ಮುಂಬೈ ಇಂಡಿಯನ್ಸ್ ಅನ್‌ಫಾಲೋ ಮಾಡಿ, ಹಳೇ ತಂಡದೆಡೆ ಮುಖ ಮಾಡ್ತಾರಾ ಸೂರ್ಯಕುಮಾರ್ ಯಾದವ್?
ಭಾರತಕ್ಕೆ ಟಿ20 ವಿಶ್ವಕಪ್ ತೊಡಿಸಿದ ನಾಯಕ ಸೂರ್ಯಕುಮಾರ್ ಯಾದವ್ ಸಮಯ ಈಗ ಸರಿಯಿಲ್ಲ. ಇಂಗ್ಲೆಂಡ್ ಹಾಗೂ ಐರ್ಲೆಂಡ್ ಪ್ರವಾಸದಲ್ಲಿ ಇವರನ್ನು ತಂಡದಿಂದ ಕೈ ಬಿಡಲಾಗಿದೆ. ನಾಯಕತ್ವ ಕಳೆದುಕೊಂಡಿದ್ದು ಅಷ್ಟೇ ಅಲ್ಲ, ತಂಡದಲ್ಲೂ ಸ್ಥಾನ ಪಡೆಯುವಲ್ಲಿ ವಿಫಲವಾಗಿದ್ದಾರೆ. ಈ ಎರಡು ಸುದ್ದಿಗಳ ನಡುವೆ ಈಗ ಮತ್ತೊಂದು ಸುದ್ದಿ ಹೊರ ಬರುತ್ತಿದೆ. ಸೂರ್ಯಕುಮಾರ್ ಯಾದವ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಸಂಬಂಧ ಕೊನೆಗೊಳ್ಳಲಿದೆಯಾ? ಎಂಬ ಪ್ರಶ್ನೆ ಮೂಡುವಂತೆ ಮಾಡಿದೆ.
ಮುಂಬೈ ಇಂಡಿಯನ್ಸ್ ತಂಡದ ಭರವಸೆಯ ಆಟಗಾರ ಸೂರ್ಯಕುಮಾರ್ ಯಾದವ್ ಇತ್ತೀಚೆಗೆ ಇನ್‌ಸ್ಟಾಗ್ರಾಮ್‌ನಲ್ಲಿ ಮುಂಬೈ ಇಂಡಿಯನ್ಸ್ ಅನ್ನು ಅನ್‌ಫಾಲೋ ಮಾಡಿದ್ದಾರೆ ಎಂದು ವರದಿಯಾಗಿದೆ. ಇದರ ಹೊರತಾಗಿ, ಅವರ ಪ್ರೊಫೈಲ್ ಮುಂಬೈ ಇಂಡಿಯನ್ಸ್ ಜೆರ್ಸಿಯಲ್ಲಿ ಫೋಟೋಗಳನ್ನು ಸಹ ತೆಗೆದುಹಾಕಿದ್ದಾರೆ ಎಂದು ಅಭಿಮಾನಿಗಳು ಗಮನಿಸಿದ್ದಾರೆ. ಹೀಗಾಗಿ ಮುಂದಿನ ಐಪಿಎಲ್ ಆವೃತ್ತಿಯಲ್ಲಿ ಸೂರ್ಯಕುಮಾರ್ ಯಾದವ್ ಮುಂಬೈ ಇಂಡಿಯನ್ಸ್ ಪರ ಕಣಕ್ಕೆ ಇಳಿಯುತ್ತಾರೋ ಇಲ್ಲವೋ ಎಂಬ ಚರ್ಚೆಗಳು ಆರಂಭವಾಗಿದೆ.

ಆದರೆ ಸೂರ್ಯಕುಮಾರ್ ಯಾದವ್ ಅವರ ಪತ್ನಿ ದೇವಿಶಾ ಶೆಟ್ಟಿ ಇನ್ನು ಮುಂಬೈ ಇಂಡಿಯನ್ಸ್ ತಂಡವನ್ನು ಫಾಲೋ ಮಾಡ್ತಿದ್ದಾರೆ ಎಂದು ತಿಳಿದು ಬಂದಿದೆ. ಈ ವಿಷಯದಲ್ಲಿ ಫ್ರಾಂಚೈಸಿ ಅಥವಾ ಸೂರ್ಯಕುಮಾರ್ ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ.
19ನೇ ಆವೃತ್ತಿಯ ಐಪಿಎಲ್ ಹರಾಜಿಗೆ ಮೊದಲು ಮುಂಬೈ ಇಂಡಿಯನ್ಸ್ 16.25 ಕೋಟಿ ನೀಡಿ ಸೂರ್ಯಕುಮಾರ್ ಯಾದವ್ ಅವರನ್ನು ತಂಡದಲ್ಲಿ ಉಳಿಸಿಕೊಂಡಿತ್ತು. ಅವರು 2018 ರಿಂದ ಮುಂಬೈ ತಂಡದ ಮಧ್ಯಮ ಕ್ರಮಾಂಕದ ಬೆನ್ನೆಲುಬಾಗಿದ್ದಾರೆ. ಈಗ ಸೂರ್ಯಕುಮಾರ್ ಫ್ರಾಂಚೈಸಿಯನ್ನು ತೊರೆಯಲು ನಿರ್ಧರಿಸಿದ್ದಾರೆ ಎನ್ನಾಗಿಲಿದೆ.
ಸೂರ್ಯ ಮುಂದಿನ ನಡೆ ಏನು?
ಮಾಧ್ಯಮ ವರದಿಗಳ ಪ್ರಕಾರ, ಸೂರ್ಯಕುಮಾರ್ ಅವರ ಹಳೆಯ ತಂಡ ಕೋಲ್ಕತ್ತಾ ನೈಟ್ ರೈಡರ್ಸ್ ಸೇರಬಹುದು ಎಂದು ತಿಳಿಸಿವೆ. ಕೆಕೆಆರ್‌ಗೆ ಅನುಭವಿ ಭಾರತೀಯ ಬ್ಯಾಟ್ಸ್‌ಮನ್ ಮತ್ತು ನಾಯಕನ ಅಗತ್ಯವಿದೆ. ಆದ್ದರಿಂದ, ಸೂರ್ಯಕುಮಾರ್ ಮತ್ತೆ ತಂಡವನ್ನು ಸೇರುವ ಸಾಧ್ಯತೆ ಇದೆ. ಇದರ ಹೊರತಾಗಿ, ಚೆನ್ನೈ ಸೂಪರ್ ಕಿಂಗ್ಸ್ ಕೂಡ ಅವರ ಮೇಲೆ ಕಣ್ಣಿಟ್ಟಿದೆ ಎಂದು ಹೇಳಲಾಗುತ್ತದೆ. ಅನುಭವಿ ಆಟಗಾರರಿಗೆ ಅವಕಾಶಗಳನ್ನು ನೀಡಲು ಹೆಸರುವಾಸಿಯಾದ ಸಿಎಸ್‌ಕೆಗೆ ಮಧ್ಯಮ ಕ್ರಮಾಂಕದಲ್ಲಿ ವಿಶ್ವಾಸಾರ್ಹ ಭಾರತೀಯ ಬ್ಯಾಟ್ಸ್‌ಮನ್ ಹುಡುಕಾಟದಲ್ಲಿದೆ.
ಐಪಿಎಲ್‌ನಲ್ಲಿ ಸೂರ್ಯ ಸಾಧನೆ
ಸೂರ್ಯಕುಮಾರ್ ಯಾದವ್ 2011 ರಲ್ಲಿ ಮುಂಬೈ ಇಂಡಿಯನ್ಸ್‌ನೊಂದಿಗೆ ಆಡಿದ್ದರು. ಆದರೆ ಅವರಿಗೆ ಆ ಆವೃತ್ತಿಯಲ್ಲಿ ದೊಡ್ಡ ಅವಕಾಶಗಳು ಸಿಗಲಿಲ್ಲ. ಅವರು ಕೆಕೆಆರ್ ತಂಡದತ್ತ ಮುಖ ಮಾಡಿದರು. 2018ರಲ್ಲಿ ಇವರು ಮತ್ತೆ ತವರು ತಂಡವನ್ನು ಸೇರಿದರು.
ಸೂರ್ಯಕುಮಾರ್ ಯಾದವ್ ಇಲ್ಲಿಯವರೆಗೆ ಮುಂಬೈ ಪರ 127 ಪಂದ್ಯಗಳಲ್ಲಿ 4,020 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ, ಅವರು ಎರಡು ಶತಕಗಳು ಹಾಗೂ ಹಲವು ಸ್ಮರಣೀಯ ಪಂದ್ಯಗಳನ್ನು ಆಡಿದ್ದಾರೆ. ಇನ್ನು ಕೆಕೆಆರ್ ಪರ ಸೂರ್ಯ 60 ಪಂದ್ಯಗಳಲ್ಲಿ 684 ರನ್ ಗಳಿಸಿದ್ದರು.
ಐಪಿಎಲ್ 2026ರಲ್ಲಿ ಸೂರ್ಯಕುಮಾರ್ ಯಾದವ್ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ. ಇವರು ಆಡಿದ 13 ಪಂದ್ಯಗಳಲ್ಲಿ ಕೇವಲ 270 ರನ್ ಸಿಡಿಸಿದ್ದಾರೆ. ಇದರಲ್ಲಿ 2 ಅರ್ಧಶತಕ ಸೇರಿವೆ.
ಇನ್ನೂ ಅಧಿಕೃತ ಘೋಷಣೆ ಇಲ್ಲ
ಸೂರ್ಯಕುಮಾರ್ ಯಾದವ್ ಮುಂಬೈ ಇಂಡಿಯನ್ಸ್ ತೊರೆಯುತ್ತಾರೋ ಇಲ್ಲವೋ ಎಂಬುದರ ಕುರಿತು ಯಾವುದೇ ಅಧಿಕೃತ ಮಾಹಿತಿ ಹೊರ ಬಿದ್ದಿಲ್ಲ. ಆದಾಗ್ಯೂ, ಮುಂಬರುವ ಐಪಿಎಲ್‌ಗೆ ಮೊದಲು ದೊಡ್ಡ ನಿರ್ಧಾರದ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications

