ಮುಂಬೈ ಇಂಡಿಯನ್ಸ್ ತಂಡವು ಮಾರ್ಚ್ 23 ರಂದು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಐಪಿಎಲ್ 2025 ರಲ್ಲಿ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ. ಕಳೆದ ಸೀಸನ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಕೊನೆಯ ಗುಂಪು ಪಂದ್ಯದಲ್ಲಿ ನಿಧನಗತಿಯಲ್ಲಿ ಓವರ್ ಮಾಡಿದ್ದಕ್ಕಾಗಿ ಹಾರ್ದಿಕ್ ಪಾಂಡ್ಯ ಒಂದು ಪಂದ್ಯಕ್ಕೆ ನಿಷೇಧಕ್ಕೊಳಗಾಗಿದ್ದಾರೆ. ಹೀಗಾಗಿ ಅವರು ಸಿಎಸ್‌ಕೆ ವಿರುದ್ಧದ ಪಂದ್ಯದಲ್ಲಿ ಆಡುತ್ತಿಲ್ಲ. ಇದರಿಂದಾಗಿ ಅವರು ಐಪಿಎಲ್ 2025ರ ಮೊದಲ ಪಂದ್ಯದಿಂದ ಹೊರಗುಳಿಯಲಿದ್ದಾರೆ. ಅಂದಿನಿಂದ, ಹಾರ್ದಿಕ್ ಅನುಪಸ್ಥಿತಿಯಲ್ಲಿ ಸಿಎಸ್‌ಕೆ ವಿರುದ್ಧ ಮುಂಬೈ ತಂಡವನ್ನು ಯಾರು ಮುನ್ನಡೆಸುತ್ತಾರೆ ಎಂಬ ಪ್ರಶ್ನೆ ಎಲ್ಲಾ ಅಭಿಮಾನಿಗಳ ಮನಸ್ಸಿನಲ್ಲಿದೆ.
ಐಪಿಎಲ್ 2025ರಲ್ಲಿ ಸಿಎಸ್‌ಕೆ ವಿರುದ್ಧ ಮುಂಬೈ ಇಂಡಿಯನ್ಸ್ ತಂಡವನ್ನು ಯಾರು ಮುನ್ನಡೆಸುತ್ತಾರೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಇಲ್ಲಿವರೆಗೆ ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್ ಮತ್ತು ಜಸ್ಪ್ರೀತ್ ಬುಮ್ರಾ ಅವರಲ್ಲಿ ಒಬ್ಬರು ತಂಡವನ್ನು ಮುನ್ನಡೆಸುತ್ತಾರೆ ಎಂಬ ಚರ್ಚೆಗಳು ನಡೆದಿದ್ದವು. ಈಗ ಹಾರ್ದಿಕ್ ಪಾಂಡ್ಯ ಅವರೇ ಈ ಹೆಸರನ್ನು ಬಹಿರಂಗಪಡಿಸಿರುವುದರಿಂದ ಪ್ರಶ್ನೆಗೆ ಉತ್ತರ ಸಿಕ್ಕಿದೆ.

ಐಪಿಎಲ್ 2025ರ ಟೂರ್ನಿ ಪ್ರಾರಂಭಕ್ಕೂ ಮುನ್ನ ನಡೆದ ಮುಂಬೈ ಇಂಡಿಯನ್ಸ್ ಪೂರ್ವ-ಋತುವಿನ ಪತ್ರಿಕಾಗೋಷ್ಠಿಯಲ್ಲಿ ಹಾರ್ದಿಕ್ ಪಾಂಡ್ಯ ಮತ್ತು ಮುಖ್ಯ ಕೋಚ್ ಮಹೇಲಾ ಜಯವರ್ಧನೆ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದರು. ಈ ವೇಳೆ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ತಂಡದ ಆರಂಭಿಕ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ ಎಂದು ಹಾರ್ದಿಕ್ ಹೇಳಿದ್ದಾರೆ.
ಸೂರ್ಯಕುಮಾರ್ ಯಾದವ್ ಕೂಡ ಭಾರತ ತಂಡದ ನಾಯಕರಾಗಿದ್ದಾರೆ. ಅವರು ಟಾಟಾ ಐಪಿಎಲ್ 2025 ರ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕರಾಗಿರುತ್ತಾರೆ. ಐಪಿಎಲ್ 2024 ರಿಂದ ಹಾರ್ದಿಕ್ ಮೇಲಿನ ಒಂದು ಪಂದ್ಯದ ನಿಷೇಧದ ಬಗ್ಗೆ ಅಧಿಕೃತವಾಗಿ ತಿಳಿಸಲಾಗಿದೆ ಎಂದು ಮುಂಬೈ ತಂಡದ ಹೆಡ್‌ಕೋಚ್ ಮಹೇಲ ಜಯವರ್ಧನೆ ತಿಳಿಸಿದ್ದಾರೆ.
ಹಾರ್ದಿಕ್ ಪಾಂಡ್ಯ ತನ್ನನ್ನು ತಾನು ಅದೃಷ್ಟಶಾಲಿ ಎಂದು ಕರೆದುಕೊಂಡಿದ್ದಾರೆ. ನನ್ನೊಂದಿಗೆ ಮೂವರು ನಾಯಕರು ಆಡುತ್ತಿರುವುದು ನನ್ನ ಅದೃಷ್ಟ. ರೋಹಿತ್, ಸೂರ್ಯ ಮತ್ತು ಬುಮ್ರಾ ಅವರು ಯಾವಾಗಲೂ ನನ್ನ ಭುಜದ ಮೇಲೆ ಕೈ ಇಟ್ಟುಕೊಳ್ಳುತ್ತಾರೆ ಮತ್ತು ನನಗೆ ಯಾವುದೇ ಸಹಾಯ ಬೇಕಾದಾಗ, ಅವರು ಯಾವಾಗಲೂ ನನಗಾಗಿ ಇರುತ್ತಾರೆ ಎಂದು ಪಾಂಡ್ಯ ಹೇಳಿದ್ದಾರೆ.
ಈ ವರ್ಷ ಹೊಸ ವರ್ಷ. ಅನೇಕ ವಿಷಯಗಳು ಬದಲಾಗಿವೆ, ಬಹಳಷ್ಟು ಪ್ರೀತಿ ಮತ್ತು ಸಂತೋಷವನ್ನು ಸೇರಿಸಲಾಗಿದೆ. ಯಾವಾಗಲೂ ಉತ್ಸಾಹ, ಹೊಸ ಸವಾಲುಗಳು ಇರುತ್ತವೆ. ಅದು ನನಗೆ ತುಂಬಾ ಇಷ್ಟ. ತಂಡಕ್ಕೆ ಸಹಾಯ ಮಾಡುವುದು ಮತ್ತು ಅದಕ್ಕೆ ಬೆಲೆಯನ್ನು ಸೇರಿಸುವುದು ನನಗೆ ಅತ್ಯಂತ ಮುಖ್ಯವಾಗಿದೆ ಎಂದು ಪಾಂಡ್ಯ ತಮ್ಮ ಜವಾಬ್ದಾರಿ ಬಗ್ಗೆ ಮಾತನಾಡಿದ್ದಾರೆ.
ಐಪಿಎಲ್ 2024ರಲ್ಲಿ ಮುಂಬೈ ತನ್ನ ಕೊನೆಯ ಗುಂಪು ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಎದುರಿಸಿತು. ಈ ಪಂದ್ಯದಲ್ಲಿ ಎಲ್‌ಎಸ್‌ಜಿ ಎದುರು ಮುಂಬೈ18 ರನ್‌ಗಳಿಂದ ಸೋತಿತು. ಈ ಪಂದ್ಯದಲ್ಲಿ ಹಾರ್ದಿಕ್ ತಂಡ ನಿಧಾನಗತಿಯ ಓವರ್ ರೇಟ್ ಉಲ್ಲಂಘನೆ ಮಾಡಿರುವುದು ಕಂಡು ಬಂದಿತ್ತು. ಐಪಿಎಲ್ 2024ರಲ್ಲಿ ಹಾರ್ದಿಕ್ ಪಾಂಡ್ಯ ಈ ತಪ್ಪನ್ನು ಮೂರ ಬಾರಿ ಮಾಡಿದ್ದರು. ನಿಯಮಗಳ ಪ್ರಕಾರ, ಒಬ್ಬ ನಾಯಕ ಒಂದು ಸೀಸನ್‌ನಲ್ಲಿ ಮೂರು ಬಾರಿ ನಿಧಾನಗತಿಯ ಓವರ್ ರೇಟ್ ಮಾಡಿರುವುದು ಕಂಡುಬಂದರೆ, ಅವರಿಗೆ ಒಂದು ಪಂದ್ಯದ ನಿಷೇಧ ಹೇರಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಮುಂಬೈ ಪ್ಲೇಆಫ್‌ಗೆ ಅರ್ಹತೆ ಪಡೆಯಲು ಸಾಧ್ಯವಾಗದ ಕಾರಣ, ಹಾರ್ದಿಕ್ ಪಾಂಡ್ಯ ಐಪಿಎಲ್ 2025 ರ ತಮ್ಮ ಮೊದಲ ಪಂದ್ಯದಿಂದ ಹೊರಗುಳಿದಿದ್ದಾರೆ.