For Quick Alerts
ALLOW NOTIFICATIONS  
For Daily Alerts
 

ಸೈಯದ್ ಮುಷ್ತಾಕ್ ಅಲಿ: ತಮಿಳುನಾಡು ತಂಡದಲ್ಲಿ ಕಾರ್ತಿಕ್, ಶಂಕರ್

Syed Mushtaq Ali Trophy: Karthik, Vijay and Shankar named in Tamil Nadu probables

ಚೆನ್ನೈ: ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಗಾಗಿ ತಮಿಳುನಾಡು ತಂಡ ಪ್ರಕಟಿಸಿರುವ 26 ಮಂದಿಯ ಬಲಿಷ್ಠ ಸಂಭಾವ್ಯ ತಂಡದಲ್ಲಿ ನಿದಹಾಸ್ ಟ್ರೋಫಿ ಫೈನಲ್‌ನಲ್ಲಿ ಭಾರತ ಗೆಲ್ಲಿಸಿಕೊಟ್ಟಿದ್ದ ಹೀರೋ ದಿನೇಶ್ ಕಾರ್ತಿಕ್, ಮುರಳಿ ವಿಜಯ್ ಮತ್ತು ವಿಜಯ್ ಶಂಕರ್ ಸ್ಥಾನ ಪಡೆದಿದ್ದಾರೆ.

ತಮಿಳುನಾಡು ಕ್ರಿಕೆಟ್ ಅಸೋಸಿಯೇಶನ್ (ಟಿಎನ್‌ಸಿಎ) ಪ್ರಕಟಿಸುವ ಆಟಗಾರರ ಪಟ್ಟಿಯಲ್ಲಿ, ಸುಮಾರು 7 ವರ್ಷಗಳ ಬಳಿಕ ತಮಿಳು ನಾಡು ಪರ ಆಡಲು ಮುಂದಾಗಿರುವ ಕೆಬಿ ಕರುಣ್ ಕಾರ್ತಿಕ್, ಕೇರಳ ತಂಡದಿಂದ ತಮಿಳುನಾಡಿಗೆ ಬಂದಿರುವ ಮಧ್ಯಮ ವೇಗಿ ಸಂದೀಪ್ ವಾರಿಯರ್ ಕೂಡ ಸ್ಥಾನ ಪಡೆದುಕೊಂಡಿದ್ದಾರೆ.

ಅನುಭವಿ ಆಫ್‌ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್, ಆಲ್ ರೌಂಡರ್ ವಾಷಿಂಗ್ಟನ್ ಸುಂದರ್, ಎಡಗೈ ವೇಗಿ ಟಿ ನಟರಾಜನ್ ಪ್ರಕಟಿತ ತಂಡದಲ್ಲಿ ಕಾಣಿಸಿಕೊಂಡಿಲ್ಲ. ಇವರೆಲ್ಲ ಸದ್ಯ ರಾಷ್ಟ್ರೀಯ ತಂಡದಲ್ಲಿದ್ದು ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದಾರೆ.

ಸೈಯದ್ ಮುಷ್ತಾಕ್ ಅಲಿ ಟ್ರೋಫಿಗಾಗಿ ತಮಿಳುನಾಡು ಸಂಭಾವ್ಯ ತಂಡ
ದಿನೇಶ್ ಕಾರ್ತಿಕ್, ಎಂ ವಿಜಯ್, ಬಿ ಅಪರಾಜಿತ್, ಬಿ ಇಂದ್ರಜಿತ್, ವಿಜಯ್ ಶಂಕರ್, ಎಂ ಶಾರುಖ್ ಖಾನ್, ಸಿ ಹರಿ ನಿಶಾಂತ್, ಪ್ರದೋಷ್ ರಂಜನ್ ಪಾಲ್, ಕೆ.ಬಿ.ಅರುಣ್ ಕಾರ್ತಿಕ್, ಅಕ್ಷಯ್ ವಿ ಶ್ರೀನಿವಾಸನ್, ಎನ್ ಜಗದೀಸನ್, ಎಂ ಅಭಿನವ್, ಅಸ್ವಿನ್ ಕ್ರಿಸ್ಟ್, ಎಂ ಮೊಹಮ್ಮದ್, ಜಿ ಪೆರಿಯಸಾಮಿ, ಸಂದೀಪ್ ವಾರಿಯರ್, ಎಸ್ ಹರೀಶ್ ಕುಮಾರ್, ಕೆ ವಿಘ್ನೇಶ್, ಆರ್ ಸಿಲಾಂಬರಸನ್, ಜೆ ಕೌಸಿಕ್, ಆರ್ ಸೋನು ಯಾದವ್ ಆರ್ ಸಾಯಿ ಕಿಶೋರ್, ಎಂ ಸಿದ್ಧಾರ್ಥ್, ಎಲ್ ಸತ್ಯನ್ನಾರಾಯಣನ್ ಮತ್ತು ಎಂಇ ಯಾಜ್ ಅರುಣ್ ಮೊಝಿ.

Story first published: Wednesday, December 16, 2020, 23:28 [IST]
Other articles published on Dec 16, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+