Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಸರಣಿ ಸೋಲದಿದ್ದರೂ ನಾಯಕತ್ವ ಕಳೆದುಕೊಳ್ತಾರಾ ಸೂರ್ಯ? ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನ ಬಿಸಿಸಿಐ ಮಾಸ್ಟರ್ ಪ್ಲ್ಯಾನ್‌

ಲಯ ಇಲ್ಲದಿದ್ದರೆ ಟೀಮ್ ಇಂಡಿಯಾದಲ್ಲಿ ಸ್ಥಾನ ಉಳಿಸಿಕೊಳ್ಳುವುದು ಕಷ್ಟವಾಗಿದೆ. ಟೀಮ್ ಇಂಡಿಯಾಕ್ಕೆ ಮೂರನೇ ಬಾರಿ ಟಿ20 ವಿಶ್ವಕಪ್‌ ಗೆಲ್ಲಿಸಿಕೊಟ್ಟ ನಾಯಕ ಸೂರ್ಯಕುಮಾರ್ ಯಾದವ್, ಈಗ ತಮ್ಮ ನಾಯಕತ್ವವನ್ನು ತ್ಯಜಿಸುವ ಸಾಧ್ಯತೆ ದಟ್ಟವಾಗಿದೆ. ಟಿ20 ವಿಶ್ವಕಪ್‌ ಹಾಗೂ ಐಪಿಎಲ್‌ನಲ್ಲಿ ಸೂರ್ಯಕುಮಾರ್‌ ಯಾದವ್ ರನ್‌ ಕಲೆ ಹಾಕುವಲ್ಲಿ ವಿಫಲವಾಗಿದ್ದರು. ಹೀಗಾಗಿ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಹೊಸ ನಾಯಕನ ಹುಡುಕಾಟದಲ್ಲಿದೆ. ನಾಯಕನ ಸ್ಥಾನದ ಮೇಲೆ ಶ್ರೇಯಸ್ ಅಯ್ಯರ್ ಸೇರಿದಂತೆ ಹಲವು ಆಟಗಾರರು ಕಣ್ಣು ನೆಟ್ಟಿದ್ದಾರೆ.

ಬಿಸಿಸಿಐ ಇನ್ನೇನು ಕೆಲವೇ ದಿನಗಳಲ್ಲಿ ಇಂಗ್ಲೆಂಡ್‌ ಪ್ರವಾಸ ಕೈಗೊಳ್ಳಲಿರುವ ಭಾರತ ತಂಡವನ್ನು ಪ್ರಕಟಿಸುವ ಸಾಧ್ಯತೆ ಇದೆ. ಈ ಪ್ರವಾಸದಲ್ಲಿ ಟಿ20 ಸರಣಿ ಸಹ ನಡೆಯಲಿದ್ದು, ಇದಕ್ಕಾಗಿಯೂ ಬಿಸಿಸಿಐ ತಂಡವನ್ನು ಪ್ರಕಟಿಸಲಿದೆ. ಸೂರ್ಯಕುಮಾರ್ ಯಾದವ್ ಅವರನ್ನು ನಾಯಕತ್ವದ ಜವಾಬ್ದಾರಿಯಿಂದ ತೆಗೆದುಹಾಕಲಾಗುವುದು ಮಾತ್ರವಲ್ಲದೆ, ತಂಡದಲ್ಲಿ ಅವರ ಸ್ಥಾನವೂ ಅನಿಶ್ಚಿತವಾಗಿಯೇ ಉಳಿದಿದೆ.

Suryakumar Yadav

ಶ್ರೇಯಸ್ ಅಯ್ಯರ್ ಮತ್ತು ತಿಲಕ್ ವರ್ಮಾ ಕೂಡ ನಾಯಕರಾಗುವ ರೇಸ್‌ನಲ್ಲಿದ್ದಾರೆ. ಸೂರ್ಯಕುಮಾರ್ ಯಾದವ್ ಅವರ ಸ್ಥಾನವನ್ನು ತುಂಬಲು ಶ್ರೇಯಸ್ ಅಯ್ಯರ್ ತುದಿಗಾಲಿನಲ್ಲಿ ನಿಂತಿದ್ದಾರೆ. ಅಲ್ಲದೆ ಮಧ್ಯಮ ಕ್ರಮಾಂಕದ ಭರವಸೆಯ ಆಟಗಾರ ತಿಲಕ್ ವರ್ಮಾ ಸಹ ಮತ್ತೊಂದು ಆಯ್ಕೆ ಆಗಿದ್ದಾರೆ. ಶ್ರೇಯಸ್ ಅಯ್ಯರ್ ಗಾಯದಿಂದಾಗಿ 2026 ರ ಟಿ20 ವಿಶ್ವಕಪ್ ಅನ್ನು ತಪ್ಪಿಸಿಕೊಂಡರೂ, ಈ ಸ್ವರೂಪದಲ್ಲಿ ಅವರು ಭರ್ಜರಿ ದಾಖಲೆಯನ್ನು ಹೊಂದಿದ್ದಾರೆ. ಇನ್ನು ತಿಲಕ್ ವರ್ಮಾ ಕೆಲವು ಪಂದ್ಯಗಳಲ್ಲಿ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಮಾಡಿ ಏಕಾಂಗಿಯಾಗಿ ಪಂದ್ಯವನ್ನು ಗೆಲ್ಲಿಸಿದ್ದಾರೆ. ಇವರ ಈ ಪರಿಶ್ರಮಕ್ಕೆ ಫಲವೂ ಸಿಗುವ ಸಾಧ್ಯತೆ ಇದೆ.

ರಾಜಸ್ಥಾನ್ ರಾಯಲ್ಸ್‌ನ ವೈಭವ್ ಸೂರ್ಯವಂಶಿ ಸಾಧನೆ ಬೆನ್ನತ್ತಿದ ಐಐಎಂ

ರಾಜಸ್ಥಾನ್ ರಾಯಲ್ಸ್‌ನ ವೈಭವ್ ಸೂರ್ಯವಂಶಿ ಸಾಧನೆ ಬೆನ್ನತ್ತಿದ ಐಐಎಂ

ನಾಯಕನಾಗಿ ಸೂರ್ಯ ಬ್ಯಾಟಿಂಗ್ ಸಾಧನೆ

ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ನಾಯಕನಾಗಿ ಸೂರ್ಯಕುಮಾರ್ ಯಾದವ್ ಅವರ ಫಾರ್ಮ್‌ ಚಿಂತೆಯನ್ನು ಹೆಚ್ಚಿಸಿದೆ. ಇವರು ಆಡಿದ 52 ಪಂದ್ಯಗಳ 49 ಇನ್ನಿಂಗ್ಸ್‌ಗಳಲ್ಲಿ 28.65 ರ ಸರಾಸರಿಯಲ್ಲಿ 1232 ರನ್ ಗಳಿಸಿದ್ದಾರೆ ಮತ್ತು ಅವರ ಸ್ಟ್ರೈಕ್ ರೇಟ್ 154.96 ಆಗಿದೆ. ನಾಯಕನಾಗಿ, ಸೂರ್ಯಕುಮಾರ್ ಯಾದವ್ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಒಂದು ಶತಕ ಮತ್ತು 8 ಅರ್ಧಶತಕ ಬಾರಿಸಿದ್ದಾರೆ.

ಒಂದೇ ಒಂದು ಸರಣಿ ಸೋಲದ ನಾಯಕ

2024 ರ ಟಿ20 ವಿಶ್ವಕಪ್ ನಂತರ, ರೋಹಿತ್ ಶರ್ಮಾ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಿಂದ ನಿವೃತ್ತರಾದ ನಂತರ, ಸೂರ್ಯಕುಮಾರ್ ಯಾದವ್ ಅವರನ್ನು ಟಿ20 ಅಂತಾರಾಷ್ಟ್ರೀಯ ಪಂದ್ಯಗಳಿಗೆ ನಾಯಕರನ್ನಾಗಿ ನೇಮಿಸಲಾಯಿತು. ಅದಕ್ಕೂ ಮೊದಲು, ರೋಹಿತ್ ಅನುಪಸ್ಥಿತಿಯಲ್ಲಿ ಸೂರ್ಯ ಏಳು ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸಿದ್ದರು.

Suryakumar Yadav

ಸೂರ್ಯ ಕುಮಾರ್ ಯಾದವ್ ನಾಯಕತ್ವದಲ್ಲಿ ಟೀಮ್ ಇಂಡಿಯಾ ಒಂದೇ ಒಂದು ಸರಣಿಯನ್ನು ಸೋತಿಲ್ಲ. ಸೂರ್ಯ ಅವರ ನಾಯಕತ್ವದಲ್ಲಿ, ಭಾರತ ತಂಡ ಒಟ್ಟು 52 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದು, 42 ಗೆದ್ದಿದೆ, ಕೇವಲ ಎಂಟು ಪಂದ್ಯಗಳನ್ನು ಸೋತಿದೆ. ಬ್ಯಾಟರ್‌ ಆಗಿ ಸೂರ್ಯ ಕಮಾಲ್‌ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ. ಆದರೆ ನಾಯಕರಾಗಿ ಸೂರ್ಯ ಅವರ ಸಾಧನೆ ಅಮೋಘ.

IPL 2026: ಕೆಎಲ್‌ ರಾಹುಲ್‌, ದೇವದತ್ ಪಡಿಕ್ಕಲ್‌ ಮಿಂಚು, ಯಶ್‌ ರಾಜ್ ಭರವಸೆ; ಇಲ್ಲಿದೆ ಐಪಿಎಲ್‌ನಲ್ಲಿ ಕನ್ನಡಿಗರ ಸಾಧನೆಯ ವರದಿ

IPL 2026: ಕೆಎಲ್‌ ರಾಹುಲ್‌, ದೇವದತ್ ಪಡಿಕ್ಕಲ್‌ ಮಿಂಚು, ಯಶ್‌ ರಾಜ್ ಭರವಸೆ; ಇಲ್ಲಿದೆ ಐಪಿಎಲ್‌ನಲ್ಲಿ ಕನ್ನಡಿಗರ ಸಾಧನೆಯ ವರದಿ

ಸೂರ್ಯ ಸಾಧನೆ

35 ವರ್ಷ ಸೂರ್ಯಕುಮಾರ್ ಯಾದವ್ ಟೀಮ್‌ ಇಂಡಿಯಾದ ಸ್ಫೋಟಕ ಬ್ಯಾಟರ್. ಇವರು ಭಾರತದ ಪರ 113 ಟಿ20 ಪಂದ್ಯಗಳನ್ನು ಆಡಿದ್ದು, 36ರ ಸರಾಸರಿಯಲ್ಲಿ 3272 ರನ್‌ ಕಲೆ ಹಾಕಿದ್ದಾರೆ. ಇದರಲ್ಲಿ 4 ಶತಕ ಹಾಗೂ 25 ಅರ್ಧಶತಕಗಳು ಸೇರಿವೆ. ಇವರು ಭಾರತದ ಪರ ಒಂದು ಟೆಸ್ಟ್‌, 37 ಏಕದಿನ ಪಂದ್ಯಗಳನ್ನು ಆಡಿದ್ದಾರೆ.

Story first published: Thursday, June 4, 2026, 6:35 [IST]
Other articles published on Jun 4, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+