Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಸರ್ಫರಾಜ್‌ ಖಾನ್‌ ನಾಯಕತ್ವದಲ್ಲಿ ಆಡಲಿದ್ದಾರೆ ಸೂರ್ಯಕುಮಾರ್ ಯಾದವ್

ಟೀಮ್ ಇಂಡಿಯಾ ಶ್ರೀಲಂಕಾ ಪ್ರವಾಸವನ್ನು ಮುಗಿಸಿದೆ. ಈ ಪ್ರವಾಸದಲ್ಲಿ ಟೀಮ್ ಇಂಡಿಯಾ ಟಿ20 ಸರಣಿಯಲ್ಲಿ ಅಮೋಘ ಪ್ರದರ್ಶನ ನೀಡಿ ಪ್ರಶಸ್ತಿಯನ್ನು ಗೆದ್ದು ಕೊಂಡಿದೆ. ಈ ವೇಳೆ ಟೀಮ್ ಇಂಡಿಯಾವನ್ನು ಭಾರತದ ಅನುಭವಿ ಆಟಗಾರ ಸೂರ್ಯಕುಮಾರ್ ಯಾದವ್ ಮುನ್ನಡೆಸಿದ್ದರು. ಇವರು ನಾಯಕತ್ವದಲ್ಲಿ ಟೀಮ್ ಇಂಡಿಯಾ, ಲಂಕಾ ಪ್ರವಾಸದಲ್ಲಿ ಭರ್ಜರಿ ಪ್ರದರ್ಶನ ನೀಡಿದೆ.

ಲಂಕಾ ಪ್ರವಾಸಕ್ಕೂ ಮುನ್ನ ಟೀಮ್ ಇಂಡಿಯಾ ನಾಯಕತ್ವ ಯಾರಿಗೆ ಎಂಬ ಪ್ರಶ್ನೆಗಳು ಎದ್ದಿದ್ದವು. ಆಗ, ಹಾರ್ದಿಕ್‌ ಪಾಂಡ್ಯ ಅವರ ಹೆಸರು ಮುಂಚೂಣಿಯಲ್ಲಿತ್ತು. ಸೂರ್ಯಕುಮಾರ್‌ ಯಾದವ್ ಆಯ್ಕೆದಾರರ ಹಾಗೂ ಕೋಚ್‌ ಗೌತಮ್‌ ಗಂಭೀರ್‌ರ ಮೊದಲ ಆಯ್ಕೆಯ ನಾಯಕನಾಗಿ ಹೊರ ಹೊಮ್ಮಿದರು. ತಮ್ಮ ಮೇಲೆ ಟೀಮ್ ಮ್ಯಾನೇಜ್ಮೆಂಟ್ ಇಟ್ಟ ನಂಬಿಕೆಗೆ ಪೂರಕವಾಗಿ ಸೂರ್ಯ ಪ್ರದರ್ಶನ ನೀಡಿದ್ದಾರೆ. ಈಗ ಬರುವ ಮಾಹಿತಿಯ ಪ್ರಕಾರ ಸೂರ್ಯಕುಮಾರ್ ಯಾದವ್‌ ಅವರು ಸರ್ಫರಾಜ್‌ ಖಾನ ನಾಯಕತ್ವದಲ್ಲಿ ಆಡುವ ಸಾಧ್ಯತೆ ಇದೆ.

Suryakumar Yadav to Play in Buchi Babu Tournament Under Sarfaraz Khan s Captaincy

ಟೆಸ್ಟ್‌ ತಂಡದ ಮೇಲೆ ಸೂರ್ಯ ಕಣ್ಣು

ಸರ್ಫರಾಜ್‌ ಖಾನ್‌ ಸದ್ಯ ಟೀಮ್ ಇಂಡಿಯಾದ ಸೀಮಿತ ಓವರ್‌ಗಳಲ್ಲಿ ತಮ್ಮ ಸ್ಥಾನವನ್ನು ಭದ್ರ ಪಡಿಸಿಕೊಂಡಿದ್ದಾರೆ. ಇವರಿಗೆ ಟೆಸ್ಟ್ ತಂಡದಲ್ಲಿ ಸ್ಥಾನವನ್ನು ಭದ್ರ ಪಡಿಸಿಕೊಳ್ಳುವ ಆಸೆ. ಹೀಗಾಗಿ ಅವರು ದೇಶೀಯ ಟೂರ್ನಿಯಲ್ಲಿ ಆಡಲು ಸಿದ್ಧತೆ ನಡೆಸಿದ್ದಾರೆ. ಈ ಮೂಲಕ ರೆಡ್‌ ಬೌಲ್‌ ಕ್ರಿಕೆಟ್‌ಗೆ ಭರ್ಜರಿ ಕಮ್‌ಬ್ಯಾಕ್‌ ಮಾಡುವ ಕನಸು ಸ್ಕೈ ಅವರದ್ದಾಗಿದೆ.

ಅಜಿಂಕ್ಯ ರಹಾನೆ ಅನುಪಸ್ಥಿತಿ

ಮುಂಬೈ ತಂಡವನ್ನು ಅಜಿಂಕ್ಯ ರಹಾನೆ ಅವರು ಸಾಮಾನ್ಯವಾಗಿ ಮುನ್ನಡೆಸುತ್ತಾರೆ. ಸದ್ಯ ಅಜಿಂಕ್ಯ ರಹಾನೆ ಅವರು ಇಂಗ್ಲೆಂಡ್‌ನಲ್ಲಿ ಕೌಂಟಿ ಕ್ರಿಕೆಟ್‌ ಆಡುವಲ್ಲಿ ಬ್ಯೂಸಿ ಆಗಿದ್ದಾರೆ. ಹೀಗಾಗಿ ಈ ಬಾರಿ ಮುಂಬೈ ತಂಡವನ್ನು ಟೀಮ್ ಇಂಡಿಯಾ ಯುವ ಮಧ್ಯಮ ಕ್ರಮಾಂಕದ ಬ್ಯಾಟರ್‌ ಸರ್ಫರಾಜ್‌ ಖಾನ್‌ ಮುನ್ನಡೆಸಲಿದ್ದಾರೆ. ಇವರ ನಾಯಕತ್ವದಲ್ಲಿ ಸೂರ್ಯಕುಮಾರ್ ಯಾದವ್ ಆಡುವುದನ್ನು ಕಾಣಬಹುದಾಗಿದೆ.

Suryakumar Yadav to Play in Buchi Babu Tournament Under Sarfaraz Khan s Captaincy

ವರದಿಯ ಪ್ರಕಾರ ಸೂರ್ಯಕುಮಾರ್ ಯಾದವ್ ಅವರು ದೇಶೀಯ ಬುಚ್ಚಿ ಬಾಬು ಕ್ರಿಕೆಟ್‌ ಟೂರ್ನಿಯಲ್ಲಿ ಆಡುವ ಇಂಗಿತವನ್ನು ವ್ಯಕ್ತ ಪಡಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಈ ವರದಿಗಳೇ ನಿಜವಾದಲ್ಲಿ ಟೀಮ್ ಇಂಡಿಯಾದ ನಾಯಕ ಸೂರ್ಯಕುಮಾರ್ ಯಾದವ್ ಅವರು ಸರ್ಫರಾಜ್‌ ಖಾನ್‌ ನಾಯಕತ್ವದಲ್ಲಿ ಆಡುವದನ್ನು ಕಾಣಬಹುದಾಗಿದೆ.

ಮುಂಬೈ ತಂಡದ ಆಯ್ಕೆಗಾಗಿ ತಾವು ಲಭ್ಯ ಇರುವುದಾಗಿ ಸೂರ್ಯಕುಮಾರ್ ಯಾದವ್ ತಿಳಿಸಿದ್ದಾರೆ. ಬುಚ್ಚಿ ಬಾಬು ಟೂರ್ನಿಯ ಆರಂಭಿಕ ಪಂದ್ಯಗಳನ್ನು ಹೊರತು ಪಡಿಸಿದರೆ ಉಳಿದ ಪಂದ್ಯಗಳಿಗೆ ತಾವು ಲಭ್ಯ ಎಂದು ಸ್ಕೈ ತಿಳಿಸಿದ್ದಾರೆ. ಈ ಟೂರ್ನಿಯ ಆಗಸ್ಟ್‌ ಕೊನೆಯಲ್ಲಿ ಮುಕ್ತಾಯವಾಗಲಿದೆ. ಬುಚಿ ಬಾಬು ಟೂರ್ನಿಯ ನಂತರ ಅನಂತ್ ಪುರದಲ್ಲಿ ದುಲೀಪ್‌ ಟ್ರೋಫಿ ನಡೆಯಲಿದೆ.

ದೇಶೀಯ ಟೂರ್ನಿಯಲ್ಲಿ ಹೇಗಿದೆ ಸೂರ್ಯಕುಮಾರ್ ಪ್ರದರ್ಶನ

ಸೂರ್ಯಕುಮಾರ್ ಯಾದವ್ ತಮ್ಮ ತಾವು ಭಾರತದ ಪರ ಮೂರು ಫಾರ್ಮೆಟ್‌ಗಳನ್ನು ಆಡಬಲ್ಲ ಪ್ಲೇಯರ್‌ ಎಂದು ನೋಡಲು ಬಯಸುತ್ತಾರೆ. ಸೂರ್ಯಕುಮಾರ್‌ ಕೊನೆಯದಾಗಿ 2023ರಲ್ಲಿ ದೇಶೀಯ ಟೂರ್ನಿಯಲ್ಲಿ ಆಡಿದ್ದರು. ಒಟ್ಟಾರೆ ಇವರು 82 ಪಂದ್ಯಗಳಲ್ಲಿ 5628 ರನ್‌ ಸಿಡಿಸಿದ್ದಾರೆ. ಇದರಲ್ಲಿ 29 ಅರ್ಧಶತಕ ಹಾಗೂ 14 ಶತಕಗಳು ಸೇರಿವೆ.

Story first published: Saturday, August 10, 2024, 7:31 [IST]
Other articles published on Aug 10, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+