For Quick Alerts
ALLOW NOTIFICATIONS  
For Daily Alerts
 

Suryakumar Yadav: ಇಂಗ್ಲೆಂಡ್ ವಿರುದ್ಧ ಹೇಗಿದೆ ಸೂರ್ಯ ದಾಖಲೆ?

ಇನ್ನೇನು ಕೆಲವೇ ದಿನಗಳಲ್ಲಿ ಭಾರತ ಹಾಗೂ ಇಂಗ್ಲೆಂಡ್ ಟಿ20 ಸರಣಿಗಳು ನಡೆಯಲಿವೆ. ಈ ಸರಣಿಯ ಮೇಲೆ ಟೀಮ್ ಇಂಡಿಯಾದ ಅಭಿಮಾನಿಗಳ ಚಿತ್ತ ನೆಟ್ಟಿದೆ. ತವರಿನಲ್ಲಿ ನಡೆಯುತ್ತಿರುವ ಚುಟುಕು ಸರಣಿಯಲ್ಲಿ ಸೂರ್ಯಕುಮಾರ್ ಯಾದವ್ ಮತ್ತೊಮ್ಮೆ ತಂಡವನ್ನು ಮುನ್ನಡೆಸುತ್ತಿದ್ದಾರೆ. ಟೀಮ್ ಇಂಡಿಯಾ ಜನವರಿ 22 ರಿಂದ ಇಂಗ್ಲೆಂಡ್ ವಿರುದ್ಧ ಐದು ಪಂದ್ಯಗಳ ಟಿ20 ಸರಣಿ ಆಡಲಿದೆ. ಈ ಸರಣಿಯ ವೇಳೆ ಎಲ್ಲರ ಕಣ್ಣು ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಬ್ಯಾಟರ್‌ ಸೂರ್ಯಕುಮಾರ್ ಯಾದವ್ ಅವರ ಮೇಲೆ ನೆಟ್ಟಿರಲಿದೆ.

ಸೂರ್ಯಕುಮಾರ್ ಯಾದವ್ ಟೀಮ್ ಇಂಡಿಯಾದ ನಾಯಕರಾಗಿ ಈಗ ಮೈದಾನ ಪ್ರವೇಶಿಸಲಿದ್ದಾರೆ. ಇಂಗ್ಲೆಂಡ್ ವಿರುದ್ಧ ಸೂರ್ಯಕುಮಾರ್ ಯಾದವ್ ಉತ್ತಮ ಅಂಕಿ ಅಂಶಗಳನ್ನು ಹೊಂದಿದ್ದಾರೆ. ಇವರು 2024ರಲ್ಲಿ ಕಂಡುಕೊಂಡಿದ್ದ ಫಾರ್ಮ್‌ ಮುಂದುವರೆಸುವ ಪ್ಲ್ಯಾನ್‌ನಲ್ಲಿದ್ದಾರೆ. ವರ್ಷದ ಮೊದಲ ಟಿ20 ಪಂದ್ಯದಲ್ಲಿ ಅಬ್ಬರಿಸಲು ಪೂರ್ಣ ತಯಾರಿ ನಡೆಸಿದ್ದಾರೆ.

Suryakumar Yadav to Lead India in T20 Series Against England

ಹೇಗಿದೆ ಸೂರ್ಯ ದಾಖಲೆ

ಸೂರ್ಯಕುಮಾರ್ ಯಾದವ್ ಅವರಿಗೆ ಇಂಗ್ಲೆಂಡ್ ವಿರುದ್ಧ ಬ್ಯಾಟಿಂಗ್ ಮಾಡುವುದು ಎಂದರೆ ಅಚ್ಚುಮೆಚ್ಚು. ಈಗಾಗಲೇ ಇವರು ಇಂಗ್ಲೆಂಡ್ ವಿರುದ್ಧ 8 ಪಂದ್ಯಗಳ 7 ಇನಿಂಗ್ಸ್‌ಗಳಲ್ಲಿ 321 ರನ್‌ ಸಿಡಿಸಿದ್ದಾರೆ. ಈ ವೇಳೆ ಇವರ ಸರಾಸರಿಯಲ್ಲಿ 45.85 ಆಗಿದೆ. ಈ ವೇಳೆ ಒಂದು ಶತಕ ಹಾಗೂ ಒಂದು ಅರ್ಧಶತಕ ಸಿಡಿಸಿದ್ದಾರೆ. ಇನ್ನು ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಸೂರ್ಯಕುಮಾರ್ ಯಾದವ್ ಅವರ ಸ್ಟ್ರೈಕ್‌ ರೇಟ್‌ ಅಮೋಘವಾಗಿದೆ. ಇಂಗ್ಲೆಂಡ್ ವಿರುದ್ಧ ಸೂರ್ಯ 117 ರನ್‌ಗಳ ಅಮೋಘ ಇನಿಂಗ್ಸ್‌ ಕಟ್ಟಿ ಎಲ್ಲರ ಚಿತ್ತ ಕದ್ದಿದ್ದಾರೆ.

ಭಾರತದಲ್ಲೂ ಸೂರ್ಯ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿರುವ ಆಟಗಾರ. ಅವರು ತಮ್ಮ ವೃತ್ತಿ ಜೀವನದಲ್ಲಿ 78 ಟಿ20 ಪಂದ್ಯಗಳನ್ನು ಆಡಿದ್ದು, ಇದರಲ್ಲಿ 29 ಪಂದ್ಯಗಳನ್ನು ಭಾರತದಲ್ಲೇ ಆಡಿದ್ದಾರೆ. ತವರಿನಲ್ಲೂ ಸೂರ್ಯ ಅವರ ಅಂಕಿ ಅಂಶ ಅಮೋಘವಾಗಿದೆ. ಸೂರ್ಯ ಭಾರತದಲ್ಲಿ ನಡೆದ ಟಿ20 ಟೂರ್ನಿಗಳಲ್ಲಿ 42.33 ಸರಾಸರಿಯಲ್ಲಿ ಒಟ್ಟು 1016 ರನ್ ಗಳಿಸಿದ್ದಾರೆ. ಈ ವೇಳೆ ಅವರ ಸ್ಟ್ರೈಕ್‌ ರೇಟ್‌ 170 ಆಗಿದೆ. ಭಾರತದಲ್ಲಿ ಸೂರ್ಯ 1 ಶತಕ ಹಾಗೂ 9 ಅರ್ಧಶತಕಗಳನ್ನು ಗಳಿಸಿದ್ದಾರೆ. ಸೂರ್ಯ ಅವರ ಫಾರ್ಮ್‌ ನಿಜಕ್ಕೂ ಇಂಗ್ಲೆಂಡ್ ತಂಡದ ತಲೆ ನೋವು ಹೆಚ್ಚಿಸಿದೆ.

Suryakumar Yadav to Lead India in T20 Series Against England

147 ರನ್‌ ಬಾರಿಸಿದರೆ ದಾಖಲೆ

ಟಿ20 ಫಾರ್ಮೆಟ್‌ನಲ್ಲಿ ಸೂರ್ಯಕುಮಾರ್ ಯಾದವ್‌ ಯಾರೇ ಎದುರಾಳಿ ಇದ್ದರೂ ಅಬ್ಬರದ ಬ್ಯಾಟಿಂಗ್ ನಡೆಸಿ ತಂಡದ ರನ್‌ ವೇಗಕ್ಕೆ ಚುರುಕು ಮುಟ್ಟಿಸಬಲ್ಲ ಆಟಗಾರ. ಈ ಟೂರ್ನಿಯಲ್ಲಿ ಇವರು ಹಲವು ದಾಖಲೆಗಳನ್ನು ನಿರ್ಮಿಸುವ ಸುವರ್ಣ ಅವಕಾಶವನ್ನು ಹೊಂದಿದ್ದಾರೆ. ಪ್ರಸಕ್ತ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಸೂರ್ಯ 147 ರನ್‌ ಬಾರಿಸಿ ರೋಹಿತ್ ಶರ್ಮಾ ಅವರ ದಾಖಲೆ ಅಳಿಸುವ ಪ್ಲ್ಯಾನ್ ಮಾಡಿಕೊಂಡಿದ್ದಾರೆ. ರೋಹಿತ್‌ ಇಂಗ್ಲೆಂಡ್ ವಿರುದ್ಧ ಚುಟುಕು ಫಾರ್ಮೆಟ್‌ನಲ್ಲಿ 467 ರನ್‌ ಸಿಡಿಸಿದ್ದಾರೆ. ಇವರಿಗಿಂತಲೂ ಮೊದಲು ಸ್ಥಾನ ವಿರಾಟ್ ಕೊಹ್ಲಿ (648 ರನ್‌) ಇದ್ದಾರೆ.

Story first published: Saturday, January 18, 2025, 23:30 [IST]
Other articles published on Jan 18, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+