿ ಸೂರ್ಯಕುಮಾರ್ ಯಾದವ್ 2ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications