Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಸಯ್ಯದ್ ಮುಷ್ತಾಕ್ ಅಲಿ: ಹಿಮಾಚಲ ಪ್ರದೇಶ ಮಣಿಸಿದ ತಮಿಳುನಾಡು

Syed Mushtaq Ali t20, Quarter final 2: Tamil Nadu beat Himachal Pradesh by 5 wickets

ಅಹ್ಮದಾಬಾದ್: ಅಹ್ಮದಾಬಾದ್‌ನ ಸರ್ದಾರ್ ಪಟೇಲ್ ಸ್ಟೇಡಿಯಂನಲ್ಲಿ ನಡೆದ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಕ್ವಾರ್ಟರ್‌ ಫೈನಲ್‌-2 ಪಂದ್ಯದಲ್ಲಿ ಹಿಮಾಚಲ ಪ್ರದೇಶದ ವಿರುದ್ಧ ತಮಿಳುನಾಡು 5 ವಿಕೆಟ್ ಸುಲಭ ಜಯ ಗಳಿಸಿದೆ. ಈ ಗೆಲುವಿನೊಂದಿಗೆ ತಮಿಳುನಾಡು ಸೆಮಿಫೈನಲ್‌ಗೆ ಪ್ರವೇಶಿಸಿದೆ.

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಹಿಮಾಚಲ್‌ ಪ್ರದೇಶ, ಅಭಿಮನ್ಯು ರಾಣಾ 28, ಪ್ರಶಾಂತ್ ಚೋಪ್ರಾ 6, ನಿತಿನ್ ಶರ್ಮಾ 26, ಆರ್‌ಐ ಠಾಕೂರ್ 16, ನಾಯಕ ರಿಷಿ ಧವನ್ 35, ಪಂಕಜ್ ಜೈಸ್ವಾಲ್ 7, ಏಕಾಂತ್ ಸೇನ್ 5 ರನ್ ಸೇರ್ಪಡೆಯೊಂದಿಗೆ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದು 135 ರನ್ ಗಳಿಸಿತು.

ಗುರಿ ಬೆನ್ನಟ್ಟಿದ ತಮಿಳುನಾಡು, ಹರಿ ನಿಶಾಂತ್ 17, ಎನ್‌ ಜಗದೀಶನ್ 7, ಬಾಬಾ ಅಪರಾಜಿತ್ 52, ಸೋನು ಯಾದವ್ 16, ದಿನೇಶ್ ಕಾರ್ತಿಕ್ 2, ಶಾರೂಖ್ ಖಾನ್ ಅಜೇಯ 40 (19 ಎಸೆತ) ರನ್‌ನೊಂದಿಗೆ 17.5 ಓವರ್‌ಗೆ 5 ವಿಕೆಟ್ ಕಳೆದು 141 ರನ್ ಬಾರಿಸಿ ಗೆಲುವನ್ನಾಚರಿಸಿತು.

ಹಿಮಾಚಲ ಇನ್ನಿಂಗ್ಸ್‌ನಲ್ಲಿ ತಮಿಳುನಾಡಿನ ಸಂದೀಪ್ ವಾರಿಯರ್ 2, ಸೋನು ಯಾದವ್ 3, ಸಾಯ್ ಕಿಶೋರ್ 1, ಎಂ ಮೊಹಮ್ಮದ್ 1 ವಿಕೆಟ್‌ನೊಂದಿಗೆ ಮಿಂಚಿದರೆ, ತಮಿಳುನಾಡು ಇನ್ನಿಂಗ್ಸ್‌ನಲ್ಲಿ ಹಿಮಾಚಲ್‌ನ ವೈಭವ್ ಅರೋರ 3, ಪಂಕಜ್ ಜೈಸ್ವಾಲ್ 1, ಮಯಾಂಕ್ ದಾಗರ್ 1 ವಿಕೆಟ್‌ನೊಂದಿಗೆ ಗಮನ ಸೆಳೆದರು.

Story first published: Tuesday, January 26, 2021, 22:52 [IST]
Other articles published on Jan 26, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+