ಟೀಮ್ ಇಂಡಿಯಾದ ಸ್ಟಾರ್ ಆಟಗಾರ ಸೂರ್ಯಕುಮಾರ್ ಯಾದವ್ ಅವರ ಮುಡಿಗೆ ಮತ್ತೊಂದು ಗರಿ ಸಂದಿದೆ. ತಮ್ಮ ಭರ್ಜರಿ ಪ್ರದರ್ಶನದಿಂದ ಟಿ20 ಶ್ರೇಯಾಂಕದಲ್ಲಿ ತಮ್ಮ ಛಾಪು ಮೂಡಿಸಿರುವ ಆಟಗಾರ ಸೂರ್ಯಗೆ ಐಸಿಸಿ ಪ್ರಶಸ್ತಿ ಸಂದಿದೆ.
ಸೂರ್ಯಕುಮಾರ್ ಯಾದವ್ ಅವರಿಗೆ ಐಸಿಸಿ ವರ್ಷದ ಟಿ20 ಕ್ರಿಕೆಟಿಗ ಪ್ರಶಸ್ತಿ ನೀಡಿದೆ. ಸೂರ್ಯಕುಮಾರ್ ಯಾದವ್ ಅವರಿಗೆ ಸತತ ಎರಡನೇ ಬಾರಿ ಈ ಪ್ರಶಸ್ತಿ ಲಭಿಸಿದೆ. ಸೂರ್ಯಕುಮಾರ್ ಯಾದವ್‌ಗೆ 2023 ಉತ್ತಮ ವರ್ಷವಾಗಿತ್ತು ಮತ್ತು ಅವರು ತಮ್ಮ ಬ್ಯಾಟ್‌ನಿಂದ ಅಬ್ಬರಿಸಿದ್ದರು.

ಸೂರ್ಯಕುಮಾರ್ ಯಾದವ್ 2023 ರಲ್ಲಿ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ 50 ರ ಸರಾಸರಿಯೊಂದಿಗೆ ಮತ್ತು 150 ಕ್ಕಿಂತ ಹೆಚ್ಚು ಸ್ಟ್ರೈಕ್ ರೇಟ್‌ನೊಂದಿಗೆ ರನ್‌ಗಳನ್ನು ಗಳಿಸಿದರು. ಸೂರ್ಯ 2021 ರಲ್ಲಿ ಇಂಗ್ಲೆಂಡ್ ವಿರುದ್ಧ ಸಿಕ್ಸರ್ ಬಾರಿಸುವ ಮೂಲಕ ತಮ್ಮ ಟಿ20 ಅಂತರಾಷ್ಟ್ರೀಯ ಚೊಚ್ಚಲ ಪಂದ್ಯವನ್ನು ಆಡಿದರು. ಇದಾದ ನಂತರ ಸೂರ್ಯ ಹಿಂತಿರುಗಿ ನೋಡಲೇ ಇಲ್ಲ. ಸಿಕ್ಕ ಅವಕಾಶವನ್ನು ಬಳಸಿಕೊಂಡು ರನ್ ಮಹಲ್ ಕಟ್ಟುತ್ತಲೇ ಸಾಗಿದರು. ಸೂರ್ಯ ಹಲವು ಸ್ಟಾರ್ ಆಟಗಾರರನ್ನು ಹಿಂದಿಕ್ಕಿ ಈ ಪ್ರಶಸ್ತಿ ಪಡೆದಿದ್ದಾರೆ.
ಈ ಪ್ರಶಸ್ತಿಗೆ ಒಟ್ಟು 4 ಆಟಗಾರರನ್ನು ಐಸಿಸಿ ನಾಮನಿರ್ದೇಶನ ಮಾಡಿತ್ತು. ಇದರಲ್ಲಿ ಜಿಂಬಾಬ್ವೆಯ ಸಿಕಂದರ್ ರಜಾ, ಉಗಾಂಡಾದ ಅಲ್ಪೇಶ್ ರಾಮ್ಜಾನಿ ಮತ್ತು ನ್ಯೂಜಿಲೆಂಡ್‌ನ ಮಾರ್ಕ್ ಚಾಪ್‌ಮನ್ ಸೇರಿದ್ದಾರೆ, ಆದರೆ ಅವರೆಲ್ಲರನ್ನು ಹಿಂದೆ ಬಿಟ್ಟು ಸೂರ್ಯಕುಮಾರ್ ಯಾದವ್ ಐಸಿಸಿ ಟಿ20 ವರ್ಷದ ಆಟಗಾರ ಪ್ರಶಸ್ತಿಯನ್ನು ಗೆದ್ದಿದ್ದಾರೆ.

2023 ರಲ್ಲಿ ಸೂರ್ಯಕುಮಾರ್ ಯಾದವ್ 17 ಇನ್ನಿಂಗ್ಸ್‌ಗಳಲ್ಲಿ 733 ರನ್ ಗಳಿಸಿದ್ದರು. ಈ ಅವಧಿಯಲ್ಲಿ, ಅವರ ಸರಾಸರಿ 48.86 ಮತ್ತು ಸ್ಟ್ರೈಕ್ ರೇಟ್ 155.95 ಆಗಿತ್ತು. ಸೂರ್ಯ 2022 ರಲ್ಲೂ ಈ ಐಸಿಸಿ ಪ್ರಶಸ್ತಿಯನ್ನು ಗೆದ್ದಿದ್ದರು. ಐಸಿಸಿ 2021 ರಿಂದ ಈ ಪ್ರಶಸ್ತಿಯನ್ನು ನೀಡಲು ಪ್ರಾರಂಭಿಸಿತು. ಮೊದಲ ಪ್ರಶಸ್ತಿಯನ್ನು ಪಾಕಿಸ್ತಾನದ ಮೊಹಮ್ಮದ್ ರಿಜ್ವಾನ್ ಪಡೆದಿದ್ದರು. ಇದಾದ ನಂತರ, ಅವರು ಸೂರ್ಯಕುಮಾರ್ ಯಾದವ್ ಅವರಿಂದ ಎರಡು ಬಾರಿ ಬ್ಯಾಕ್ ಟು ಬ್ಯಾಕ್ ಈ ಪ್ರಶಸ್ತಿಯನ್ನು ಗೆದ್ದಿದ್ದಾರೆ.
ಸೂರ್ಯಕುಮಾರ್ ಯಾದವ್ ಟಿ20ಯಲ್ಲಿ ಟೀಂ ಇಂಡಿಯಾ ನಾಯಕತ್ವ ಪಡೆದರು. ಸೂರ್ಯಕುಮಾರ್ ಯಾದವ್‌ಗೆ ಕಳೆದ ವರ್ಷವೂ ಏಕದಿನದಲ್ಲಿ ಸಾಕಷ್ಟು ಅವಕಾಶಗಳು ಹರಿದು ಬಂದವು. ಆದರೆ ಏಕದಿನದಲ್ಲಿ ಹೆಚ್ಚಿನ ರನ್ ಗಳಿಸಲು ಸಾಧ್ಯವಾಗಲಿಲ್ಲ. ಆದರೆ ಟಿ20ಯಲ್ಲಿ ಅವರ ಸ್ಥಾನವನ್ನು ಅಲುಗಾಡಿಸಲು ಯಾರಿಗೂ ಸಾಧ್ಯವಾಗಲಿಲ್ಲ.
ಪಾಕಿಸ್ತಾನದ ಮೊಹಮ್ಮದ್ ರಿಜ್ವಾನ್ ಅವರನ್ನು ಹಿಂದಿಕ್ಕುವ ಮೂಲಕ ಅವರು ಟಿ20 ರ್ಯಾಂಕಿಂಗ್‌ನಲ್ಲಿ ನಂಬರ್ ಒನ್ ಬ್ಯಾಟ್ಸ್‌ಮನ್ ಆದರು. ಮತ್ತು ನಂತರ ಅವರು ಅಲ್ಲಿಂದ ಆ ಸ್ಥಾನದಲ್ಲಿ ಭದ್ರ ಪಡಿಸಿಕೊಂಡಿದ್ದಾರೆ. 2023 ರಲ್ಲಿ, ಅವರು ಆಸ್ಟ್ರೇಲಿಯಾ ಮತ್ತು ನಂತರ ದಕ್ಷಿಣ ಆಫ್ರಿಕಾ ವಿರುದ್ಧ ನಾಯಕತ್ವದ ಅವಕಾಶವನ್ನು ಪಡೆದರು, ಅಲ್ಲಿ ಅವರು ಪ್ರಭಾವ ಬೀರಿದರು.