For Quick Alerts
ALLOW NOTIFICATIONS  
For Daily Alerts
 

Suryakumar Yadav: ಟಿ20 ಕ್ರಿಕೆಟ್‌ನಲ್ಲಿ ಅಪರೂಪದ ದಾಖಲೆಯ ಸನಿಹದಲ್ಲಿ ಸೂರ್ಯಕುಮಾರ್ ಯಾದವ್

ಭಾರತ ಸದ್ಯ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿದೆ. ಈ ವೇಳೆ ಟೀಮ್ ಇಂಡಿಯಾ ನಾಲ್ಕು ಪಂದ್ಯಗಳ ಟಿ20 ಸರಣಿ ಆಡಬೇಕಿದೆ. ಉಭಯ ತಂಡಗಳ ನಡುವಣ ಎರಡು ಪಂದ್ಯಗಳು ಮುಗಿದಿವೆ. ಉಭಯ ತಂಡಗಳು ತಲಾ ಒಂದೊಂದು ಪಂದ್ಯವನ್ನು ಗೆದ್ದು ಬೀಗಿದೆ. ಮೂರನೇ ಟಿ20 ಪಂದ್ಯ ಸೆಂಚುರಿಯನ್‌ನಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಗೆಲುವು ಸಾಧಿಸಿ ಸರಣಿಯಲ್ಲಿ ಮುನ್ನಡೆ ಸಾಧಿಸುವ ಕನಸು ಭಾರತ ತಂಡದ್ದಾಗಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಇತಿಹಾಸ ನಿರ್ಮಿಸುವ ಹೊಸ್ತಿಲಲ್ಲಿ ನಿಂತಿದ್ದಾರೆ.

ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಸ್ಥಿರ ಪ್ರದರ್ಶನ ನೀಡುತ್ತಿದ್ದು, ಎರಡನೇ ಪಂದ್ಯದಲ್ಲಿ ದೊಡ್ಡ ದಾಖಲೆಯ ನಿರ್ಮಿಸಬಹುದಾಗಿದೆ. ಈ ಮೂಲಕ ವೆಸ್ಟ್ ಇಂಡೀಸ್‌ನ ಬ್ಯಾಟ್ಸ್‌ಮನ್‌ ನಿಕೋಲಸ್ ಪೂರನ್ ಅವರ ದಾಖಲೆಯನ್ನು ಹಿಂದಿಕ್ಕಬಹುದಾಗಿದೆ.

Suryakumar Yadav Poised to Break Nicholas Pooran s Record as India Prepares for Third T20 Against South Africa

ರೋಹಿತ್ ಸಿಕ್ಸರ್‌ ಕಿಂಗ್‌

ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಸದ್ಯ ರೋಹಿತ್ ಶರ್ಮಾ ಅವರಿಗೆ ಮೊದಲ ಸ್ಥಾನ. ಇವರು ಆಡಿದ 159 ಪಂದ್ಯಗಳಲ್ಲಿ 205 ಸಿಕ್ಸರ್‌ ಸಿಡಿಸಿ ಅಗ್ರ ಸ್ಥಾನದಲ್ಲಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್‌ನಲ್ಲಿ 200ಕ್ಕೂ ಹೆಚ್ಚು ಸಿಕ್ಸರ್‌ ಬಾರಿಸಿದ ಮೊದಲ ಬ್ಯಾಟರ್‌ ಎಂಬ ಖ್ಯಾತಿ ಸಹ ರೋಹಿತ್ ಪಾಲಾಗಿದೆ. ಇನ್ನು ಟೀಮ್ ಇಂಡಿಯಾದ ಹಾಲಿ ನಾಯಕ ಸೂರ್ಯಕುಮಾರ್‌ ಯಾದವ್ ಸಹ ಬಿಗ್ ಹಿಟ್‌ಗಳನ್ನು ಸುಲಭವಾಗಿ ಬಾರಿಸಬಲ್ಲ ಪ್ಲೇಯರ್. ಇವರು 76 ಟಿ20 ಪಂದ್ಯಗಳಲ್ಲಿ ಅವರು ಇದುವರೆಗೆ 145 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸಿಕ್ಸರ್‌ ಗಳ ಸಂಖ್ಯೆಯನ್ನು 150ಕ್ಕೆ ಏರಿಸಿಕೊಳ್ಳಲು ಸ್ಕೈಗೆ ಇನ್ನು ಐದು ಸಿಕ್ಸರ್ ಅವಶ್ಯಕತೆ ಇದೆ.

ದಾಖಲೆಯ ಸನಿಹದಲ್ಲಿ ಸ್ಕೈ

ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಇನ್ನು ಎರಡು ಟಿ20 ಪಂದ್ಯಗಳು ನಡೆಯಬೇಕಿದೆ. ಈ ವೇಳೆ ಸೂರ್ಯ ಈ ದಾಖಲೆಯನ್ನು ಮುರಿಯಬಲ್ಲರು. ಅಲ್ಲದೆ ವೆಸ್ಟ್‌ ಇಂಡೀಸ್‌ ತಂಡದ ಸ್ಟಾರ್ ಆಟಗಾರ ನಿಕೋಲಸ್‌ ಪೂರನ್‌ ಅವರ ದಾಖಲೆಯನ್ನು ಅಳಿಸಿ ಹಾಕಬಲ್ಲರು. ನಿಕೋಲಸ್‌ ಇದುವರೆಗೆ 100 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 147 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಇವರ ದಾಖಲೆಯನ್ನು ಅಳಿಸಿ ಹಾಕುವ ಸನಿಹದಲ್ಲಿ ಸೂರ್ಯಕುಮಾರ್ ಇದ್ದಾರೆ. ಈ ದಾಖಲೆಯನ್ನು ಅಳಿಸಿ ಹಾಕಲು ಟೀಮ್ ಇಂಡಿಯಾ ನಾಯಕನಿಗೆ ಮೂರು ಸಿಕ್ಸರ್ ಅವಶ್ಯಕತೆ ಇದೆ.

Suryakumar Yadav Poised to Break Nicholas Pooran s Record as India Prepares for Third T20 Against South Africa

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ ಬಾರಿಸಿದ ಎರಡನೇ ಆಟಗಾರ ಎಂಬ ಖ್ಯಾತಿ ನ್ಯೂಜಿಲೆಂಡ್ ತಂಡ ಮಾರ್ಟಿನ್‌ ಗಪ್ಟಿಲ್‌ ಅವರಿಗೆ ಸಲ್ಲುತ್ತದೆ. ಇವರು ಆಡಿದ 122 ಪಂದ್ಯಗಳಲ್ಲಿ 173 ಸಿಕ್ಸರ್ ಸಿಡಿಸಿದ್ದಾರೆ.

ಟೀಮ್ ಇಂಡಿಯಾದ ನಾಯಕ ಸೂರ್ಯಕುಮಾರ್ ಯಾದವ್ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಕೊಂಚ ಮಂಕಾಗಿದ್ದಾರೆ. ಮೊದಲ ಪಂದ್ಯದಲ್ಲಿ 21 ರನ್‌ಗಳಿಸಿದ್ದ ಸ್ಕೈ, ಎರಡನೇ ಪಂದ್ಯದಲ್ಲಿ 4 ರನ್‌ಗಳಿಗೆ ಆಟ ಮುಗಿಸಿದ್ದರು. ಹೀಗಾಗಿ ಇವರ ಮೇಲೆ ಒತ್ತಡವಿದ್ದು ಬಿಗ್ ಇನಿಂಗ್ಸ್‌ ಕಟ್ಟುವ ಅನಿವಾರ್ಯತೆ ಇದೆ.

Story first published: Tuesday, November 12, 2024, 19:15 [IST]
Other articles published on Nov 12, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+