3 ದಿನಗಳ ಹಿಂದೆ ತಿಲಕ್ ವರ್ಮಾ ಇಟ್ಟಿದ್ದ ಬೇಡಿಕೆಯ ರಹಸ್ಯ ಬಿಚ್ಚಿಟ್ಟ ಸೂರ್ಯ
ಸೆಂಚುರಿಯನ್‌ನಲ್ಲಿ ನಡೆದ ಟಿ20 ಪಂದ್ಯದಲ್ಲಿ ಭಾರತ ಅಮೋಘ ಪ್ರದರ್ಶನ ನೀಡಿದೆ. ಬುಧವಾರ ನಡೆದ ಮೂರನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ 11 ರನ್‌ಗಳಿಂದ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿ, ನಾಲ್ಕು ಪಂದ್ಯಗಳ ಟಿ20 ಸರಣಿಯಲ್ಲಿ 2-1ರಿಂದ ಮುನ್ನಡೆ ಸಾಧಿಸಿದೆ. ಟೀಮ್ ಇಂಡಿಯಾದ ಪರ ತಿಲಕ್ ವರ್ಮಾ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿ ತಂಡಕ್ಕೆ ಆಧಾರವಾದರು. ಪಂದ್ಯದ ಬಳಿಕ ಸೂರ್ಯಕುಮಾರ್ ಯಾದವ್ ತಿಲಕ್ ವರ್ಮಾ ತಿಲಕ್ ವರ್ಮಾ ಅವರ ಆಟವನ್ನು ಶ್ಲಾಘಿಸಿದ್ದು, ಅವರ ಬ್ಯಾಟಿಂಗ್ ರಹಸ್ಯವನ್ನು ಬಯಲು ಮಾಡಿದ್ದಾರೆ.
ಬುಧವಾರ ನಡೆದ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 219 ರನ್ ಸಿಡಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ 7 ವಿಕೆಟ್ ಕಳೆದುಕೊಂಡು 208 ರನ್ ಸಿಡಿಸಿ ಸೋಲು ಕಂಡಿತು. ಗೆಲುವಿನ ಬಳಿಕ ಟೀಮ್ ಇಂಡಿಯಾದ ಯುವ ಬ್ಯಾಟರ್ ಆಟವನ್ನು ಸ್ಕೈ ಗುಣಗಾನ ಮಾಡಿದ್ದಾರೆ.

ತಿಲಕ್ ಶತಕ
ತಿಲಕ್ ವರ್ಮಾ ಮೂರನೇ ಪಂದ್ಯದಲ್ಲಿ 56 ಎಸೆತಗಳನ್ನು ಎದುರಿಸಿ 191.07ರ ಸ್ಟ್ರೈಕರ್ ರೇಟ್‌ನಲ್ಲಿ 107 ರನ್ ಸಿಡಿಸಿದರು. ಈ ಅಮೋಘ ಇನಿಂಗ್ಸ್‌ನಲ್ಲಿ 8 ಬೌಂಡರಿ, 7 ಸಿಕ್ಸರ್ ಸೇರವೆ. ಇವರ ಅಮೋಘ ಪ್ರದರ್ಶನದ ಫಲವಾಗಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಸಹ ಪಡೆದರು. ಪಂದ್ಯದ ಬಳಿಕ ತಿಲಕ್ ವರ್ಮಾ ತಿಲಕ್ ವರ್ಮಾ ಆಟದ ಹಿಂದಿನ ಗುಟ್ಟನ್ನು ರಟ್ಟು ಮಾಡಿದ್ದಾರೆ.
ಶತಕದ ರಹಸ್ಯ ಬಯಲು
ಎರಡನೇ ಟಿ20 ಪಂದ್ಯದ ನಂತರ, ತಿಲಕ್ ನನ್ನ ಕೋಣೆಗೆ ಬಂದು, 'ನನಗೆ 3 ನೇ ಸ್ಥಾನದಲ್ಲಿ ಅವಕಾಶ ನೀಡಿ. ಈ ಸ್ಥಾನವನ್ನು ನೀಡಿದರೆ ಉತ್ತಮವಾಗಿ ಆಡಲು ಬಯಸುತ್ತೇನೆ ಎಂದು ಮನವಿಯನ್ನು ಮಾಡಿಕೊಂಡಿದ್ದರು. ಆಗ ನಾನು, ಹೋಗಿ ನಿನ್ನನ್ನು ನೀನು ಸಾಬೀತು ಪಡಿಸು ಎಂದು ತಿಳಿಸಿದ್ದೇ ಎಂದು ತಿಳಿಸಿದರು.

ಟೀಮ್ ಇಂಡಿಯಾದ ಭರವಸೆಯ ಆಟಗಾರ ತಿಲಕ್ ವರ್ಮಾ ಈಗಾಗಲೇ 19 ಟಿ20 ಪಂದ್ಯಗಳಲ್ಲಿ ಆಡಿದ್ದಾರೆ. ಇವರು ಆಗಸ್ಟ್ 3, 2023ರಂದು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ಎರಡನೇ ಪಂದ್ಯದಲ್ಲಿ ತಿಲಕ್ ವರ್ಮಾ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿ ಅರ್ಧಶತಕ ಬಾರಿಸಿದ್ದರು. ಮೂರನೇ ಪಂದ್ಯದಲ್ಲೂ ಅಜೇಯ 49 ರನ್ ಬಾರಿಸಿದ್ದರು.
ಕಳೆದ 9 ಇನಿಂಗ್ಸ್‌ಗಳಲ್ಲಿ ತಿಲಕ್ ವರ್ಮಾ ಸಹ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದರು. ಆದರೆ ಸೆಂಚುರಿಯನ್‌ನಲ್ಲಿ ಶತಕ ಬಾರಿಸಿ ತಿಲಕ್ ಆರ್ಭಟಿಸಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್‌ನಲ್ಲಿ ಮೊದಲ ಶತಕ ಸಿಡಿಸಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಟೀಮ್ ಇಂಡಿಯಾ ಇನ್ನು ಸರಣಿಯ ಸೋಲನ್ನು ಅನುಭವಿಸಲು ಸಾಧ್ಯವಿಲ್ಲ. ಕಾರಣ ಈ ಸರಣಿಯಲ್ಲಿ ಉಭಯ ತಂಡಗಳು ನಾಲ್ಕು ಪಂದ್ಯಗಳನ್ನು ಆಡಲಿವೆ. ಟೀಮ್ ಇಂಡಿಯಾ ಈ ಸರಣಿಯಲ್ಲಿ 2-1 ರಿಂದ ಮುನ್ನಡೆ ಸಾಧಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications