For Quick Alerts
ALLOW NOTIFICATIONS  
For Daily Alerts
 

ಗೌತಮ್ ಗಂಭೀರ್ ಆ ಒಂದು ನಿರ್ಧಾರ ಜಯಕ್ಕೆ ಕಾರಣವಾಯಿತು: ಸೂರ್ಯಕುಮಾರ್

ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಐದು ಪಂದ್ಯಗಳ ಟಿ20 ಸರಣಿಯ, ನಾಲ್ಕನೇ ಪಂದ್ಯ ಗೋಲ್ಡ್‌ ಕೋಸ್ಟ್‌ನಲ್ಲಿ ನಡೆಯಿತು. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಸಂಘಟಿತ ಆಟದ ಪ್ರದರ್ಶನ ನೀಡಿ ಜಯ ಸಾಧಿಸಿತು. ಈ ಮೂಲಕ ಸರಣಿಯಲ್ಲಿ ಭಾರತ ತಂಡ 2-1 ರಿಂದ ಮುನ್ನಡೆ ಸಾಧಿಸಿದೆ. ಬ್ರಿಸ್ಬೇನ್‌ನಲ್ಲಿ ನಡೆಯಲಿರುವ ಐದನೇ ಟಿ20 ಪಂದ್ಯದಲ್ಲಿ ಗೆಲುವು ದಾಖಲಿಸಿ ಆಸ್ಟ್ರೇಲಿಯಾ ಪ್ರವಾಸವನ್ನು ಸ್ಮರಣೀಯವಾಗಿಸುವ ಇರಾದೆಯನ್ನು ಹೊಂದಿದೆ. ಟೀಮ್ ಇಂಡಿಯಾದ ಗೆಲುವಿನ ಬಳಿಕ ಸೂರ್ಯಕುಮಾರ್‌ ಯಾದವ್ ದೊಡ್ಡ ಹೇಳಿಕೆ ನೀಡಿದ್ದಾರೆ.

ನಾಲ್ಕನೇ ಟಿ20 ಪಂದ್ಯದಲ್ಲಿ ಟಾಸ್‌ ಸೋತರೂ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 167 ರನ್‌ ಕಲೆ ಹಾಕಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಆಸ್ಟ್ರೇಲಿಯಾ 119 ರನ್‌ಗಳಿಗೆ ಆಲೌಟ್ ಆಯಿತು. ಟೀಮ್ ಇಂಡಿಯಾದ ನುರಿತ ಬೌಲರ್‌ಗಳ ಕರಾರುವಾಕ್ ದಾಳಿಯನ್ನು ನಿರ್ವಹಿಸಿ ಜಯದಲ್ಲಿ ಮಿಂಚಿದರು. ಆಲ್‌ರೌಂಡರ್ ಆಟದ ಪ್ರದರ್ಶನ ನೀಡಿದ ಅಕ್ಷರ್ ಪಟೇಲ್ ಅವರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ನೀಡಲಾಯಿತು.

Suryakumar Yadav Reveals Success Mantra After India s Record Win Against Australia

ಪಂದ್ಯದಲ್ಲಿ ಗೆಲುವು ದಾಖಲಿಸಿದ ಬಳಿಕ ನಾಯಕ ಸೂರ್ಯಕುಮಾರ್ ಯಾದವ್ ಗೆಲುವಿನ ತಂತ್ರವನ್ನು ಬಿಚ್ಚಿಟ್ಟರು. ಆಸ್ಟ್ರೇಲಿಯಾ ವಿರುದ್ಧ 48 ರನ್‌ ಜಯ ಸಾಧಿಸುವಲ್ಲಿ ಬ್ಯಾಟರ್‌ಗಳ ಪಾತ್ರವಹಿಸಿದರು. ಆರಂಭಿಕ ಆಟಗಾರರಾದ ಶುಭಮನ್‌ ಗಿಲ್, ಅಭಿಷೇಕ್‌ ಶರ್ಮಾ ಸಮಯೋಚಿತ ಬ್ಯಾಟಿಂಗ್ ನಡೆಸಿದರು. ಈ ಪಿಚ್‌ನಲ್ಲಿ 200 ಅಥವಾ ಅಧಿಕ ರನ್‌ ಬಾರಿಸುವಂತೆ ಇರಲಿಲ್ಲ. ಹೀಗಾಗಿ ಟಾಪ್‌ ಅರ್ಡರ್ ಬ್ಯಾಟರ್‌ಗಳು ಪರಿಸ್ಥಿತಿಗೆ ಅನುಗುಣವಾಗಿ ಬ್ಯಾಟ್ ಮಾಡಿದರು ಎಂದು ತಿಳಿಸಿದ್ದಾರೆ

ತಂಡದ ಕೋಚ್‌ ಗೌತಮ್ ಗಂಭೀರ್ ಹಾಗೂ ನಾನು ಇಬ್ಬರೂ ಬೌಲರ್‌ಗಳು ಆಕ್ರಮಣಕಾರಿಯಾಗಿ ಬೌಲ್‌ ಮಾಡಬೇಕು ಎಂದು ಬಯಸಿದ್ದೇವು. ಮೈದಾನದಲ್ಲಿ ಇಬ್ಬನಿ ಇರಲಿಲ್ಲ. ಈ ಪರಿಸ್ಥಿತಿಗೆ ನಮ್ಮ ಬೌಲರ್‌ಗಳು ಬೇಗನೆ ಹೊಂದಿಕೊಂಡರು. ಈ ಪಂದ್ಯದಲ್ಲಿ ಆಲ್‌ರೌಂಡರ್‌ಗಳು ಸ್ಥಿರ ಪ್ರದರ್ಶನ ನೀಡಿದರು. ವಾಷಿಂಗ್ಟನ್ ಸುಂದರ್ ಈ ಪಂದ್ಯದಲ್ಲಿ 3 ವಿಕೆಟ್‌ ಪಡೆದರೆ, ಶಿವಂ ದುಬೆ ಹಾಗೂ ಅಕ್ಚರ್ ಪಟೇಲ್ ತಲಾ 2 ವಿಕೆಟ್‌ ಪಡೆದರು ಮಿಂಚಿದರು.

ಶಿವಂ ದುಬೇ ಹೇಳಿದ್ದೇನು?

ಟೀಮ್ ಇಂಡಿಯಾದ ಗೆಲುವಿನಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದ ಶಿವಂ ದುಬೆ ಪಂದ್ಯದ ಬಳಿಕ ಯೋಜನೆಯನ್ನು ತಿಳಿಸಿದರು. ಮೈದಾನದ ಆಯಾಮಗಳ ಅನುಗುಣವಾಗಿ ನಾವು ಬೌಲಿಂಗ್ ಮಾಡಿದ್ದೇವೆ. ಈ ಮೈದಾನದಲ್ಲಿ ಬೌಂಡರಿಗಳು ದೊಡ್ಡದಾಗಿದ್ದವು. ಅದಕ್ಕೆ ಅನುಗುಣವಾಗಿ ತಂತ್ರವನ್ನು ರೂಪಿಸಿದ್ದೇವು. ದೊಡ್ಡ ಬೌಂಡರಿಗಳನ್ನು ಟಾರ್ಗೆಟ್‌ ಮಾಡಿ ಬೌಲ್ ಮಾಡಿದವು. ಬ್ಯಾಟರ್‌ಗಳು ದೊಡ್ಡ ಬೌಂಡರಿಗಳ ಕಡೆಗೆ ಶಾಟ್‌ಗಳನ್ನು ಆಡುವಂತೆ ಒತ್ತಾಯಿಸಿದ್ದೇವು ಎಂದು ತಿಳಿಸಿದ್ದಾರೆ.

ಆಸ್ಟ್ರೇಲಿಯಾ ಪ್ರವಾಸದಲ್ಲಿ ನಡೆದಿದ್ದ ಟಿ20 ಪಂದ್ಯದಲ್ಲಿ ಭಾರತ ದಾಖಲಿಸಿದ ಅತಿ ದೊಡ್ಡ ಗೆಲುವು ಇದಾಗಿದೆ. ಇದಕ್ಕೂ ಮೊದಲು ಭಾರತ 2016 ರಲ್ಲಿ ಅಡಿಲೇಡ್‌ನಲ್ಲಿ 37 ರನ್‌ ಗೆಲುವು ದಾಖಲಿಸಿತ್ತು. ಈ ದಾಖಲೆಯನ್ನು ಟೀಮ್ ಇಂಡಿಯಾ ಅಳಿಸಿ ಹಾಕಿದೆ.

Story first published: Thursday, November 6, 2025, 22:42 [IST]
Other articles published on Nov 6, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+