For Quick Alerts
ALLOW NOTIFICATIONS  
For Daily Alerts
 

IPL 2025 Orange Cap: ರೋಚಕತೆ ಹೆಚ್ಚಿಸಿದೆ ಆರೆಂಜ್‌ ಕ್ಯಾಪ್ ರೇಸ್‌

ಇಂಡಿಯನ್ ಪ್ರೀಮಿಯರ್ ಲೀಗ್‌ ರೋಚಕತೆ ಹುಟ್ಟಿಸಿದೆ. ಈ ವೇಳೆ ಸ್ಟಾರ್ ಬ್ಯಾಟರ್‌ಗಳು ಭರ್ಜರಿ ಪ್ರದರ್ಶನ ನೀಡಿ ಅಬ್ಬರಿಸುತ್ತಿದ್ದಾರೆ. 18ನೇ ಆವೃತ್ತಿಯ ಐಪಿಎಲ್‌ನ 56 ಪಂದ್ಯಗಳು ಪೂರ್ಣಗೊಂಡಿದ್ದು ಆರೆಂಜ್ ಕ್ಯಾಪ್‌ ರೇಸ್‌ ರೋಚಕತೆ ಹುಟ್ಟಿಸಿದೆ. ಸದ್ಯ ಆರೆಂಜ್‌ ಕ್ಯಾಪ್‌ ರೇಸ್‌ನಲ್ಲಿರುವ ಆಟಗಾರರು ಚಿಕ್ಕ ಚಿಕ್ಕ ಅಂತರದಿಂದ ಹಿಂದೆ ಮುಂದಿದ್ದಾರೆ. ಸದ್ಯ ಆರೆಂಜ್‌ ಕ್ಯಾಪ್‌ ಸೂರ್ಯಕುಮಾರ್‌ ಯಾದವ್ ಅವರ ಬಳಿ ಇದೆ.

ಮಂಗಳವಾರ ನಡೆದ ಪಂದ್ಯದಲ್ಲಿ ಗುಜರಾತ್‌ ಟೈಟನ್ಸ್‌ ವಿರುದ್ಧ ಸೂರ್ಯಕುಮಾರ್‌ ಯಾದವ್ 24 ಎಸೆತಗಳಲ್ಲಿ 5 ಬೌಂಡರಿ ಸೇರಿದಂತೆ 35 ರನ್‌ ಬಾರಿಸುತ್ತಿದ್ದಂತೆ ಇವರ ಮುಡಿಗೆ ಆರೆಂಜ್‌ ಕ್ಯಾಪ್‌ ಸಂದಿದೆ. ಸದ್ಯ ಸೂರ್ಯಕುಮಾರ್ ಯಾದವ್ ಪ್ರಸಕ್ತ ಐಪಿಎಲ್‌ನಲ್ಲಿ ಅಮೋಘ ಫಾರ್ಮ್‌ನಲ್ಲಿದ್ದಾರೆ. ಇವರು ಆಡಿದ 12 ಪಂದ್ಯಗಳಲ್ಲಿ 63ರ ಸರಾಸರಿಯಲ್ಲಿ 510 ರನ್‌ ಕಲೆ ಹಾಕಿದ್ದಾರೆ. ಇದರಲ್ಲಿ ಮೂರು ಅರ್ಧಶತಕಗಳು ಸೇರಿವೆ.

Suryakumar Yadav Takes Orange Cap Lead as IPL 2025 Run-Scorers Battle Intensifies

2 ರನ್‌ನಿಂದ ಆರೆಂಜ್‌ ಕ್ಯಾಪ್‌ ಮಿಸ್‌

18ನೇ ಆವೃತ್ತಿಯ ಐಪಿಎಲ್‌ನಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿರುವ ಸಾಯಿ ಸುದರ್ಶನ್‌, ಮುಂಬೈ ಇಂಡಿಯನ್ಸ್‌ ವಿರುದ್ಧದ ಪಂದ್ಯದಲ್ಲಿ ಕೇವಲ 5 ರನ್‌ ಬಾರಿಸಿ ಔಟ್ ಆದರು. ಈ ಮೂಲಕ ಇವರು ಆರೆಂಜ್‌ ಕ್ಯಾಪ್‌ನ್ನು ಜಸ್ಟ್‌ ಒಂದು ರನ್‌ನಿಂದ ಮಿಸ್‌ ಮಾಡಿಕೊಂಡಿದ್ದಾರೆ. ಸಾಯಿ ಸುದರ್ಶನ್‌ ಆಡಿದ 11 ಪಂದ್ಯಗಳಲ್ಲಿ 46.27ರ ಸರಾಸರಿಯಲ್ಲಿ 5 ಅರ್ಧಶತಕ ಸೇರಿದಂತೆ 509 ರನ್‌ ಸಿಡಿಸದ್ದಾರೆ.

3 ರನ್‌ನಿಂದ ಕೈ ತಪ್ಪಿದ ಅದೃಷ್ಟ

ಗುಜರಾತ್ ಟೈಟನ್ಸ್‌ ತಂಡದ ಸ್ಟಾರ್‌ ಆಟಗಾರ ಹಾಗೂ ನಾಯಕ ಶುಭಮನ್‌ ಗಿಲ್‌ ಸಹ ಆರೆಂಜ್ ಕ್ಯಾಪ್‌ನ್ನು ಜಸ್ಟ್‌ 3 ರನ್‌ಗಳಿಂದ ಶುಭಮನ್‌ ಗಿಲ್‌ ಹಿಂದಿದ್ದಾರೆ. ಇವರು ಮುಂಬೈ ಇಂಡಿಯನ್ಸ್‌ ವಿರುದ್ಧದ ಪಂದ್ಯದಲ್ಲಿ 46 ಎಸೆತಗಳಲ್ಲಿ 3 ಬೌಂಡರಿ, 1 ಸಿಕ್ಸರ್‌ ಸಹಾಯದಿಂದ 43 ರನ್‌ ಸಿಡಿಸಿ ಅಬ್ಬರಿಸಿದ್ದಾರೆ. ಇನ್ನು ಇವರು ಈ ಐಪಿಎಲ್‌ನಲ್ಲಿ ಇವರು 11 ಪಂದ್ಯಗಳಲ್ಲಿ 50ರ ಸರಾಸರಿಯಲ್ಲಿ 508 ರನ್‌ ಕಲೆ ಹಾಕಿದ್ದಾರೆ.

ವಿರಾಟ್‌ ಕೊಹ್ಲಿ ನಾಲ್ಕನೇ ಸ್ಥಾನ

ಆರ್‌ಸಿಬಿ ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಸಹ ಆರೆಂಜ್ ಕ್ಯಾಪ್‌ ರೇಸ್‌ನಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಇವರು 11 ಪಂದ್ಯಗಳಲ್ಲಿ 7 ಅರ್ಧಶತಕ ಸೇರಿದಂತೆ 505 ರನ್‌ ಕಲೆ ಹಾಕಿದ್ದಾರೆ.

ಐದನೇ ಸ್ಥಾನದಲ್ಲಿ ಜೋಸ್‌ ಬಟ್ಲರ್‌

ಗುಜರಾತ್ ಟೈಟಾನ್ಸ್ ತಂಡದ ಸ್ಟಾರ್ ಮಧ್ಯಮ ಕ್ರಮಾಂಕದ ಬ್ಯಾಟರ್ ಜೋಸ್ ಬಟ್ಲರ್‌ ಸಹ ಆರೆಂಜ್ ಕ್ಯಾಪ್‌ ರೇಸ್‌ನಲ್ಲಿದ್ದಾರೆ. ಇವರು ಮುಂಬೈ ಇಂಡಿಯನ್ಸ್‌ ವಿರುದ್ಧದ ಪಂದ್ಯದಲ್ಲಿ 27 ಎಸೆತಗಳಲ್ಲಿ 30 ರನ್‌ ಸಿಡಿಸಿದ್ದಾರೆ. ಈ ಮೂಲಕ ಇವರು ಆರೆಂಜ್‌ ಕ್ಯಾಪ್‌ ರೇಸ್‌ನಲ್ಲಿ 5ನೇ ಸ್ಥಾನದಲ್ಲಿದ್ದಾರೆ. ಇವರು ಆಡಿದ 11 ಪಂದ್ಯಗಳಲ್ಲಿ 500 ರನ್‌ ಕಲೆ ಹಾಕಿದ್ದಾರೆ.

Story first published: Wednesday, May 7, 2025, 10:17 [IST]
Other articles published on May 7, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+